ETV Bharat / state

ಹೊಸ ವರ್ಷಾಚರಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ಲಾಡ್ಜ್​ ಸಿಬ್ಬಂದಿಗೆ ಚಾಕು ಇರಿದ ಯುವಕರು - Olive Residency At Banasawadi

ಮಧ್ಯರಾತ್ರಿವರೆಗೂ ಹೊಸ ವರ್ಷದ ಆಚರಣೆ ಮಾಡಿದ ಯುವಕರು 1.30ರ ವೇಳೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಪರಸ್ಪರ ಜಗಳವಾಡಿಕೊಂಡಿದ್ದಾರೆ. ರೂಂನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಲಾಡ್ಜ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.

ಬೆಂಗಳೂರಲ್ಲಿ ವ್ಯಕ್ತಿಗೆ ಚಾಕು ಇರಿತ,  Assault on Residency Supervisor at Banasawadi
ಬೆಂಗಳೂರಲ್ಲಿ ವ್ಯಕ್ತಿಗೆ ಚಾಕು ಇರಿತ
author img

By

Published : Jan 2, 2020, 10:48 PM IST

Updated : Jan 2, 2020, 11:24 PM IST

ಬೆಂಗಳೂರು: ಹೊಸ ವರ್ಷ ಹಿನ್ನೆಲೆ ಯುವಕರು ನಗರದ ಲಾಡ್ಜ್​​ವೊಂದರಲ್ಲಿ ರೂಂ ಬುಕ್​ ಮಾಡಿಕೊಂಡಿದ್ದರು. ಆದರೆ, ಮಧ್ಯರಾತ್ರಿ ಜಗಳ ನಡೆದು ಲಾಡ್ಜ್​ ಸಿಬ್ಬಂದಿ ಮೇಲೆ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿ ಪರಾರಿಯಾದ ಘಟನೆ ಬೆಳಕಿದೆ ಬಂದಿದೆ.

ಬೆಂಗಳೂರಲ್ಲಿ ವ್ಯಕ್ತಿಗೆ ಚಾಕು ಇರಿತ

ಸಂತೋಷ್, ಹರಿ, ಪ್ರಕಾಶ್, ರಂಜೀತ್ ಕುಮಾರ್ ಹಾಗೂ ಸಂಜಯ್ ಎಂಬುವರು ಹೊಸ ವರ್ಷ ಆಚರಣೆಗಾಗಿ ಡೊಡ್ಡ ಬಾಣಸವಾಡಿಯ ಒಲಿವ್ ರೆಸಿಡೆನ್ಸಿಯಲ್ಲಿ ಒಂದು ರಾತ್ರಿಗೆ ರೂಂ ಬುಕ್ ಮಾಡಿದ್ದರಂತೆ. ಅದರಂತೆ ಡಿ. 31ರ ರಾತ್ರಿ ರೂಂಗೆ ಎಲ್ಲರೂ ಆಗಮಿಸಿದ್ದಾರೆ.

ಬೆಂಗಳೂರಲ್ಲಿ ವ್ಯಕ್ತಿಗೆ ಚಾಕು ಇರಿತ,  Assault on Residency Supervisor at Banasawadi
ಬೆಂಗಳೂರಲ್ಲಿ ವ್ಯಕ್ತಿಗೆ ಚಾಕು ಇರಿತ

ಮಧ್ಯರಾತ್ರಿವರೆಗೂ ಹೊಸ ವರ್ಷಾರಣೆ ಮಾಡಿದ ಅವರು 1.30ರ ವೇಳೆಗೆ ಕ್ಷುಲ್ಲಕ ಕಾರಣಕ್ಕಾಗಿ ಪರಸ್ಪರ ಜಗಳವಾಡಿಕೊಂಡಿದ್ದಾರೆ. ರೂಂನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ರೆಸಿಡೆನ್ಸಿಯ ಮೇಲ್ವಿಚಾರಕ ಆರ್ಷದ್ ಎಂಬುವರು ಇವರ ರೂಂಗೆ ಹೋಗಿ ಎಚ್ಚರಿಕೆ ನೀಡಿದ್ದಾರೆ. ಇಷ್ಟಕ್ಕೆ ಕುಪಿತಗೊಂಡ ಯುವಕರು ಸಿಬ್ಬಂದಿಗೆ ಮನಬಂದಂತೆ ಥಳಿಸಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಈ ಎಲ್ಲಾ ಘಟನೆ ನಂತರ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬಾಣಸವಾಡಿ ಪೊಲೀಸರು ತನಿಖೆ ಕೈಗೊಂಡಿದ್ದು, ಐವರು ಆರೋಪಿಗಳ ಪೈಕಿ ಹರಿ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Intro:Body:

