ಬೆಂಗಳೂರು: ಕೇಂದ್ರ ಸರ್ಕಾರವು ಪ್ರತಿ ವರ್ಷ ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಇಲಾಖೆ ನೀಡುವ ಪದಕ ವಿಜೇತರನ್ನು ಘೋಷಿಸಲಾಗಿದ್ದು, ಈ ಪೈಕಿ ಕರ್ನಾಟಕದ ಆರು ಮಂದಿ ಪದಕಕ್ಕೆ ಭಾಜನರಾಗಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸಿದ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್, ಎಸ್ಐಟಿ ತಂಡದಲ್ಲಿದ್ದ ಡಿವೈಎಸ್ ಪಿ ಟಿ ಟಿ.ರಂಗಪ್ಪ, ಡಿವೈಎಸ್ಪಿ ಕೆ.ರವಿಶಂಕರ್, ಎಸ್ಪಿ ಜಾಹ್ನವಿ, ಇನ್ ಸ್ಪೆಕ್ಟರ್ ಜಿ.ಸಿ.ರಾಜಾ ಹಾಗೂ ಬಿ.ಎಸ್.ಸತೀಶ್ ಅವರು ಈ ಪದಕಕ್ಕೆ ಅರ್ಹರಾಗಿದ್ದಾರೆ.
ತನಿಖಾ ವಿಭಾಗದಲ್ಲಿ ಉತ್ತಮ ಕಾರ್ಯದಕ್ಷತೆಗೆ ನೀಡಲಾಗುವ ಗೃಹ ಮಂತ್ರಿ ಪದಕವನ್ನು ಪ್ರತಿ ವರ್ಷ ಕೇಂದ್ರ ಸರ್ಕಾರ ನೀಡಲಿದೆ. ಈ ಬಾರಿ ಕರ್ನಾಟಕ ಸೇರಿದಂತೆ 96 ಪೊಲೀಸ್ ಅಧಿಕಾರಿಗಳು ಪದಕಕ್ಕೆ ಭಾಜನರಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.