ETV Bharat / state

ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವಂತೆ ಮೇ.24ಕ್ಕೆ ಆನ್‌ಲೈನ್ ಚಳವಳಿಗೆ ಕರೆ

ರಾಜ್ಯದ ಎಲ್ಲ ಜಿಲ್ಲೆಗಳ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರು ಆನ್​ಲೈನ್​ ಸಭೆಯಲ್ಲಿ ಭಾಗವಹಿಸಿ ಸುಮಾರು 3 ಗಂಟೆಗಳ ಕಾಲ ತಾವು ನಿರ್ವಹಿಸುತ್ತಿರುವ ಕೆಲಸ ಕಾರ್ಯಗಳ ಬಗ್ಗೆ, ಕೆಲಸ ಮಾಡಲು ಅಡ್ಡಿಯಾಗುತ್ತಿರುವ ಸಮಸ್ಯೆಗಳ ಬಗ್ಗೆ, ಜನರು ಮತ್ತು ಟಾಸ್ಕ್ ಫೋರ್ಸ್ ಸಮಿತಿಯಿಂದ ಆಗುತ್ತಿರುವ ವಿವಿಧ ರೀತಿಯ ಸಮಸ್ಯೆಗಳನ್ನು ತೆರೆದಿಟ್ಟಿದ್ದಾರೆ.

author img

By

Published : May 21, 2021, 11:00 PM IST

asha-workers
ಆಶಾ ಕಾರ್ಯಕರ್ತೆಯರು

ಬೆಂಗಳೂರು: ರಾಜ್ಯ ಮಟ್ಟದ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರು ಆನ್​ಲೈನ್ ಸಭೆ ನಡೆಸಿದ್ದಾರೆ. ತಮ್ಮ ಬೇಡಿಕೆಗಳಿಗಾಗಿ ಮೇ 24ರಂದು ರಾಜ್ಯ ವ್ಯಾಪಿಯಾಗಿ, ರಾಜ್ಯದ 42,000 ಆಶಾ ಕಾರ್ಯಕರ್ತೆಯರು ತಮ್ಮ ತಮ್ಮ ಕೆಲಸದ ಸ್ಥಳದಿಂದ ಅಥವಾ ಮನೆಯಿಂದ ತಮ್ಮ ಬೇಡಿಕೆಗಳನ್ನ ಒತ್ತಾಯಿಸಿ ಆನ್‌ಲೈನ್ ಚಳವಳಿ ಮಾಡಲು ನಿರ್ಧರಿಸಿದ್ದಾರೆ.

ಇನ್ನು ಆನ್‌ಲೈನ್ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರು ಭಾಗವಹಿಸಿ, ಸುಮಾರು 3 ಗಂಟೆಗಳ ಕಾಲ ತಾವು ನಿರ್ವಹಿಸುತ್ತಿರುವ ಕೆಲಸ ಕಾರ್ಯಗಳ ಬಗ್ಗೆ, ಕೆಲಸ ಮಾಡಲು ಅಡ್ಡಿಯಾಗುತ್ತಿರುವ ಸಮಸ್ಯೆಗಳ ಬಗ್ಗೆ, ಜನರು ಮತ್ತು ಟಾಸ್ಕ್ ಫೋರ್ಸ್ ಸಮಿತಿಯಿಂದ ಆಗುತ್ತಿರುವ ವಿವಿಧ ರೀತಿಯ ಸಮಸ್ಯೆಗಳನ್ನು ತೆರೆದಿಟ್ಟಿದ್ದಾರೆ.

ಮತ್ತೊಂದೆಡೆ ಕುಟುಂಬದ ಸದಸ್ಯರ ಆತಂಕ - ಭಯದ ನಡುವೆ ಅವರು ಎದುರಿಸುತ್ತಿರುವ ನೋವು - ಕಷ್ಟಗಳನ್ನ‌ ಹೇಳಿಕೊಂಡಿದ್ದಾರೆ. ಹಾಗೆಯೇ ಕಳೆದ 2ತಿಂಗಳ ಮತ್ತು ಮೇ ಸೇರಿದರೆ 3 ತಿಂಗಳಿಂದ ವೇತನ ನೀಡದೇ ಇಲಾಖೆಯು ಆಶಾ ಕಾರ್ಯಕರ್ತೆಯರನ್ನ ಈ ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ತಳ್ಳಿರುವುದನ್ನು ಅತ್ಯಂತ ದುಃಖದಿಂದ ಹೇಳಿಕೊಂಡಿದ್ದಾರೆ.

