ETV Bharat / state

ಬೆಂಗಳೂರಲ್ಲಿ ಪುಡಿರೌಡಿಗಳ ಅಟ್ಟಹಾಸ: ವ್ಯಕ್ತಿಗೆ ಚಾಕು ಇರಿತ, ಕಾರ್​ ಗ್ಲಾಸ್ ಒಡೆದು ಪುಂಡಾಟ - ರೌಡಿಶೀಟರ್ ನರಸಿಂಹ‌ ಅಲಿಯಾಸ್ ಕೂಸೆ

ತಮ್ಮ ಸಾಮರ್ಥ್ಯ ತೋರಿಸಲು ಅಮಾಯಕರ ಮೇಲೆ ದೌರ್ಜನ್ಯ ಎಸಗುತ್ತಿದ್ದ ಪುಡಿ ರೌಡಿಗಳನ್ನು ಬಂಧಿಸಲಾಗಿದೆ.

accused
ಆರೋಪಿ
author img

By

Published : Apr 27, 2023, 3:09 PM IST

Updated : Apr 27, 2023, 3:41 PM IST

ಕೃಷ್ಣಕಾಂತ್, ಡಿಸಿಪಿ, ದಕ್ಷಿಣ ವಿಭಾಗ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಕಂಡ ಕಂಡಲ್ಲಿ ಜನರನ್ನು ಅಡ್ಡ ಹಾಕುವ ಕಿರಾತಕರು ಹಲ್ಲೆ ಮಾಡಿ ಉದ್ಧಟತನ ತೋರುತ್ತಿದ್ದಾರೆ. ಇದೇ ರೀತಿ ಹವಾ ಮೈಂಟೇನ್​ ಮಾಡಲು ಅಟ್ಟಹಾಸ ಮೆರೆದಿದ್ದ ರೌಡಿಶೀಟರ್ ಕೈಗೆ ಗಿರಿನಗರ ಪೊಲೀಸ್ ಠಾಣೆಯ ಪೊಲೀಸರು ಕೈಕೋಳ ತೊಡಿಸಿದ್ದಾರೆ.

ರೌಡಿಶೀಟರ್ ನರಸಿಂಹ‌ ಅಲಿಯಾಸ್ ಕೂಸೆ, ಸಹಚರ ಕಾಂತರಾಜ್ ಬಂಧಿತರು. ಕೃತ್ಯದಲ್ಲಿ ಭಾಗಿಯಾಗಿದ್ದ ಯೋಗೇಶ್ ಸೇರಿ ಮೂವರ ವಿರುದ್ಧ ತಲೆಮರೆಸಿಕೊಂಡಿದ್ದು ಶೋಧಕಾರ್ಯ ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ನರಸಿಂಹ ಏರಿಯಾದಲ್ಲಿ ಹವಾ ಮೇಂಟೆನ್ ಮಾಡಬೇಕು, ಪೊಲೀಸರಿಗೆ ತನ್ನ ಬಗ್ಗೆ ಮಾಹಿತಿ ಕೊಡುವವರಿಗೆ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿದ್ದ. ಹಾಗಾಗಿ ಏಪ್ರಿಲ್ 25ರ ರಾತ್ರಿ ಗಿರಿ ನಗರದಲ್ಲಿದ್ದ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗ್ತಿದ್ದ ವೆಂಕಟೇಶ್ ಎಂಬಾತನಿಗೆ ಚಾಕು ಇರಿದಿದ್ದಾನೆ. ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: ಶಂಕಿತ ಉಗ್ರರಿಂದ ಪೆಟ್ರೋಲ್ ಪಂಪ್ ಉದ್ಯೋಗಿ ಅಪಹರಣ: ಜಿಪಂ ಸದಸ್ಯನ ಕಾರು ಚಾಲಕನಿಗೆ ಗುಂಡಿಕ್ಕಿ ಹತ್ಯೆಗೆ ಯತ್ನ

