ETV Bharat / state

ಕೋವಿಡ್ ಕೇರ್ ಸೆಂಟರ್​​ಗಳ ವ್ಯವಸ್ಥೆಯೇನು - ಅಗತ್ಯ ವೈದ್ಯಕೀಯ ಉಪಕರಣಗಳು ಇದೆಯಾ?

author img

By

Published : May 8, 2021, 4:46 PM IST

ಸೋಂಕಿತರು ಮತ್ತು ಸೋಂಕು ಲಕ್ಷಣ ರಹಿತ (ರೋಗ ಲಕ್ಷಣ ಇಲ್ಲದೇ ಇರುವುದು) ಅಂದರೆ A symptomatic ಸೋಂಕಿತರ ಚಿಕಿತ್ಸೆಗಾಗಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಯ್ತು. ಇದಕ್ಕಾಗಿ ಕಮ್ಯುನಿಟಿ ಹಾಲ್, ಹಾಸ್ಟೆಲ್, ಶಾಲಾ ಕಾಲೇಜು ಆವರಣ, ಸ್ಟೇಡಿಯಂ, ಎಕ್ಸಿಬಿಷನ್ ಗ್ರೌಂಡ್​ಗಳನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಲಾಯ್ತು. ಸದ್ಯ ಬೆಂಗಳೂರಿನಲ್ಲಿ 14 ಕೋವಿಡ್​​ ಕೇರ್​​ ಸೆಂಟರ್​ಗಳಿವೆ.

Covid care centers
ಕೋವಿಡ್ ಕೇರ್ ಸೆಂಟರ್

ಬೆಂಗಳೂರು: ರಾಜ್ಯದಲ್ಲಿ ದಿನೇ - ದಿನೆ ಕೋವಿಡ್​​ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ಹಲವು ಒತ್ತಡಗಳ ನಡುವೆಯೂ ಕೋವಿಡ್ ಕೇರ್ ಸೆಂಟರ್​​ಗಳು ಕಾರ್ಯೋನ್ಮುಖವಾಗಿವೆ.

ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ 14 ಕೋವಿಡ್​​ ಕೇರ್​​ ಸೆಂಟರ್​ಗಳನ್ನು ನಿರ್ಮಾಣ ಮಾಡಲಾಗಿದ್ದು, 2,013 ಹಾಸಿಗೆ ವ್ಯವಸ್ಥೆ ಇದೆ. ಇದರಲ್ಲಿ 600 ರಷ್ಟು ಭರ್ತಿಯಾಗಿದ್ದರೆ, ಇನ್ನು ಉಳಿದವು ಖಾಲಿಯಾಗಿವೆ. ಅಂದ ಹಾಗೇ, ಕೋವಿಡ್ ಕೇರ್ ಸೆಂಟರ್​ನಲ್ಲಿ ರೋಗಿಗಳ ಮೇಲ್ವಿಚಾರಣೆ ಮಾಡಲು ಸರಿಯಾದ ವ್ಯವಸ್ಥೆ ಇದ್ಯಾ? ಏನೆಲ್ಲ ಮೂಲಭೂತ ಸೌಕರ್ಯಗಳು ಇರಲಿದೆ.

ಕೋವಿಡ್ ಕೇರ್ ಸೆಂಟರ್ ಎಂದರೇನು?

ನಗರದಲ್ಲಿ ಯಾವಾಗ ಸೋಂಕಿತರ ಸಂಖ್ಯೆ ಹೆಚ್ಚಾಯಿತೋ ಇತ್ತ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗತೊಡಗಿದ್ದವು. ಸೋಂಕಿತರು ಪರದಾಡುವ ಪರಿಸ್ಥಿತಿ ಉಂಟಾಯ್ತು. ಅದೆಷ್ಟೋ ಸಾವು - ನೋವು ಸಂಭವಿಸಿತು. ‌ಹೀಗಾಗಿ ಸೋಂಕಿತರು ಮತ್ತು ಸೋಂಕು ಲಕ್ಷಣ ರಹಿತ (ರೋಗ ಲಕ್ಷಣ ಇಲ್ಲದೇ ಇರುವುದು) ಅಂದರೆ A symptomatic ಸೋಂಕಿತರ ಚಿಕಿತ್ಸೆಗಾಗಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಯ್ತು. ಇದಕ್ಕಾಗಿ ಕಮ್ಯುನಿಟಿ ಹಾಲ್, ಹಾಸ್ಟೆಲ್, ಶಾಲಾ ಕಾಲೇಜು ಆವರಣ, ಸ್ಟೇಡಿಯಂ, ಎಕ್ಸಿಬಿಷನ್ ಗ್ರೌಂಡ್​ಗಳನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಲಾಯ್ತು.

