ETV Bharat / state

ರೌಡಿಶೀಟರ್​​​ ಸ್ಲಂ ಭರತನ 12 ಮಂದಿ ಸಹಚರರ ಬಂಧನ - Arrest of Slum Bharatha's Twelve Companions

ಇತ್ತೀಚೆಗೆ ಎನ್​ಕೌಂಟರ್​ಗೆ ಬಲಿಯಾದ ರೌಡಿ ಶೀಟರ್ ಸ್ಲಂ ಭರತನ ಸಹಚರರೆನ್ನಲಾದ ಹನ್ನೆರಡು ಜನರನ್ನು ಬಂಧಿಸಲಾಗಿದೆ. ಆರೋಪಿಗಳ ಮೇಲೆ ರಾಜಗೋಪಾಲ ನಗರ, ನಂದಿನಿ ಲೇಔಟ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Arrest of Rowdy Sheeter Slum Bharatha's Companions
ಸ್ಲಂ ಭರತನ ಹನ್ನೆರಡು ಸಹಚರರ ಬಂಧನ
author img

By

Published : Mar 19, 2020, 10:03 PM IST

ಬೆಂಗಳೂರು: ರೌಡಿ ಶೀಟರ್​ ಸ್ಲಂ ಭರತನ ಎನ್​ಕೌಂಟರ್ ಬೆನ್ನಲ್ಲೇ ಆತಣ ಸಹಚರರನ್ನು ಬಂಧಿಸಲಾಗಿದೆ.

ಉತ್ತರ ವಿಭಾಗ ಡಿಸಿಪಿ ಶಶಿ ಕುಮಾರ್​ ಇತ್ತೀಚೆಗೆ ಸ್ಲಂ ಭರತನನ್ನು ಎನ್​ಕೌಂಟರ್​ ಮಾಡಿದ್ದರು. ಆ ಬಳಿಕ ಹೆದರಿದ ರೌಡಿಗಳು ಒಬ್ಬರ ಮೇಲಂತೆ ಒಬ್ಬರು ಪೊಲೀಸರ ಮುಂದೆ ಶರಣಾಗುತ್ತಿದ್ದಾರೆ. ಅಲ್ಲದೆ ಸತತ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು, ರೌಡಿಗಳನ್ನು ಬಂಧಿಸುತ್ತಿದ್ದಾರೆ. ಇದೀಗ ಇಬ್ಬರು ಮಹಿಳೆಯರು ಸೇರಿದಂತೆ ಸ್ಲಂ ಭರತನ ಸಹಚರರೆನ್ನಲಾದ ಏಳು ಮಂದಿಯನ್ನು ಬಂಧಿಸಿದ್ದಾರೆ. ವಕೀಲೆ ಅಂತ ಹೇಳಿಕೊಂಡಿದ್ದ ಮಾಲಾ, ಭರತನ ತೀರಾ ಆಪ್ತೆ ಪೂಜಾ, ಬಾಗಲಗುಂಟೆ ಸಿದ್ದ, ಸ್ಲಂ ಮಧು, ನರಸಿಂಹ, ರುದ್ರೇಶ್, ರವಿ, ಶಿವರಾಮ್, ಸಂದೀಪ್ ಗೌಡ, ಶಂಕರ್,​ ಚಂದನ್,​ ಶಾಂತ್ ಕುಮಾರ್​ ಎಂಬುವರನ್ನು ಬಂಧಿಸಲಾಗಿದೆ.

ಸ್ಲಂ ಭರತನ ಹನ್ನೆರಡು ಮಂದಿ ಸಹಚರರ ಬಂಧನ

ಸ್ಲಂ ಭರತನ ಸಹಚರರು ಯಾವುದೇ ಪ್ರಕರಣಲ್ಲಿ ಭಾಗಿಯಾದ ಬಳಿಕ ಮೊಬೈಲ್ ಸ್ವಿಚ್​​ ಆಫ್ ಮಾಡಿಕೊಳ್ಳಿತ್ತಿದ್ದರು. ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಆಶ್ರಯಕ್ಕಾಗಿ ಪೂಜಾ ಹಾಗೂ ಮಾಲಾ ಮೊರೆ ಹೋಗ್ತಿದ್ದರು. ಪೂಜಾ, ಭರತನ ಸಹಚರರಿಗೆ ಹಣಕಾಸಿನ ನೆರವು ಮಾಡ್ತಿದ್ರೆ, ಮಾಲಾ ಇಂಟರ್​​ನೆಟ್​​​ ಕಾಲ್​ಗಳನ್ನು ಮಾಡುವ ಮೂಲಕ ಸ್ಲಂ ಭರತನ ಲಿಂಕ್ ಮಾಡಿಸುವ ಆಪರೇಟಿಂಗ್ ಕೆಲಸ ಮಾಡ್ತಿದ್ಲು ಎನ್ನಲಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಸ್ಲಂ ಭರತನ ಟೀಂ ಸೇರ್ಕೊಂಡಿದ್ದ ರುದ್ರೇಶ್ & ತಿಮ್ಮಯ್ಯ, ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಮಾಡಿಸಿಕೊಡ್ತಿದ್ರು. ಅದರಲ್ಲು ಹೆಚ್ಚಾಗಿ ಅಣ್ಣ-ತಮ್ಮಂದಿರ ಮಧ್ಯದ ಸಿವಿಲ್ ಪ್ರಕರಣಗಳನ್ನು ಬಗೆಹರಿಸಿಕೊಡುತ್ತಿದ್ದರಂತೆ.

ಸದ್ಯ ಬಂಧಿತ ಆರೋಪಿಗಳ ಮೇಲೆ ರಾಜಗೋಪಾಲ ನಗರ, ನಂದಿನಿ ಲೇಔಟ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.