ETV Bharat / state

ಆರ್​ಎಸ್​ಎಸ್, ಬಿಜೆಪಿ ನಾಯಕರು, ಸಿಎಂ ಜತೆ ರಾಜ್ಯ ಉಸ್ತುವಾರಿ ಪ್ರತ್ಯೇಕ ಸಭೆ.. - Bangalore

ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ ನಂತರ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಅರುಣ್ ಸಿಂಗ್ ಭೇಟಿ ನೀಡಲಿದ್ದು, ಯಡಿಯೂರಪ್ಪ ಜತೆ ಕೆಲಕಾಲ ಮಾತುಕತೆ ನಡೆಸಲಿದ್ದಾರೆ. ಭೋಜನಕೂಟದ ನೆಪದಲ್ಲಿ ಈ ಭೇಟಿ ವೇಳೆ ಹೈಕಮಾಂಡ್​​ನ ಸಂದೇಶ ಅಥವಾ ಸಲಹೆಯನ್ನು ಸಿಎಂ ಜೊತೆ ಹಂಚಿಕೊಳ್ಳಲಿದ್ದಾರೆ..

Arun Singh
ಅರುಣ್ ಸಿಂಗ್
author img

By

Published : Dec 6, 2020, 2:14 PM IST

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಸಂಬಂಧ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎರಡು ಹಂತದ ಚರ್ಚೆಗೆ ಮುಂದಾಗಿದ್ದಾರೆ. ಸಂಘ ಪರಿವಾರ, ಸಿಎಂ, ರಾಜ್ಯ ನಾಯಕರು ಮತ್ತು ಪ್ರಮುಖ ಸಚಿವರ ಜೊತೆ ಮಾತುಕತೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್​​ಗೆ ಮಾಹಿತಿ ರವಾನಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಮುಂಜಾನೆಯೇ ಚಾಮರಾಜಪೇಟೆಯಲ್ಲಿರುವ ಕೇಶವ ಕೃಪಾಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನೀಡಿದರು. ಆರ್​ಎಸ್​ಎಸ್ ನಾಯಕರ ಜತೆ ಕೆಲಕಾಲ ಸಮಾಲೋಚನೆ ನಡೆಸಿದರು. ಸಂಘಟನೆ ಮತ್ತು ಸರ್ಕಾರದ ಕುರಿತು ಕೆಲ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ನಂತರ ಬಿಜೆಪಿ ಕಚೇರಿಯಲ್ಲಿ ಸಚಿವರೊಂದಿಗೆ ಅರುಣ್ ಸಿಂಗ್ ಪ್ರತ್ಯೇಕ ಮಾತುಕತೆ ನಡೆಸಿದರು.

ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಡಿಸಿಎಂ ಅಶ್ವತ್ಥ್‌ ನಾರಾಯಣ್, ಕಂದಾಯ ಸಚಿವ ಆರ್ ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಸಂಸದ‌ ತೇಜಸ್ವಿ ಸೂರ್ಯ ಸೇರಿದಂತೆ ಹಲವು ನಾಯಕರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿದ್ದು, ಸಂಪುಟ ವಿಸ್ತರಣೆ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರಿಗೆ ರಾಜ್ಯ ಉಸ್ತುವಾರಿ ಅರುಣ್.. ಸಂಪುಟ ಸರ್ಜರಿ, ಗ್ರಾಪಂ ಚುನಾವಣೆ ಬಗ್ಗೆ ಚರ್ಚೆ

ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ ನಂತರ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಅರುಣ್ ಸಿಂಗ್ ಭೇಟಿ ನೀಡಲಿದ್ದು, ಯಡಿಯೂರಪ್ಪ ಜತೆ ಕೆಲಕಾಲ ಮಾತುಕತೆ ನಡೆಸಲಿದ್ದಾರೆ. ಭೋಜನಕೂಟದ ನೆಪದಲ್ಲಿ ಈ ಭೇಟಿ ವೇಳೆ ಹೈಕಮಾಂಡ್​​ನ ಸಂದೇಶ ಅಥವಾ ಸಲಹೆಯನ್ನು ಸಿಎಂ ಜೊತೆ ಹಂಚಿಕೊಳ್ಳಲಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ತರಾತುರಿ ಯಾಕೆ?: ಅರುಣ್ ಸಿಂಗ್ ಪ್ರಶ್ನೆ

ನಂತರ ಪಕ್ಷದ ಕಚೇರಿಗೆ ಮರಳಲಿರುವ ಅರುಣ್ ಸಿಂಗ್ ಪಕ್ಷದ ರಾಜ್ಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ರಾಜ್ಯ ಘಟಕದಿಂದ ಗ್ರಾ.ಪಂ ಚುನಾವಣೆ, ಸಂಪುಟ ವಿಸ್ತರಣೆ ಕುರಿತು ಸವಿಸ್ತಾರವಾಗಿ ಅಭಿಪ್ರಾಯ ಸಂಗ್ರಹ ಮಾಡಿ ಅದರ ಮಾಹಿತಿಯನ್ನು ಹೈಕಮಾಂಡ್​​ಗೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.