ಬೆಂಗಳೂರು: ಹುಬ್ಬಳ್ಳಿ ಗಲಭೆ ವಿಚಾರದಲ್ಲಿ ಜಮೀರ್ ಅಹಮ್ಮದ್ ಖಾನ್ ರಾಜಕೀಯ ಮಾಡುತ್ತಿದ್ದಾರೆ. ಘಟನೆಯನ್ನು ಅವರು ಖಂಡಿಸಬೇಕಿತ್ತು. ಇದಕ್ಕೆ ಬದಲಾಗಿ ಪ್ರೋತ್ಸಾಹ ಕೊಡುವುದು ಖಂಡನೀಯ. ಇದರಲ್ಲಿ ರಾಜಕೀಯ ಮಾಡುವ ಪ್ರಯತ್ನ ಸೂಕ್ತವಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿದರು.
ಕಾನೂನುಬಾಹಿರ ಚಟುವಟಿಕೆ ಮಾಡುವ ವ್ಯಕ್ತಿಗಳಿಗೆ ಕುಮ್ಮಕ್ಕು ನೀಡಿ ರಾಜಕೀಯ ಬೇಳೆ ಬೇಯಿಸಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಈ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಅವರಿಗೆ ಯಾವ ವಿಷಯದಲ್ಲೂ ಸ್ಪಷ್ಟತೆ ಇಲ್ಲ ಎಂದರು.
ಇದನ್ನೂ ಓದಿ: ಮಗು ಚಿವುಟಿ ತೊಟ್ಟಿಲು ತೂಗೋ ಕೆಲಸ ಮಾಡುತ್ತಿದ್ದಾರೆ: ಜಮೀರ್ ಕೆಲಸಕ್ಕೆ ಸಿ. ಟಿ ರವಿ ಟಾಂಗ್