ದಿನಸಿಗಾಗಿ ಸಾಲ ಮಾಡಬೇಕೆಂದರೂ ಸಾಲ ಸಿಗದ ಪರಿಸ್ಥಿತಿ, ಮನೆ ಬಾಡಿಗೆ ನೀಡಲು ಆಗದೇ ಮಾಲೀಕರಿಗೆ ಸಮಯಕ್ಕಾಗಿ ದೈನ್ಯತೆಯಿಂದ ಪದೇ ಪದೆ ಕೇಳುವಂತಹ ಪರಿಸ್ಥಿತಿ, ಮತ್ತೊಂದೆಡೆ ಆಶಾ ಕಾರ್ಯಕರ್ತೆಯರೇ ಸೋಂಕಿತರಾಗಿ ಬಳಲುತ್ತಿರುವುದು, ಕುಟುಂಬದ ಸದಸ್ಯರು ಸೋಂಕಿನಿಂದ ಬಳಲುತ್ತಿರುವ ಸಂಕಟಗಳನ್ನು ಜೊತೆಗೆ ಸೋಂಕಿನ ಚಿಕಿತ್ಸೆಗೆ ಪರದಾಡಿದ ಕಷ್ಟಗಳನ್ನು ಹಂಚಿಕೊಂಡರು.

ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ ರಾಜ್ಯಾದ್ಯಂತೆ ಜ್ಯದಾದ್ಯಂತ ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನೇ ಪಣವಾಗಿಟ್ಟು ಇಲಾಖೆ ನೀಡಿದ ಕೆಲಸಗಳನ್ನು ಮಾಡುತ್ತಿದ್ದಾರೆ. ಕೊರೊನಾ ಪೀಡಿತರನ್ನು ಇನ್ನಿತರೆ ಸಿಬ್ಬಂದಿಗಳು ಪಿಪಿಇ ಕಿಟ್ ನೊಂದಿಗೆ ಎಲ್ಲಾ ಸುರಕ್ಷಣಾ ಕ್ರಮದೊಂದಿಗೆ ಪರೀಕ್ಷೆ ಅಥವಾ ಚಿಕಿತ್ಸೆ ಮಾಡುತ್ತಾರೆ. ಆದರೆ ಬಹುತೇಕ ಕಡೆಗಳಲ್ಲಿ ಆಶಾ ಕಾರ್ಯಕರ್ತೆಯರ ಕೈಗೆ ಆಕ್ಸಿ ಮೀಟರ್ ಕೊಟ್ಟು ಸೋಂಕಿತರನ್ನು ಪರೀಕ್ಷಿಸಲು ಕಳುಹಿಸುತ್ತಾರೆ. ಅಗತ್ಯವಿರುವ ಗ್ಲೌಸ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೊಡದೇ ಕಳಿಸುತ್ತಾರೆ. ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಸುಮಾರು 20-40 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದೀಗ ಕೊರೊನಾ ಸೋಂಕಿಗೆ ಒಳಗಾಗಿರುವುದು ಕೆಲವರು ಗುಣಮುಖರಾಗಿರುವುದು ಮತ್ತೆ ಹೊಸಬರು ಸೋಂಕಿತರಾಗುತ್ತಿರುವುದು ಬೆಳಕಿಗೆ ಬಂದಿದೆ.

ಇಷ್ಟೆಲ್ಲಾ ಅಸುರಕ್ಷತಾ ನಡುವೆ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಐಎಲ್‌ಐ ಮತ್ತು ಎಸ್‌ಎಆರ್‌ಐ ಸರ್ವೆ, ಮಾತ್ರೆ ಹಂಚುವುದು, ಕೋವಿಡ್ ಕಿಟ್ ಹಂಚುವುದು, ಸೋಂಕಿನ ಲಕ್ಷಣ ಕಂಡಲ್ಲಿ ಪರೀಕ್ಷೆಗೆ ಕಳುಹಿಸಿರುವುದು, ಮನೆಗಳಿಗೆ ಹೋಗಿ ದಿನನಿತ್ಯ ಅವರ ಆರೋಗ್ಯದ ಮಾಹಿತಿಯನ್ನು ಇಲಾಖೆಗೆ ಒದಗಿಸುವುದು, ಒಂದನೆ -ಎರಡನೇ ಸಂಪರ್ಕಿತರನ್ನು ಗುರುತಿಸುವುದು, ಹೀಗೆ ವಿವಿಧ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವೆಡೆ ಕಾರ್ಯಕರ್ತೆಯರಿಗೆ ನಿಯೋಜಿಸಿದ ಕಾರ್ಯಗಳನ್ನು ಹೊರತು ಪಡಿಸಿ, ವಿವಿಧ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತಿದೆ.

