ETV Bharat / state

‘ಕಲಾಗ್ರಾಮ’ ದುರಸ್ತಿಗೆ ಆಗ್ರಹಿಸಿ ರಂಗಕರ್ಮಿಗಳಿಂದ ವಿಭಿನ್ನ ಪ್ರತಿಭಟನೆ

ಕಳೆದ ಐದು ತಿಂಗಳಿನಿಂದ ರಂಗಕೇಂದ್ರ ಕಲಾಗ್ರಾಮವನ್ನು ಮುಚ್ಚಿದ್ದರಿಂದ ರಂಗಕರ್ಮಿಗಳು ಗರಂ ಆಗಿದ್ದಾರೆ. ರಂಗ ಪ್ರೇಕ್ಷಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸುವಂತೆ ಒತ್ತಾಯಿಸಿ ನಗರದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯ್ತು.

ಕಲಾಗ್ರಾಮದ ದುರಸ್ತಿಗೊಳಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ರಂಗಕರ್ಮಿಗಳು
author img

By

Published : May 14, 2019, 9:57 AM IST

ಬೆಂಗಳೂರು: ಕಳೆದ ಐದು ತಿಂಗಳುಗಳಿಂದ ಮಲ್ಲತ್ತಹಳ್ಳಿಯ ರಂಗಕೇಂದ್ರ ಕಲಾಗ್ರಾಮದ ದುರಸ್ತಿಗೊಳಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರಂಗಕರ್ಮಿಗಳು ಸೋಮವಾರ ನಗರದಲ್ಲಿ ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಲಾಗ್ರಾಮ ದುರಸ್ತಿಗೊಳಿಸುವಂತೆ ಆಗ್ರಹಿಸಿ ರಂಗಕರ್ಮಿಗಳ ಪ್ರತಿಭಟನೆ

ಕಲಾಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದರಿಂದ ಕಳೆದ ಐದು ತಿಂಗಳಿನಿಂದ ಅದನ್ನು ಮುಚ್ಚಲಾಗಿದೆ. ಆದರೆ, ಈವರೆಗೆ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಬೇರೆ ಕಡೆ ಸಾವಿರಾರು ರೂಪಾಯಿ ಬಾಡಿಗೆ ತೆತ್ತು ನಾಟಕ ಮಾಡಲಾಗುವುದಿಲ್ಲ. ಹಾಗಾಗಿ ಆದಷ್ಟು ಬೇಗ ಕಲಾಗ್ರಾಮದಲ್ಲಿ ನಾಟಕಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ರಂಗಕರ್ಮಿಗಳು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

Intro:Drama artistBody:ಸದ ನಾಟಕ‌, ನೃತ್ಯ ಅಂತ ಬಿಝಿ ಇರುತ್ತಿದ್ದ ರಂಗಕರ್ಮಿಗಳು, ಇಂದು ರಸ್ತೆಗಿಳಿದ‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಸಮಾಜದ ತಪ್ಪುಗಳ ವಿರುದ್ಧ ಚಾಟಿ ಬೀಸುವ ರಂಗಭೂಮಿ, ಇಂದು ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಗರಂ ಆಗಿದ್ದಾರೆ.

ಟ್ರೆಂಡ್ ಎಷ್ಟೇ ಬದಲಾದರೂ ಈಗಲೂ ನಗರದ ಜನ ನಾಟಕಗಳತ್ತ ಒಲವನ್ನ ಉಳಿಸಿಕೊಂಡಿದ್ದಾರೆ... ಆದರೆ ಸರ್ಕಾರದ ನಿರ್ಲಕ್ಷ್ಯ ನಗರದ ರಂಗ ಕಲಾವಿದರನ್ನ ಸಿಟಿಗೆಬ್ಬಿಸಿದೆ, ರಸ್ತೆಗಳಿದು ಆಡಳಿತದ ವಿರುದ್ಧ ಹೋರಾಟ ಮಾಡುವಂತೆ ಮಾಡಿದೆ, ಇದಕ್ಕೆಲ್ಲ ಕಾರಣ, ಸತತ 5 ತಿಂಗಳುಗಳಿಂದ ಮಲ್ಲತ್ತಹಳ್ಳಿಯ ರಂಗಕೇಂದ್ರ ಕಲಾಗ್ರಾಮ ಮುಚ್ಚಿರುವುದು, ಮತ್ತು ಇದಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಕಣ್ಣು ಮುಚಿ ಕುಳಿತಿರುವುದು.

ಕಲಾಗ್ರಾಮದಲ್ಲಿ ನಡೆದ ಅಗ್ನಿ ದುರಂತದಿಂದ ಅಲ್ಲಿನ ಲೈಟ್ ರೂಂ ಸಂಪೂರ್ಣ ಸುಟ್ಟ ಬಸ್ಮವಾಗಿತ್ತು, ಆದರೆ ಕಟ್ಟಡಕ್ಕೆ ಮತ್ತು ವೇದಿಕೆಗೆ ಯಾವುದೇ ತೊಂದರೆಗಳಾಗಿರಲಿಲ್ಲ, ಶಾರ್ಟ್ ಸರ್ಕ್ಯೂಟ್ ನಿಂದ ವೈರಿಂಗ್ ನಾಶವಾಗಿದ್ದರಿಂದ ಅದರ ದುರಸ್ತಿಗೆಂದು ಕಲಾಗ್ರಾಮವನ್ನು ಮುಚ್ಚಿ 5 ತಿಂಗಳುಗಳು ಕಳೆದಿದ್ದರು, ಇನ್ನು ಅದರ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾವುದೇ ತಲೆ ಕಡೆಸಿಕೊಂಡಿಲ್ಲ, ಬೆಂಗಳೂರಿನಲ್ಲಿರುವ ಕೆಲವೆ ಕೆಲವು ನಾಟಕದ ವೇದಿಕೆಗಳಲ್ಲಿ, ಹೆಚ್ಚಿನವು ಖಾಸಗಿಯವಾಗಿದೆ, ಸಾವಿರಾರು ರುಪಾಯಿಗಳ ಬಾಡಿಗೆ ತೆತ್ತು ನಾಟಕ ಮಾಡಲಾಗುವುದಿಲ್ಲ ಆದಷ್ಟು ಬೇಗ ಕಲಾಗ್ರಾಮದಲ್ಲಿ ನಾಟಕಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ವಿವಿಧ ಬಗೆಯ ವೇಷಗಳನ್ನು ಧರಿಸಿ ಕನ ಗ್ರಾಮದಿಂದ ನಗರದತ್ತ ವರೆಗೂ ಬೈಕ್ ರ್ಯಾಲಿ ನಡೆಸುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಪತ್ರ ನೀಡಿ ತಮ್ಮ ಬೇಡಿಕೆಯನ್ನು ಈಡೇರಿಸ ಬೇಕು ಕಲಾವಿದರು ಈ ರೀತಿ ರಸ್ತೆಯಲ್ಲಿ ಕೂತು ಪ್ರತಿಭಟಿಸುವುದು ಮುಂದಿನ ದಿನಗಳಲ್ಲಿ ದಾರಿ ಮಾಡಿಕೊಡಬಾರದೆಂದು ತಿಳಿಸಿದರುConclusion:Protest in town hall byte from mojo
ETV Bharat Logo

Copyright © 2024 Ushodaya Enterprises Pvt. Ltd., All Rights Reserved.