ETV Bharat / state

ಬಾಂಗ್ಲಾದಲ್ಲಿ ಮುಸ್ಲಿಂ, ಭಾರತದಲ್ಲಿ ಹಿಂದೂ: 15 ವರ್ಷದ ಹಿಂದೆ ಅಕ್ರಮವಾಗಿ ನುಸುಳಿ ಬಂದಿದ್ದ ಮಹಿಳೆ ಅರೆಸ್ಟ್

author img

By

Published : Jan 27, 2022, 11:01 AM IST

ಕಳೆದ 15 ವರ್ಷದ ಹಿಂದೆ ಭಾರತಕ್ಕೆ ನುಸುಳಿ ಬಂದಿದ್ದ ಬಾಂಗ್ಲಾ ದೇಶದ ಮುಸ್ಲಿಂ ಮಹಿಳೆಯನ್ನ ಬ್ಯಾಡರಹಳ್ಳಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಬಾಂಗ್ಲಾ ಮಹಿಳೆ
ಬಾಂಗ್ಲಾ ಮಹಿಳೆ

ಬೆಂಗಳೂರು: ದೇಶದಲ್ಲಿ ಬಾಂಗ್ಲಾ ನುಸುಳುಕೋರರ ಸಂಖ್ಯೆ ಹೆಚ್ಚಾಗುತ್ತಿದೆ. ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆ ಹಚ್ಚಲು ಸರ್ಕಾರ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಕಳೆದ 15 ವರ್ಷದ ಹಿಂದೆ ಭಾರತಕ್ಕೆ ನುಸುಳಿ ಬಂದಿದ್ದ ಬಾಂಗ್ಲಾ ದೇಶದ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಹೆಸರಿಟ್ಟುಕೊಂಡು ಇಲ್ಲಿನ‌ ಪೌರತ್ವ ಪಡೆದುಕೊಂಡಿದ್ದಾಳೆ. ಸದ್ಯಕ್ಕೆ ಅಕ್ರಮ‌ವಾಗಿ ನೆಲೆಸಿರುವ ಮಹಿಳೆಯನ್ನ ಬ್ಯಾಡರಹಳ್ಳಿ ಪೊಲೀಸರು ಪತ್ತೆ ಹಚ್ಚಿ, ಬಂಧಿಸಿದ್ದಾರೆ.

ಬಾಂಗ್ಲಾದಿಂದ 2006-07ರಲ್ಲಿ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ರೋನಿ ಬೇಗಂ ಮುಂಬೈನಲ್ಲಿ ವಾಸವಾಗಿದ್ದಳು. ಇಲ್ಲಿನ ಡ್ಯಾನ್ಸ್ ಬಾರ್​​ನಲ್ಲಿ ಕೆಲಸ ಮಾಡಿಕೊಂಡಿದ್ದ ರೋನಿ, ತನ್ನ ಹೆಸರನ್ನು ಪಾಯಲ್ ಘೋಷ್ ಎಂದು ಬದಲಿಸಿಕೊಂಡಿದ್ದಳು. ಮುಂಬೈನಲ್ಲಿ ಮಂಗಳೂರು ಮೂಲದ ನಿತಿನ್ ಎಂಬಾತ ಪರಿಚಯವಾಗಿದ್ದ, ಪರಿಚಯ ಕ್ರಮೇಣ ಪ್ರೀತಿಗೂ ತಿರುಗಿತ್ತು. ನಂತರ‌ 2015ರಲ್ಲಿ ಬೆಂಗಳೂರಿಗೆ ಬಂದಿದ್ದ ರೋನಿ ಮತ್ತು ನಿತಿನ್ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು.

ಇಲ್ಲೇ ಟೈಲರಿಂಗ್ ಕೆಲಸ ಮಾಡಿಕೊಂಡಿ ರೋನಿ, ನಿತಿನ್​ನನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾಗಿ ಅಕ್ರಮವಾಗಿ ಹೆಸರು ಬದಲಿಸಿಕೊಂಡಿದ್ದಳು ಎನ್ನಲಾಗ್ತಿದೆ. ನಕಲಿ ದಾಖಲೆ ಕೊಟ್ಟು ಭಾರತ ಪ್ರಜೆಯಾಗಿ ದಾಖಲೆ ಮಾರ್ಪಾಡು ಮಾಡಿಕೊಂಡಿದ್ದ ರೋನಿ, ಬಾಂಗ್ಲಾಗೆ ಪ್ರಯಾಣ ಮಾಡುವಾಗ ಏರ್ ಪೋರ್ಟ್ ಅಧಿಕಾರಿಗಳ ಕೈಗೆ ಲಾಕ್ ಆಗಿದ್ದಳು.

2020ರಲ್ಲಿ ವೆಸ್ಟ್ ಬೆಂಗಾಲ್ ಏರ್ ಪೋರ್ಟ್​ನಲ್ಲಿ ಇಮಿಗ್ರೇಷನ್ ಅಧಿಕಾರಿಗಳ ತಪಾಸಣೆ ವೇಳೆ ಲಾಕ್ ಆಗಿದ್ದ ರೋನಿ, ನಕಲಿ ದಾಖಲೆ ಮುಖಾಂತರ ಓಟರ್ ಐಡಿ ಹಾಗೂ ಆಧಾರ್ ಕಾರ್ಡ್ ಕ್ರಿಯೇಟ್ ಮಾಡಿ ಪಾಸ್ ಪೋರ್ಟ್ ಮಾಡಿಸಿರುವುದು ಬೆಳಕಿಗೆ ಬಂದಿದೆ.

ಇಮಿಗ್ರೇಷನ್ ಅಧಿಕಾರಿಗಳ ಮುಂದೆ ರೋನಿಯು ಗೊಂದಲದ ಹೇಳಿಕೆ ನೀಡಿದ್ದರಿಂದ ಅಧಿಕಾರಿಗಳು ಆಕೆಯನ್ನು ಏರ್​ಪೋರ್ಟ್​ನಿಂದ ವಾಪಸ್ ಕಳುಹಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಮಹಿಳೆಯ ಅಸಲಿ ಇತಿಹಾಸ ಬೆಳಕಿಗೆ ಬಂದಿದೆ.

ಈ ವಿಚಾರವಾಗಿ FRRO ಸೂಚನೆ ಮೇರೆಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾದ ಒಂದುವರೆ ವರ್ಷದ ನಂತರ ರೋನಿ ಬೇಗಂ ನನ್ನು ಬ್ಯಾಡರಹಳ್ಳಿ ಇನ್ಸ್​ಪೆಕ್ಟರ್ ರವಿಕುಮಾರ್ ಹಾಗೂ ಸಬ್ ಇನ್ಸ್​ಪೆಕ್ಟರ್ ನವೀನ್ ಪ್ರಸಾದ್ ಬಂಧಿಸಿದ್ದಾರೆ. ಜೊತೆಗೆ ಮಹಿಳೆಗೆ ಅಕ್ರಮವಾಗಿ ದಾಖಲಾತಿ ಮಾಡಿಕೊಟ್ಟವರಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.