ETV Bharat / state

ಎಣ್ಣೆಪಾರ್ಟಿ‌ ಮಾಡಿ ಮನೆಗೆ ಹೋಗುತ್ತಿದ್ದವನ ಮೇಲೆ ಅಟ್ಯಾಕ್ : ನಡು ರೋಡ್​​ಲ್ಲೇ ಹತ್ಯೆ - ಬೆಂಗಳೂರಿನಲ್ಲಿ ವ್ಯಕ್ತಿಯ ಹತ್ಯೆ

ಅಟ್ಯಾಕ್ ಮಾಡಿದ ಕೂಡಲೇ ಅಲ್ಲಿಂದ ಎಸ್ಕೇಪ್ ಆಗಲು ಲೋಕೇಶ್ ಸುಮಾರು ನೂರು ಮೀಟರ್‌ನಷ್ಟು ಓಡಿ ಹೋಗಿದ್ದ. ಆದರೆ, ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ. ಬಳಿಕ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಲೋಕೇಶ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ..

Assassination of a person in Bangalore
ಬೆಂಗಳೂರಿನಲ್ಲಿ ವ್ಯಕ್ತಿಯ ಹತ್ಯೆ
author img

By

Published : Dec 18, 2020, 9:24 AM IST

ಬೆಂಗಳೂರು : ಕೆಲಸಕ್ಕೆ ರಜೆಯಿದ್ದ ಹಿನ್ನೆಲೆ ಎಣ್ಣೆ ಪಾರ್ಟಿ ಮಾಡಿ ಮನೆಗೆ ತೆರಳುತ್ತಿದ್ದವನ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಹತ್ಯೆಗೈದಿರುವ ಘಟನೆ ಆರ್ ಟಿ ನಗರದಲ್ಲಿ ನಡೆದಿದೆ. ಆರ್ ಟಿ ನಗರದ ನಿವಾಸಿ ಲೋಕೇಶ್ ಎಂಬುವರು ಕೊಲೆಯಾದ ಯುವಕ.

ವೃತ್ತಿಯಲ್ಲಿ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ಲೋಕೇಶ್, ನಿನ್ನೆ ರಜೆಯಿದ್ದ ಹಿನ್ನೆಲೆ ತನ್ನ ಗೆಳೆಯರೊಂದಿಗೆ ಬಾರ್‌ನಲ್ಲಿ ಎಣ್ಣೆ ಮಾರ್ಟಿ ಮಾಡಿದ್ದ. ಬಳಿಕ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಪೆಟ್ರೋಲ್ ಖಾಲಿಯಾದ ಕಾರಣ, ಪೆಟ್ರೋಲ್ ಹಾಕಿಸಿಕೊಂಡು ಮನೆಗೆ ತೆರಳುತ್ತಿದ್ದ. ಆಗ ಮಾರ್ಗ ಮಧ್ಯೆ ಐದಾರು ಜನ ದುಷ್ಕರ್ಮಿಗಳು ಆತನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ದಾರೆ.

ಅಟ್ಯಾಕ್ ಮಾಡಿದ ಕೂಡಲೇ ಅಲ್ಲಿಂದ ಎಸ್ಕೇಪ್ ಆಗಲು ಲೋಕೇಶ್ ಸುಮಾರು ನೂರು ಮೀಟರ್‌ನಷ್ಟು ಓಡಿ ಹೋಗಿದ್ದ. ಆದರೆ, ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ. ಬಳಿಕ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಲೋಕೇಶ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಓದಿ :ಅಕ್ರಮ ಸಂಬಂಧ ವಿಚಾರಕ್ಕೆ ಪತಿಯ ಹತ್ಯೆ: ಪತ್ನಿ-ಪ್ರಿಯಕರ ಸೇರಿ ಮೂವರ ಬಂಧನ

ಘಟನೆ ಬಳಿಕ ಆರ್‌ಟಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಲೋಕೇಶ್ ಪಾರ್ಟಿ ಮಾಡಿದ್ದ ಬಾರ್‌ನಲ್ಲಿಯೇ ಏನೋ ಕಿರಿಕ್ ಆದ ಕಾರಣ ಕೃತ್ಯ ನಡೆದಿರುವ ಶಂಕೆಯಿದೆ. ಈ ಬಗ್ಗೆ ಆರ್‌ಟಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.