ಉದಾಹರಣೆಗೆ ಸ್ವ್ಯಾಬ್​ ತೆಗೆಯುವುದು, ವಿವಿಧ ಲಸಿಕಾ ಕೇಂದ್ರದಲ್ಲಿ ಶಿಫ್ಟ್ ಪ್ರಕಾರ ಕೆಲಸ ಮಾಡುವುದು ಹೀಗೆ ವಿವಿಧ ಕೆಲಸಗಳಿಗೆ ಒತ್ತಾಯಿಸಿದ್ದಾರೆ. ಇಲಾಖೇತರ ಕೆಲಸ ಮಾಡಲು ಆಗುವುದಿಲ್ಲವೆಂದರೆ ಕೆಲಸ ಬಿಟ್ಟುಬಿಡಿ ಅಥವಾ ಈ ತಿಂಗಳ ವೇತನ ನೀಡುವುದಿಲ್ಲ ಎಂದು ಹೆದರಿಸಿ, ಬೆದರಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ರೀತಿಯ ಇಲಾಖೆಯ ಕೆಲಸ ಮಾಡುವಾಗ 2ನೇ ಅಲೆಯಲ್ಲಿ ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ 5 ಆಶಾ ಕಾರ್ಯಕರ್ತೆಯರು ಕೋವಿಡ್‌ಯಿಂದ ಸಾವನ್ನಪ್ಪಿದ್ದಾರೆ.

ಮತ್ತೊಂದೆಡೆ ರಾಜ್ಯದಲ್ಲಿ ಸುಮಾರು 1000ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದೀಗ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿದ್ದು, ಹೋರಾಡುತ್ತಿರುವ ವಾರಿಯರ್ಸ್ ಬಗ್ಗೆ ಕಾಳಜಿ ಮುತುವರ್ಜಿ ವಹಿಸಬೇಕೆಂದು ಇಲಾಖೆಯನ್ನು ಹಾಗೂ ಸರ್ಕಾರವನ್ನು ಒತ್ತಾಯಿಸಿ ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಈ ಚಳವಳಿ ನಡೆಯಲಿದೆ.

ಆಶಾ ಕರ್ಯಕರ್ತೆಯರ ಪ್ರಮುಖ ಬೇಡಿಕೆಗಳು

• ಆಶಾಗಳಿಗೆ ಕೆಲಸ ಮಾಡುವುದಕ್ಕೆ ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್ ಹಾಗೂ ಗ್ಲೌಸ್ ಕೊಡಬೇಕು

• ಕೋವಿಡ್ ಕೆಲಸಕ್ಕೆ ಇತರ ವಾರಿಯರ್ಸ್​ಗಳಿಗೆ ಕೋವಿಡ್ ಅಪಾಯ ಭತ್ಯೆ ಮಾಸಿಕ ರೂ.5000 ನೀಡಿದಂತೆ ಆಶಾಗಳಿಗೂ ನೀಡಬೇಕು ! (ರಿಸ್ಕ್ ಅಲೊಯನ್ಸ್)

• ಕೋವಿಡ್-19 2ನೇ ಅಲೆಯಲ್ಲಿ ಸೋಂಕಿಗೆ ಒಳಗಾದ ಕಾರ್ಯಕರ್ತೆಯರಿಗೆ ರೂ.25000 ನೀಡಬೇಕು

• ಕಳೆದ ವರ್ಷ ಕೋವಿಡ್ ಮೊದಲ ಅಲೆಯಲ್ಲಿ ಮತ್ತು ಈಗ ಸೋಂಕಿನಿಂದ ಸಾವಿಗೀಡಾದ ಕುಟುಂಬಕ್ಕೆ ಈಗಾಗಲೇ ಘೋಷಣೆಯಾದ 5 ಲಕ್ಷ ರೂ. ಪರಿಹಾರ ನೀಡಬೇಕು

• ಮಾಸಿಕ ಗೌರವಧನ ರೂ.4000 ಕಳೆದ ಎರಡು ತಿಂಗಳ ಬಾಕಿ ಬಿಡುಗಡೆಗೆ ಆಗ್ರಹ

ಓದಿ: ಬಿಎಸ್​ವೈ ಘೋಷಿಸಿರೋ ಪ್ಯಾಕೇಜ್​ ಕಡಲೆಪುರಿ ತಿನ್ನೋದಕ್ಕೂ ಆಗಲ್ಲ: ವಾಟಾಳ್​ ಕಿಡಿಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.