ಬೆಂಗಳೂರು: ಡೇಟಿಂಗ್ ಆ್ಯಪ್ ಒಂದರಲ್ಲಿ ಮಹಿಳೆಯರ ನಕಲಿ ಪ್ರೊಫೈಲ್ ಬಳಸಿ ಗ್ರಾಹಕರನ್ನು ವೇಶ್ಯಾವಾಟಿಕೆಗೆ ಸೆಳೆದು ಅಕ್ರಮವಾಗಿ ಹಣ ಸಂಪಾದನೆಯಲ್ಲಿ ಮಾಡುತ್ತಿದ್ದ ಆರು ಮಂದಿ ದಂಧೆಕೋರರನ್ನು ಸುದ್ದುಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಗ್ರಾಹಕರು ನೀಡಿದ ದೂರು ಆಧರಿಸಿ ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿದ್ದ ಮಂಜುನಾಥ್, ಮಲ್ಲಿಕಾರ್ಜುನಯ್ಯ, ಮಂಜುನಾಥ್, ಮೋಹನ್, ಹನುಮೇಶ್ ಮತ್ತು ರಾಜೇಶ್ ಎಂಬುವರನ್ನು ಬಂಧಿಸಲಾಗಿದೆ.
ಹಲವು ವರ್ಷಗಳಿಂದ ವೇಶ್ಯಾವಾಟಿಕೆ ಜಾಲದಲ್ಲಿದ್ದ ಆರೋಪಿಗಳು ವ್ಯವಸ್ಥಿತ ಸಂಚು ರೂಪಿಸಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಡೇಟಿಂಗ್ ಆ್ಯಪ್ ನಲ್ಲಿರುವ ಸುಂದರವಾದ ಹುಡುಗಿಯರ ಫೋಟೋಗಳನ್ನು ಬಳಸಿಕೊಂಡು ಗ್ರಾಹಕರಿಗೆ ಕಳುಹಿಸುತ್ತಿದ್ದರು. ನಂತರ ಗ್ರಾಹಕರು ಹಾಗೂ ಆರೋಪಿಗಳು ಹಣಕಾಸು ವ್ಯವಹಾರ ಮಾಡುತ್ತಿದ್ದರು. ಮಾತುಕತೆಯಂತೆ ಗೊತ್ತುಪಡಿಸಿದ ಯುವತಿಯರನ್ನು ಕಳುಹಿಸದೇ ಬೇರೆ ಯುವತಿಯರನ್ನು ಕಳುಹಿಸುತ್ತಿದ್ದರು.
ಗ್ರಾಹಕರು ಪ್ರಶ್ನಿದರೆ ಬೆದರಿಕೆ ಹಾಕಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವೇಶ್ಯವಾಟಿಕೆ ಜಾಲದಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವ ಆರೋಪಿಗಳು ಮಹಿಳೆಯರ ನಕಲಿ ಪ್ರೊಫೈಲ್ ಕ್ರಿಯೆಟ್ ಹಾಗೂ ಸರ್ವೀಸ್ ನೀಡುವುದಕ್ಕೆ ಪ್ರತ್ಯೇಕ ತಂಡ ರಚಿಸಿ ಸಂಘಟಿತವಾಗಿ ಕೃತ್ಯದಲ್ಲಿ ಭಾಗಿಯಾಗುತ್ತಿದ್ದರು. ಸುದ್ದುಗುಂಟೆಪಾಳ್ಯ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಹಲವು ಮಂದಿ ಗ್ರಾಹಕರನ್ನು ಹೆದರಿಸಿ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.
