ಬೆಂಗಳೂರು: ವೇದಿಕೆ ಕಾರ್ಯಕ್ರಮವೊಂದರಲ್ಲಿ ಭಾವಿ ಸಚಿವರೇ ಎಂದು ಕರೆಸಿಕೊಳ್ಳುವ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ನೂತನ ಶಾಸಕರ ಆಸೆ ಈಡೇರದೇ ನಿರಾಸೆ ಅನುಭವಿಸುವಂತಾಯಿತು.
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಂದಾಯ ಇಲಾಖೆಯಿಂದ ನಡೆದ ಹಕ್ಕುಪತ್ರ ವಿತರಣಾ ಸಮಾರಂಭದ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಷಣ ಮಾಡಿದರು. ಈ ವೇಳೆ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ ರೀತಿ ತಮ್ಮನ್ನು ಸಹ ಭಾವಿ ಸಚಿವರು ಎಂದು ಸಿಎಂ ಕರೆಯುತ್ತಾರೆ ಎಂದು ತಿಳಿದು ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ಗೋಪಾಲಯ್ಯ ನಿರೀಕ್ಷೆಯೊಂದಿಗೆ ಮುಖ್ಯಮಂತ್ರಿ ಅವರ ಕಡೆಯೇ ದಿಟ್ಟಿಸಿ ನೋಡುತ್ತಿದ್ದರು. ಆದರೆ ಭಾಷಣ ಆರಂಭದ ವೇಳೆ ವೇದಿಕೆಯಲ್ಲಿರುವವರ ಹೆಸರು ಹೇಳುವಾಗ ಶಾಸಕರು ಅಂತಾ ಸಿಎಂ ಹೇಳಿದ್ದಾರೆ.
ಇನ್ನು, ಭಾಷಣದ ವೇಳೆ ಎಲ್ಲಿಯೂ ಭಾವಿ ಸಚಿವರಾಗುವವರು ಎಂದು ಸಿಎಂ ಕರೆಯದ ಹಿನ್ನಲೆಯಲ್ಲಿ ಆಕಾಂಕ್ಷಿಗಳು ತೀವ್ರ ನಿರಾಸೆಯನ್ನು ಅನುಭವಿಸಿದ್ದಾರೆ ಎಂದು ಹೇಳಲಾಗ್ತಿದೆ.