ನ್ಯೂ ಇಯರ್ ಎಫೆಕ್ಟ್ : ಕುಡಿದ ನಶೆಯಲ್ಲಿ ರೂಂ ಬಾಡಿಗೆ ಕೊಟ್ಟಿದ್ದ ಸಿಬ್ಬಂದಿಗೆ ಮನಬಂದಂತೆ ಚಾಕು ಹಾಕಿದ ಕಿಡಿಗೇಡಿಗಳು

ಬೆಂಗಳೂರು: ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಯುವಕರ ಗುಂಪೊಂದು ನಗರದ ಲಾಡ್ಜ್ ವೊಂದರಲ್ಲಿ ರೂಂ ಬುಕ್ ಮಾಡಿತ್ತು. ಸೆಲಬ್ರೆಷನ್ ಸಹ ನಿರಾಂತಕವಾಗಿ ನಡೆದಿತ್ತು. ಆದರೆ ಅವರ ನಡುವೆಯೇ ಏನಾಯಿತೋ ಗೊತ್ತಿಲ್ಲ. ಮಧ್ಯರಾತ್ರಿ ಜಗಳ ಉಂಟಾಗಿ ತಾರಕಕ್ಕೇರಿದ್ದು, ಇದನ್ನು ಪ್ರಶ್ನಿಸಿದ ಲಾಡ್ಜ್ ಸಿಬ್ಬಂದಿ ಮೇಲೆಯೇ ಆರೋಪಿಗಳು ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಹೊಸ ವರ್ಷ ಆಚರಣೆಗಾಗಿ ಡೊಡ್ಡ ಬಾಣಸವಾಡಿಯ ಒಲಿವ್ ರೆಸಿಡೆನ್ಸಿಯಲ್ಲಿ ಒಂದು ರಾತ್ರಿ ರೂಂ ಬುಕ್ ಮಾಡಿದ್ದ ಆರೋಪಿಗಳು, ಅದರಂತೆ ಡಿ.31ರ ರಾತ್ರಿ ರೂಂ ಗೆ ಆರೋಪಿಗಳಾದ ಸಂತೋಷ್, ಹರಿ, ಪ್ರಕಾಶ್, ರಂಜೀತ್ ಕುಮಾರ್ ಹಾಗೂ ಸಂಜಯ್ ಆಗಮಿಸಿದ್ದಾರೆ.. ನಂತರ ಮಧ್ಯರಾತ್ರಿವರೆಗೂ ನ್ಯೂ ಇಯರ್ ಸೆಲೆಬ್ರೆಷನ್ ಮಾಡಿದ್ದಾರೆ. ಬೆಳಗ್ಗಿನ ಜಾವ 1.30ರ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಐವರು ಯುವಕರು ಪರಸ್ಪರ ಜಗಳವಾಡಿಕೊಂಡು ರೂಂನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ರೆಸಿಡೆನ್ಸಿಯ ಮೇಲ್ವಿಚಾರಕ ಆರ್ಷದ್ ಎಂಬುವರು ಆರೋಪಿಗಳು ತಂಗಿದ್ದ ರೂಗೆ ಬಂದಿದ್ದಾರೆ. ಚೆಲ್ಲಾಪಿಲ್ಲಿಯಾಗಿದ್ದ ವಸ್ತುಗಳನ್ನು ಕಂಡು ಗಲಾಟೆ ಮಾಡಿದರೆ ಸರಿ ಇರುವುದಿಲ್ಲ. ತಕ್ಷಣವೇ ರೂ.ನಿಂದ ನಿರ್ಗಮಿಸಿ ಇಲ್ಲದಿದ್ದರೆ ಪೊಲೀಸರಿಗೆ ಕರೆ ಮಾಡುವೆ ಎಂದು ಹೇಳಿದ್ದಾರೆ. ಇಷ್ಟಕ್ಕೆ ಅಕ್ರೋಶಗೊಂಡು ಆರೋಪಿಗಳು ಹೊರಬಂದು ಕುಡಿದ ಆಮಲಿನಲ್ಲಿ ಆತನ ಮೇಲೆ ಮನಬಂದಂತೆ ಹೊಡೆದಿದ್ದಾರೆ. ಅಲ್ಲದೆ, ಚಾಕುವಿನಿಂದ ಆರ್ಷದ್ ತಲೆಯ ಹಿಂಭಾಗಕ್ಕೆ ಹಲವು ಬಾರಿ ಚಾಕು ಇರಿದು ಹಲ್ಲು ಮುರಿದು ಎಸ್ಕೇಪ್ ಆಗಿದ್ದಾರೆ.
ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಬಾಣಸವಾಡಿ ಪೊಲೀಸರು ಐವರು ಆರೋಪಿಗಳ ಪೈಕಿ ಹರಿ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Conclusion:
Last Updated : Jan 2, 2020, 11:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.