50 ವರ್ಷದೊಳಗಿನವರ ರೋಗದ ತೀವ್ರತೆ ಕಡಿಮೆ ಇರುವವರಿಗೆ ಆಸ್ಪತ್ರೆ ಬದಲು ಕೋವಿಡ್ ಕೇರ್ ಸೆಂಟರ್​ನಲ್ಲಿ ಆರೈಕೆ ಮಾಡಲಾಗುತ್ತಿದೆ. ಮುಖ್ಯವಾಗಿ ಹೋಂ ಐಸೋಲೇಷನ್​​ಗೆ​​​​ ಮನೆಯಲ್ಲಿ ಪ್ರತ್ಯೇಕ ರೂಮ್​ ವ್ಯವಸ್ಥೆ ಇಲ್ಲದೇ ಇದ್ದರೆ ಕುಟುಂಬದ ಇತರ ಸದಸ್ಯರನ್ನು ಸೋಂಕಿನಿಂದ ರಕ್ಷಿಸಲು ಕೋವಿಡ್ ಕೇರ್ ಸೆಂಟರ್​ಗೆ ಹೋಗಬಹುದು. ಹಾಗೇಯೇ ವಲಸೆ ಬರುವ ಯುವಕರಿಗೆ ಸಹಕಾರಿಯಾಗಲಿದೆ. ಪಿಜಿಗಳಲ್ಲಿ ಅಥವಾ ಚಿಕ್ಕ ರೂಮ್​​ ಮಾಡಿಕೊಂಡು ವಾಸ ಇರುವವರಿಗೆ ಸೋಂಕು ದೃಢಪಟ್ಟಾಗ ಕಡಿಮೆ ರೋಗ ಲಕ್ಷಣ ಇದ್ದರೆ ಅವರು ಕೋವಿಡ್​​​ ಕೇರ್​​ ಸೆಂಟರ್​​ಗೆ ಹೋಗಬಹುದು.‌

ನಗರದಲ್ಲಿ ಎಷ್ಟಿವೆ ಕೋವಿಡ್ ಕೇರ್ ಸೆಂಟರ್ಸ್​​​​?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 14 ಕೋವಿಡ್ ಕೇರ್ ಸೆಂಟರ್​​ಗಳಿವೆ.‌ ಮೆಜೆಸ್ಟಿಕ್​ನ ಸರ್ಕಾರಿ ಆಯುರ್ವೇದ ಕಾಲೇಜು, ಚಾಮರಾಜಪೇಟೆಯ ಸರ್ಕಾರಿ ಬಾಲಕಿಯರ ಹಾಸ್ಟೆಲ್, ಹಜ್ ಭವನ, ಎಚ್ಎಎಲ್, ಕಾರ್ಮಿಕ ಭವನ, ಕೋರಮಂಗಲ ಒಳಾಂಗಣ ಕ್ರೀಡಾಂಗಣ, ಹೆಬ್ಬಾಳದ ಮಂಗಳ ರೈತ ಭವನ, ನವ್ಯ ಅಂತಾರಾಷ್ಟ್ರೀಯ ಕೋವಿಡ್ ಕೇರ್ ಸೆಂಟರ್, ಜ್ಞಾನ ಭಾರತಿ ಕ್ಯಾಂಪಸ್, ಶಾಂತಿನಗರ ಕೊರೊನಾ‌ಕೇರ್, ಯುನಾನಿ ಆಸ್ಪತ್ರೆ ಹಾಗೂ ಆಡುಗೋಡಿ ಬಾಷ್ ಸ್ಪೋರ್ಟ್ಸ್​​​ ಕಾಂಪ್ಲೆಕ್ಸ್, ಬೊಮ್ಮನಹಳ್ಳಿ ಕೋವಿಡ್​​​ ಕೇರ್ ಸೆಂಟರ್​ಗಳು ಇವೆ.

ಕೋವಿಡ್ ಕೇರ್ ಸೆಂಟರ್​ನಲ್ಲಿ ಏನೆಲ್ಲ ವ್ಯವಸ್ಥೆ ಇರಲಿದೆ?

ಕೊರೊನಾ ರೋಗ ಲಕ್ಷಣ ಇಲ್ಲದವರು ಹಾಗೂ ಕಡಿಮೆ ರೋಗ ಲಕ್ಷಣ ಇರುವವರು ಕೋವಿಡ್ ಕೇರ್ ಸೆಂಟರ್​​​ನಲ್ಲಿ ಚಿಕಿತ್ಸೆ ಪಡೆಯಬಹುದು.‌ 100 ರೋಗಿಗಳಿಗೆ ಒಬ್ಬ ವೈದ್ಯ, ಇಬ್ಬರು ನರ್ಸ್​ಗಳನ್ನು ನಿಯೋಜನೆ ಮಾಡಲಾಗುತ್ತದೆ. ನಿತ್ಯ ಎರಡು ಬಾರಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಇದನ್ನೆಲ್ಲ ಮೆಡಿಕಲ್ ಆಫೀಸರ್​​ನಿಂದ ಮಾನಿಟರಿಂಗ್ ಮಾಡಲಾಗುತ್ತದೆ.

ಇನ್ನು ಕೋವಿಡ್ ಕೇರ್ ಸೆಂಟರ್​ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಇರಲಿದೆ. ಸೆಂಟರ್​ನೊಳಗೆ ಒಂದು ಮೀಟರ್ ಅಂತರದಲ್ಲಿ ಹಾಸಿಗೆ ವ್ಯವಸ್ಥೆ ಇರಲಿದೆ. 24 ಗಂಟೆ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಸೇರಿದಂತೆ 10 ಜನರಿಗೆ ಒಂದು ಶೌಚಾಲಯ ವ್ಯವಸ್ಥೆ ಇರಲಿದೆ. ಸೋಂಕಿತರಿಗೆ ತುರ್ತು ಸೇವೆ ಅಗತ್ಯವಿದ್ದರೆ ಸ್ಥಳದಲ್ಲೇ ಆ್ಯಂಬುಲೆನ್ಸ್​​ ಸೇವೆ ಇರಲಿದೆ. ಉಸಿರಾಟದ ತೊಂದರೆ, ಆರೋಗ್ಯದಲ್ಲಿ ಏರುಪೇರು ಆದರೆ ಆ ಸೋಂಕಿತರನ್ನು ಸ್ಥಳೀಯ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಇನ್ನು ಆಸ್ಪತ್ರೆಯಲ್ಲಿ ಇರುವಂತೆ ವೈದ್ಯಕೀಯ ಉಪಕರಣಗಳು ಇರುವುದಿಲ್ಲ. ಬದಲಿಗೆ ಪಲ್ಸ್ ಆಕ್ಸಿ ಮೀಟರ್, ಬಿಪಿ ತಪಾಸಣೆ, ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಸೇರಿದಂತೆ ಬೇಸಿಕ್​​ ವೈದ್ಯಕೀಯ ಉಪಕರಣಗಳು ಇರಲಿದೆ.

ಕೋವಿಡ್ ಕೇರ್ ಸೆಂಟರ್​​​ ಫುಡ್ ಮೆನು:

ಕೋವಿಡ್​​​ ಕೇರ್​​ ಸೆಂಟರ್​ನಲ್ಲಿ ಬೆಳಗ್ಗೆ ತಿಂಡಿಗಾಗಿ ರವೆ ಇಡ್ಲಿ, ಪೊಂಗಲ್, ರೈಸ್ ಇಡ್ಲಿ, ಬಿಸಿ ಬೇಳೆ ಬಾತ್, ಚೌಚೌ ಬಾತ್, ಸೆಟ್ ದೋಸೆ ಎಂಬಂತೆ ದಿನಕ್ಕೆ ಯಾವುದಾದರೂ ಒಂದು ತಿಂಡಿ ಇರಲಿದೆ. ಹಾಗೇಯೇ ತಿಂಡಿ ನಂತರ ಸೂಪ್ ಹಾಗೂ ಗಂಜಿ ಇರಲಿದೆ. ಮಧ್ಯಾಹ್ನ ಹಾಗೂ ರಾತ್ರಿ 2 ಚಪಾತಿ, ಪಲ್ಯ, ಅನ್ನ, ದಾಲ್, ಮೊಸರು ಊಟ ಇರಲಿದೆ‌.

ಇದನ್ನೂ ಓದಿ: ಮೈಸೂರಿನಲ್ಲಿ ಕೋವಿಡ್​​ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಹೇಗೆ ನಡೆಯುತ್ತಿದೆ?

ಇನ್ನು ಸರ್ಕಾರಿ ಕೋವಿಡ್ ಕೇರ್ ಸೆಂಟರ್ ಬದಲು ಜನರು ಹೋಟೆಲ್ ಮೊರೆ ಹೋಗಬಹುದು‌. ಬಜೆಟ್ ಹೋಟೆಲ್, ತ್ರಿಸ್ಟಾರ್ ಹೋಟೆಲ್, ಪಂಚತಾರಾ ಹೋಟೆಲ್​ನಲ್ಲಿ ತಮ್ಮ ಖರ್ಚಿನಲ್ಲಿ ಉಳಿದುಕೊಳ್ಳಬಹುದು. ಸರ್ಕಾರಿ ಕೋವಿಡ್ ಕೇರ್ ಸೆಂಟರ್​ನಲ್ಲಿ ಉಚಿತವಾಗಿ ವ್ಯವಸ್ಥೆ ಇರಲಿದೆ. ಪ್ರಮುಖ ಖಾಸಗಿ ಆಸ್ಪತ್ರೆಗಳು ಹೋಟಲ್​​​ಗಳೊಂದಿಗೆ ಒಪ್ಪಂದ ಮಾಡಿಕೊಂಡು ಸಿಸಿಸಿಯನ್ನು ನಡೆಸುತ್ತಿವೆ. ಸದ್ಯ ಒಂದು ಸಾವಿರಕ್ಕೂ ಹೆಚ್ಚು ಸೋಂಕಿತರು ಇಲ್ಲಿ ಆರೈಕೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.