ETV Bharat / state

ಅನೈತಿಕ ಸಂಬಂಧ ಶಂಕೆ: ಮಹಿಳೆ ಕೊಲೆಗೈದು ಪರಾರಿಯಾದವ ಅರೆಸ್ಟ್‌ - ಕೊಲೆಗೈದು ಪರಾರಿಯಾಗಿದ್ದವನ ಬಂಧನ

ಕೊಲೆಗೂ ಮುನ್ನ ಫಿರ್ಮಾ ಮೇಲೆ ಪ್ರಿಯಕರ ಮೊಹಮದ್​ಗೆ ಅನುಮಾನ ಬಂದು ತಮ್ಮ ಊರಿಗೆ ಹೋಗೋಣ ಎಂದು ಖ್ಯಾತೆ ತೆಗೆದಿದ್ದನಂತೆ. ಆತನ ಜೊತೆ ಬರಲು ಒಪ್ಪದಿದ್ದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಮನೆಯಲ್ಲಿದ್ದ ಕಟ್ಟಿಗೆಯಿಂದ ಫಿರ್ಮಾ ತಲೆಗೆ ಹೊಡೆದು ಹತ್ಯೆ ಮಾಡಿ ಅಲ್ಲಿಂದ ಆರೋಪಿ ಪರಾರಿಯಾಗಿದ್ದಾನೆ.

ಬಂಧನ
ಬಂಧನ
author img

By

Published : Mar 25, 2021, 9:31 PM IST

ಬೆಂಗಳೂರು: ಮಾತಿಗೆ ಮಾತು ಬೆಳೆದು ಮಹಿಳೆಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾದ ವ್ಯಕ್ತಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಯಾದಗಿರಿ ಮೂಲದ ಫಿರ್ಮಾ (38) ಕೊಲೆಯಾದ ಮಹಿಳೆ. ಈಕೆ ಕಟ್ಟಿಕೊಂಡ ಗಂಡನನ್ನು ದೂರ ಮಾಡಿಕೊಂಡು ಮೊಹಮದ್ ಎಂಬುವವನೊಂದಿಗೆ ಆನೇಕಲ್ ತಾಲೂಕಿನ ಶಾಂತಿಪುರದಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಳು. ಕಳೆದ ಶನಿವಾರ ಫಿರ್ಮಾ ವಾಸವಿದ್ದ ಮನೆಯಲ್ಲಿ ಈಕೆಯ ಮೃತದೇಹ ಪತ್ತೆಯಾಗಿತ್ತು.

ಅಪರಿಚಿತನೊಬ್ಬ ಫಿರ್ಮಾ ತಲೆಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಈ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಈಕೆಯೊಂದಿಗಿದ್ದ ವ್ಯಕ್ತಿಯೇ ಕೊಲೆ ಮಾಡಿರುವ ಸುಳಿವು ಸಿಕ್ಕಿತ್ತು. ಕೊಲೆಗೂ ಮುನ್ನ ಫಿರ್ಮಾ ಮೇಲೆ ಪ್ರಿಯಕರ ಮೊಹಮದ್​ಗೆ ಅನುಮಾನ ಬಂದು ತಮ್ಮ ಊರಿಗೆ ಹೋಗೋಣ ಎಂದು ಖ್ಯಾತೆ ತೆಗೆದಿದ್ದ. ಆತನ ಜೊತೆ ಬರಲು ಒಪ್ಪದಿದ್ದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಮನೆಯಲ್ಲಿದ್ದ ಕಟ್ಟಿಗೆಯಿಂದ ಫಿರ್ಮಾ ತಲೆಗೆ ಹೊಡೆದು ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ.

ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ ಪೊಲೀಸರಿಗೆ ಸಿಸಿ ಕ್ಯಾಮರಾದಲ್ಲಿ ಮೆಹಬೂಬ್ ಶನಿವಾರದಂದು ಫಿರ್ಮಾ ಮನೆಗೆ ಬಂದು ಹೋಗಿರುವ ದೃಶ್ಯಗಳು ಲಭ್ಯವಾಗಿದ್ದವು. ಹೀಗಾಗಿ ಈತನ ಜಾಡು ಹಿಡಿದು ಹೊರಟ ಪೊಲೀಸರಿಗೆ ಯಾದಗಿರಿಯ ನೀಲಗಿರಿ ತೋಪಿನಲ್ಲಿ ಆರೋಪಿ ಇದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಮೊಹಮದ್​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕೋವಿಡ್ ಎರಡನೇ ಅಲೆ: ಸಾರ್ವಜನಿಕ ಸ್ಥಳಗಳಲ್ಲಿ ಹಬ್ಬ ಆಚರಣೆ ನಿಷೇಧಿಸಿ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.