ETV Bharat / state

ಮೊಬೈಲ್- ದ್ವಿಚಕ್ರ ವಾಹನ ಖದೀಮರ ಬಂಧನ : 8 ಲಕ್ಷಕ್ಕೂ ಹೆಚ್ಚು ಮೌಲ್ಯದ ಮೊಬೈಲ್​ ವಶ - ಸಾರ್ವಜನಿಕರಿಂದ ಮೊಬೈಲ್ ಸುಲಿಗೆ ಮಾಡುತ್ತಿದ್ದ ಆರೋಪಿಗಳ ಬಂಧನ

ಮೊಬೈಲ್ ಕಳ್ಳತನದ ಜೊತೆಗೆ ದ್ವಿಚಕ್ರ ವಾಹನಗಳನ್ನ ಕೂಡ ಎಗರಿಸುತ್ತಿದ್ದ ಆರೋಪಿಗಳನ್ನ ವಿವಿ ಪುರಂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

Arrest of accused of mobile theft in Bangalore
ಸಾರ್ವಜನಿಕರಿಂದ ಮೊಬೈಲ್ ಸುಲಿಗೆ ಮಾಡುತ್ತಿದ್ದ ಆರೋಪಿಗಳ ಬಂಧನ
author img

By

Published : Apr 18, 2021, 1:39 PM IST

ಬೆಂಗಳೂರು : ಸಾರ್ವಜನಿಕರಿಂದ ಮೊಬೈಲ್ ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನ ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ.

ಇಮ್ರಾನ್, ಇರ್ಫಾನ್, ರಾಜು ಸಿಂಗ್ ಬಂಧಿತ ಆರೋಪಿಗಳು.‌ ಮೊಬೈಲ್ ಕಳ್ಳತನದ ಜೊತೆಗೆ ಇಮ್ರಾನ್ ಮತ್ತು ಇರ್ಫಾನ್ ಹಗಲು ಮತ್ತು ರಾತ್ರಿ ದ್ವಿಚಕ್ರ ವಾಹನಗಳನ್ನ ಕೂಡ ಕದಿಯುತ್ತಿದ್ದರು. ಮತ್ತು ಕದ್ದ ವಸ್ತುಗಳನ್ನು ಗೋರಿಪಾಳ್ಯದ ರಾಜುಸಿಂಗ್ ಎಂಬುವನಿಗೆ ಮಾರಿದ್ದರು ಎನ್ನಲಾಗ್ತಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜು ಸಿಂಗ್ ನನ್ನು ಬಂಧಿಸಿ ವಿಚಾರಿಸಿದಾಗ ಇವರು ಮಾಡಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಸದ್ಯ ಬಂಧಿತರಿಂದ 8.20 ಲಕ್ಷ ಮೌಲ್ಯದ 70 ಮೊಬೈಲ್ ಫೋನ್‌ಗಳು ಮತ್ತು 2 ದ್ವಿಚಕ್ರಗಳನ್ನ ವಾಹನ ವಶ‌‌ಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ವಿವಿ ಪುರಂ ಸೇರಿದಂತೆ ನಾನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದು, ಸದ್ಯ ಆರೋಪಿಗಳ ಬಂಧನದಿಂದ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ.

ಇದನ್ನೂ ಓದಿ : ದಾವಣಗೆರೆಯಲ್ಲಿ ಮಾಸ್ಕ್ ಅಭಿಯಾನ : ಮುಖಗವಸು ಹಾಕದ ವ್ಯಾಪಾರಿಗೆ ಎಸ್ಪಿ ಕಪಾಳಮೋಕ್ಷ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.