ಪ್ರತ್ಯೇಕ ಪ್ರಕರಣ, ಶೀಲ ಶಂಕಿಸಿ ಗಂಡನಿಂದ ಪತ್ನಿಯ ಹತ್ಯೆ: ಮತ್ತೊಂದು ಕಡೆ ನಡೆದ ಅಪರಾಧ ಪ್ರಕರಣದಲ್ಲಿ, ಶೀಲ ಶಂಕಿಸಿ ಪತ್ನಿಯನ್ನ ಪತಿಯೇ ಉಸಿರುಗಟ್ಟಿಸಿ ಸಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. 22 ವರ್ಷದ ನಾಜ್ ಕೊಲೆಯಾದ ಮಹಿಳೆ. ಹೆಂಡತಿಯನ್ನ ಕೊಂದು ಪತಿ ನಾಸೀರ್ ಹುಸೇನ್ ಪರಾಗಿಯಾಗಿದ್ದಾನೆ. ತಾವರೆಕೆರೆಯ ಸುಭಾಷ್ ನಗರದ ಫ್ಲಾಟ್ ನಲ್ಲಿ ಈ ಘಟನೆ ನಡೆದಿದೆ. ಆರೋಪಿ ನಾಸೀರ್ ಹುಸೇನ್ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಪತ್ನಿ ಗೃಹಿಣಿಯಾಗಿದ್ದಳು. ಪತ್ನಿಯನ್ನು ಕೊಂದು ಆಕೆ ಅಣ್ಣನಿಗೆ ಮೇಸೆಜ್ ಕಳುಹಿಸಿ ಪಾರರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಸುದ್ದುಗುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಬೀದಿ ನಾಯಿಗೆ ಆಹಾರ ಹಾಕುತ್ತಿದ್ದ ಯುವತಿಗೆ ಗುದ್ದಿದ ಎಸ್ಯುವಿ: ಕಾಂಜಾವಾಲಾ ಪ್ರಕರಣ ನೆನಪಿಸಿದ ಘಟನೆ
ಅನೈತಿಕ ಸಂಬಂಧ ಮುಂದುವರೆಸಲು ನಿರಾಕರಿಸಿದ ಮಹಿಳೆಯೊಬ್ಬಳಿಗೆ ಚಾಕುವಿನಿಂದ ಇರಿತ: ಬೆಂಗಳೂರಿನ ಆರ್.ಟಿ.ನಗರ ಠಾಣಾ ವ್ಯಾಪ್ತಿಯ ಮಠದಹಳ್ಳಿಯಲ್ಲಿ ಅನೈತಿಕ ಸಂಬಂಧ ಮುಂದುವರೆಸಲು ನಿರಾಕರಿಸಿದ ಮಹಿಳೆಯೊಬ್ಬಳಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿತ್ತು. ಚೂರಿ ಇರಿತಕ್ಕೊಳಗಾದ ಮಹಿಳೆಯನ್ನು ಹಬೀಬಾ ತಾಜ್ (30) ಎಂದು ಗುರುತಿಸಲಾಗಿದೆ. ಚಾಕು ಇರಿತಕ್ಕೆ ಒಳಗಾಗಿದ್ದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನೆ ಸಂಬಂಧಿಸಿದಂತೆ ಆರೋಪಿ ಶೇಕ್ ಮೆಹಬೂಬ್ (32)ನ್ನು ಪೊಲೀಸರು ಬಂಧಿಸಿದ್ದಾರೆ.
ಚಾಕು ಇರಿತಕ್ಕೊಳಗಾದ ಹಬೀಬಾ ತಾಜ್ಗೆ ವಿವಾಹವಾಗಿತ್ತು. ಕೆಲವು ವರ್ಷಗಳ ಹಿಂದೆ ಪತಿ ತೀರಿಕೊಂಡಿದ್ದರು. ಎರಡು ಮಕ್ಕಳ ಜೊತೆಗೆ ವಾಸವಾಗಿದ್ದ ಹಬೀಬಾಗೆ ಆರೋಪಿಯ ಪರಿಚಯವಾಗಿತ್ತು. ಆಟೋ ಚಾಲಕನಾಗಿರುವ ಆರೋಪಿಗೆ ಮದುವೆಯಾಗಿ ಮಕ್ಕಳಿದ್ದರು. ಆದರೂ ಆರೋಪಿ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಆರೋಪಿ ಶೇಕ್ ಮೆಹಬೂಬ್ ನಿಂದ ದೂರವಾಗಲು ಯತ್ನಿಸಿದ್ದ ಹಬೀಬಾಗೆ ಚಾಕುವಿನಿಂದ ಇರಿದು, ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು.