ETV Bharat / state

ಬೆಂಗಳೂರು ಗಲಭೆ ಪ್ರಕರಣ: ರಾತ್ರೋರಾತ್ರಿ 84 ಆರೋಪಿಗಳ ಬಂಧನ​!

ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 84 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಇದುವರೆಗೆ 290 ಅರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

Bangalore violence case
ಗಲಭೆಕೋರರು ಅರೆಸ್ಟ್
author img

By

Published : Aug 15, 2020, 10:31 AM IST

ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಮತ್ತೆ 84 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಮೂಲಕ‌ ಪ್ರಕರಣ ಸಂಬಂಧ 290 ಮಂದಿ ಆರೋಪಿಗಳನ್ನು ಬಂಧಿಸಿದಂತಾಗಿದೆ‌.

ಕಳೆದ ರಾತ್ರಿ ಡಿ.ಜೆ.ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಹುಡುಕಿ ರಾತ್ರಿ 12 ಗಂಟೆ ವೇಳೆ ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಸುತ್ತುವರೆದು ಸೆರೆ ಹಿಡಿಯಲಾಗಿದೆ. ಘಟನೆಯಲ್ಲಿ ಒಟ್ಟಾರೆ ಇದುವರೆಗೆ 290 ಅರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

ಗಲಭೆ ವಿಡಿಯೋ ಪರಿಶೀಲನೆ ನಡೆಸಿ ಅರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಪೊಲೀಸರ ಕಣ್ತಪ್ಪಿಸಲು ಆರೋಪಿಗಳು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದ ವಿಡಿಯೋ ಸೇರಿದಂತೆ ಕೆಲ ದತ್ತಾಂಶಗಳನ್ನು ಡಿಲೀಟ್ ಮಾಡಿದ್ದಾರೆ. ಬಂಧಿತರಿಂದ ವಶಪಡಿಸಿಕೊಂಡಿರುವ ಮೊಬೈಲ್​ಗಳಲ್ಲಿ ಡಿಲೀಟ್ ಮಾಡಿರುವ ದತ್ತಾಂಶಗಳನ್ನು ತೆಗೆಸಲು ಟೆಕ್ನಿಕಲ್‌ ಟೀಂ ರವಾನೆ ಮಾಡಲಾಗಿದೆ. ಕೆಲ ಆರೋಪಿಗಳು ವಾಟ್ಸಾಪ್​ ಗ್ರೂಪ್​ಗಳಿಂದ ಎಗ್ಸಿಟ್ ಆಗಿದ್ದರ ಬಗ್ಗೆಯೂ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.