ETV Bharat / state

ಟಿಕೆಟ್ ಕೈತಪ್ಪುವ ಆತಂಕ: ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಆಕಾಂಕ್ಷಿಗಳ ದಂಡು - ETV Bharat kannada News

ಇಂದು ಬೆಳಗ್ಗೆಯಿಂದ ಬಿಎಸ್​ವೈ ನಿವಾಸದಲ್ಲಿ ಆಕಾಂಕ್ಷಿಗಳು ಮ್ಯಾರಥಾನ್ ಸಭೆ ನಡೆಯಿತು.

B.S Yeddyurappa Kaveri residence
ಬಿ.ಎಸ್​ ಯಡಿಯೂರಪ್ಪ ಕಾವೇರಿ ನಿವಾಸ
author img

By

Published : Apr 11, 2023, 10:50 PM IST

ಬೆಂಗಳೂರು : ಈ ಬಾರಿ 75 ವರ್ಷ ದಾಟಿದವರಿಗೆ ಟಿಕೆಟ್ ನೀಡದಿರಲು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿದೆ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ಟಿಕೆಟ್ ಕೈ ತಪ್ಪುವ ಹಲವು ಶಾಸಕರು ಆತಂಕಕ್ಕೆ ಒಳಗಾಗಿದ್ದು, ಇಂದು ಬೆಳಗ್ಗೆಯಿಂದಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನವರ ನಿವಾಸದ ಕದವನ್ನು ಟಿಕೆಟ್​ ಲಾಬಿಗಾಗಿ ತಟ್ಟಿದ್ದಾರೆ. ಆತಂಕದಲ್ಲಿರುವ ಶಿರಹಟ್ಟಿ ಶಾಸಕ ರಾಮಪ್ಪ ಲಮಾಣಿ, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್, ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಮೂಡಿಗೆರೆ ಹಾಲಿ ಶಾಸಕ ಎಂಪಿ ಕುಮಾರಸ್ವಾಮಿ, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಬಸವನಬಾಗೇವಾಡಿ ಕ್ಷೇತ್ರದ ಆಕಾಂಕ್ಷಿ ಎಸ್.ಕೆ ಬೆಳ್ಳುಬ್ಬಿ ಇಂದು ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಬಿಎಸ್​ವೈ ಅವರ ಅಧಿಕೃತ ನಿವಾಸವಾದ ಕಾವೇರಿಗೆ ಆಗಮಿಸಿದ ಟಿಕೆಟ್ ಆಕಾಂಕ್ಷಿಗಳು ಪ್ರತ್ಯೇಕವಾಗಿ ಒಬ್ಬೊಬ್ಬ ನಾಯಕರು ಟಿಕೆಟ್ ವಿಚಾರದಲ್ಲಿ ಮಾತುಕತೆ ನಡೆಸಿ ಇದೊಂದು ಬಾರಿ ಅವಕಾಶ ಸಿಗುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಇವರ ಜೊತೆ ಮಾಡಾಳು ವಿರೂಪಾಕ್ಷಪ್ಪ ಪ್ರಕರಣದಿಂದ ಅವರ ಕುಟುಂಬಕ್ಕೆ ಟಿಕೆಟ್ ಮಿಸ್ ಆಗಲಿದೆ ಎನ್ನಲಾಗಿದ್ದು, ಆಕಾಂಕ್ಷಿಯಾಗಿರುವ ಚನ್ನಗಿರಿ ನಗರದ ಮಾಜಿ ಅಧ್ಯಕ್ಷ ಮಂಜುನಾಥ ಜಾಧವ್ ಅವರು ಕೂಡ ಬಿಎಸ್​ವೈ ಅವರನ್ನು​ ಭೇಟಿ ಮಾಡಿ ಟಿಕೆಟ್ ಕುರಿತು ಮಾತುಕತೆ ನಡೆಸಿದರು.

ಆಕಾಂಕ್ಷಿಗಳು ಒಬ್ಬೊಬ್ಬರಾಗಿ ಬಿಎಸ್​ವೈ ನಿವಾಸಕ್ಕೆ ಭೇಟಿ ನೀಡಿದ್ದರಿಂದಿ ಇಡೀ ದಿನ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರವಾಯಿತು. ಹಾಲಿ ಶಾಸಕರ ಮ್ಯಾರಥಾನ್ ಸಭೆ ನಂತರ ತುಮಕೂರು ಸಂಸದ ಬಸವರಾಜ್ ಭೇಟಿ ನೀಡಿ ಕ್ಷೇತ್ರದಲ್ಲಿ ಟಿಕೆಟ್ ಗೆ ಈ ಬಾರಿ ಸೊಗಡು ಶಿವಣ್ಣ ಸೇರಿದಂತೆ ಹಲವು ನಾಯಕರ ಪೈಪೋಟಿ ನಡೆಸುತ್ತಿರುವ ಹಿನ್ನಲೆಯಲ್ಲಿ ಪುತ್ರ ಜ್ಯೊತಿ ಗಣೇಶ್ ಪರವಾಗಿ ಬಿಎಸ್​ವೈ ಜೊತೆ ಚರ್ಚೆ ನಡೆಸಿದರು.

ಸಂಸದ ಬಸವರಾಜ್ ಪ್ರತಿಕ್ರಿಯೆ : ಬಿಎಸ್​ವೈ ಭೇಟಿ ಬಳಿಕ ಮಾತನಾಡಿದ ಸಂಸದ ಬಸವರಾಜ್, ಈ ಭೇಟಿ ಉದ್ದೇಶಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಅವರು ನಮ್ಮ ಹಿರಿಯ ನಾಯಕರು ಇದೊಂದು ಸೌಹಾರ್ಯಯುತ ಭೇಟಿ ಅಷ್ಟೆ. ನನಗೆ ಈಗಾಗಲೇ 85 ವರ್ಷ ನನಗೆ ಈಗ ಟಿಕೆಟ್ ಕೊಡ್ತಾರಾ..? ನಾನು ಈಗಾಗಲೇ ಚುನಾವಣೆ ನಿವೃತ್ತಿ ಘೋಷಣೆ ಮಾಡಿದ್ದೇನೆ ಎಂದರು. ಇನ್ನು ಇದೇ ಈಶ್ವರಪ್ಪ ನಿವೃತ್ತಿ ಕುರಿತು ಪ್ರತಿಕ್ರಿಯೆ ನೀಡಿದ ಬಸವರಾಜ್ ಅವರು, ಈಶ್ವರಪ್ಪ ನಿವೃತ್ತಿ ಘೋಷಣೆ ಮಾಡಿರೋದು ಅವರ ಮಗನಿಗೆ ಟಿಕೆಟ್ ಕೊಡಿಸಲು ಅನ್ನಿಸುತ್ತದೆ. ಪಕ್ಷದಲ್ಲೂ ಕೂಡ ಹಿರಿಯರಿಗೆ ಟಿಕೆಟ್ ಸಿಗಲ್ಲ ಎಂದು ಚರ್ಚೆ ಆಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : ಬಿಜೆಪಿಯಲ್ಲಿ ಪುತ್ರ ವ್ಯಾಮೋಹ ಪರ್ವ: ಮಗನಿಗಾಗಿ ಕ್ಷೇತ್ರ ತ್ಯಾಗ, ಬಿಎಸ್‌ವೈ ಹಾದಿ ಹಿಡಿದ ಈಶ್ವರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.