ಇದಿಷ್ಟೇ ಅಲ್ಲ, ಅದೇ ದಿನ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ರಸ್ತೆಯಲ್ಲಿ ಬರುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದ ನರಸಿಂಹ, ಕಾಂತರಾಜು ಮತ್ತು ಯೋಗೇಶ್ ಟೀಂ ಕಾರು ಚಾಲಕ ನಿತೀಶ್ ಎಂಬಾತನಿಗೆ ಮನ ಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲ, ಗಾಂಜಾ ನಶೆಯಲ್ಲಿದ್ದ ಆರೋಪಿಗಳು ರಾಡ್​ನಿಂದ ಕಾರ್ ಗ್ಲಾಸ್​ಗಳನ್ನು ಒಡೆದು ಪುಡಿ ಪುಡಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಮತ್ತು ಐಪಿಸಿ ಸೆಕ್ಷನ್ 324 ಅಡಿಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳಾದ ನರಸಿಂಹ ಮತ್ತು ಕಾಂತರಾಜು ಇಬ್ಬರನ್ನು ಬಂಧಿಸಲಾಗಿದ್ದು, ಯೋಗೇಶ್ ಅಲಿಯಾಸ್ ಯೋಗಿ ಸೇರಿದಂತೆ ಮತ್ತೆ ಮೂವರಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಪಿಸ್ತೂಲ್ ಹಿಡಿದು ದಿಢೀರ್​ ಶಾಲೆಗೆ ನುಗ್ಗಿದ ವ್ಯಕ್ತಿ.. ಮುಂದಾಗಿದ್ದೇನು?

ಪೊಲೀಸರ ಕಣ್ಣಿಗೆ ಪೆಪ್ಪರ್​ ಸ್ಪ್ರೇ, ಚಾಕುವಿನಿಂದ ಹಲ್ಲೆ ನಡೆಸಿದ್ದ ರೌಡಿಶೀಟರ್​: ಕಳೆದ ಅಕ್ಟೋಬರ್ 28, 2022 ರಂದು ಕರ್ತವ್ಯ ನಿರತ ಪೊಲೀಸ್​ ಸಿಬ್ಬಂದಿ ಮೇಲೆ ರೌಡಿಶೀಟರ್​ ಹಲ್ಲೆ ಮಾಡಿ ಪರಾರಿಯಾಗಿದ್ದ. ರೌಡಿಶೀಟರ್​ ವಿಜಯ್​ ಅಲಿಯಾಸ್​ ಗೊಣ್ಣೆ ವಿಜಿ ಗಿರಿನಗರ ಠಾಣೆಯ ಕಾನ್ಸ್​ಟೇಬಲ್​ಗಳಾದ ಕಿರಣ್​ ಹಾಗೂ ನೇತ್ರಾ ಕಣ್ಣಿಗೆ ಪೆಪ್ಪರ್​ ಸ್ಪ್ರೇ ಮಾಡಿ ಮತ್ತೋರ್ವ ಕಾನ್ಸ್​ಟೇಬಲ್​ ನಾಗೇಂದ್ರಗೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದನು. ಆರೋಪಿಯ ವಿರುದ್ಧ ಗಿರಿನಗರ ಪೊಲೀಸ್​ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 307ರಡಿ ಕೊಲೆಯತ್ನ, 332ರಡಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವ ಉದ್ದೇಶದ ಹಲ್ಲೆ ಹಾಗೂ 353ರಂತೆ ಕರ್ತವ್ಯನಿರತ ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 1994ರ ಎಂ ಜಿ ಕೃಷ್ಣಯ್ಯ ಹತ್ಯೆ: ನಿಯಮ ತಿದ್ದುಪಡಿ ಮೂಲಕ ಜೈಲಿನಿಂದ ಬಿಡುಗಡೆಯಾದ ಆನಂದ್​ ಮೋಹನ್

Last Updated : Apr 27, 2023, 3:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.