ETV Bharat / state

ನಿರ್ದೇಶಕ ಅರವಿಂದ್ ಕೌಶಿಕ್ ಸಿನಿಮಾಗೆ ಮತ್ತೆ ನಾಯಕಿಯಾದ ಬಿಗ್​ಬಾಸ್​ನ ದಿವ್ಯಾ ಉರುಡುಗ - ardambardha prema kathe film hero

ಅರವಿಂದ್​ ಕೌಶಿಕ್​ ನಿರ್ದೇಶನದ ಅರ್ದಂಬರ್ಧ ಪ್ರೇಮ ಕಥೆ ಚಿತ್ರದ ಹೀರೋ ಇಂಟ್ರಡಕ್ಷನ್​ ಟೀಸರ್​ ಅನ್ನು ವಿಜಯದಶಮಿ ದಿನ ಬಿಡುಗಡೆ ಗೊಳಿಸುವುದಾಗಿ ಚಿತ್ರತಂಡ ತಿಳಿಸಿದೆ.

Kn_Bng_01_Direct
ಅರ್ದಂಬರ್ಧ ಪ್ರೇಮ ಕಥೆ ಚಿತ್ರದ ನಟಿ
author img

By

Published : Sep 29, 2022, 2:43 PM IST

ಅರವಿಂದ್ ಕೌಶಿಕ್ ನಿರ್ದೇಶನದ ಹುಲಿರಾಯ ಸಿನಿಮಾದ ಮೂಲಕ ನಾಯಕಿಯಾಗಿ ಪರಿಚಯಗೊಂಡವರು ದಿವ್ಯಾ, ಇದೀಗಾ ಮತ್ತೆ ಅರವಿಂದ್ ಕೌಶಿಕ್ ನಿರ್ದೇಶನದ ʻಅರ್ದಂಬರ್ಧ ಪ್ರೇಮ ಕಥೆʼ ಎನ್ನುವ ಚಿತ್ರದಲ್ಲಿ ನಾಯಕಿ ನಟಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರ ಶೂಟಿಂಗ್​ ಈಗಾಗಲೇ ಮುಕ್ತಾಯಗೊಂಡಿರುವುದಾಗಿ ಚಿತ್ರತಂಡ ತಿಳಿಸಿದೆ.

ಆದರೆ ಈ ಚಿತ್ರದಲ್ಲಿ ನಾಯಕ ನಟ ಯಾರು ಅಂಬುದು ಮಾತ್ರ ಸಸ್ಪೆನ್ಸ್​​ ಆಗಿದ್ದು ಈ ವರೆಗೂ ಚಿತ್ರದ ನಾಯಕನನ್ನ ರಿವೀಲ್ ಮಾಡದೇ ಇರುವುದು ಸಿನಿಪ್ರಿಯರಲ್ಲಿ ಕುತುಹಲ ಹುಟ್ಟಿಸಿದೆ. ನಿರ್ದೇಶಕ ಅರವಿಂದ್ ಕೌಶಿಕ್ ಅದಾಗಲೇ ಟೀಸರ್ ಒಂದನ್ನು ಅನಾವರಣ ಮಾಡಿದ್ದಾರೆ. ಅದರಲ್ಲಿ ಕೂಡಾ ಹೀರೋ ಯಾರು ಎನ್ನುವ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯನ್ನಷ್ಟೇ ಉಳಿಸಿದ್ದಾರೆ.

Kn_Bng_01_Direct
ಅರ್ದಂಬರ್ಧ ಪ್ರೇಮ ಕಥೆ ಚಿತ್ರದ ನಟಿ

ವಿಜಯದಶಮಿ ದಿನ ಹೀರೋ ಇಂಟ್ರಡಕ್ಷನ್ ಟೀಸರ್ ಲೋಕಾರ್ಪಣೆ ಮಾಡಿ, ಆ ಮೂಲಕ ಅರ್ದಂಬರ್ಧ ಪ್ರೇಮ ಕಥೆಯ ನಾಯಕ ನಟನನ್ನು ಪರಿಚಯಿಸುವ ಯೋಜನೆಯನ್ನ ಚಿತ್ರತಂಡ ಹಾಕಿಕೊಂಡಿದೆ. ನಿರ್ದೇಶಕ ಅರವಿಂದ್ ಕೌಶಿಕ್ ಆರಂಭದಲ್ಲಿ ತುಘ್ಲಕ್, ನಮ್ ಏರಿಯಾಲ್ ಒಂದಿನ ಸಿನಿಮಾಗಳಿಂದ ಹೆಸರು ಮಾಡಿದವರು. ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಏಕಕಾಲದಲ್ಲಿ ಕೆಲಸ ನಿರ್ವಹಿಸುತ್ತಾ, ಬಣ್ಣದ ಜಗತ್ತಿಗೆ ಹೊಸ ಪ್ರತಿಭೆಗಳನ್ನು ಪರಿಚಯಿಸಿದವರು.

ರಕ್ಷಿತ್ ಶೆಟ್ಟಿ, ರಿಶಬ್ ಶೆಟ್ಟಿ, ರಚಿತಾರಾಮ್, ಅನೀಶ್, ಬಾಲು ನಾಗೇಂದ್ರ ಸೇರಿದಂತೆ ಇವತ್ತಿಗೆ ಹೆಸರು ಮಾಡಿರುವ ಸಾಕಷ್ಟು ನಟ ನಟಿಯರು ಆರಂಭದಲ್ಲಿ ಕೆಲಸ ಮಾಡಿದ್ದು ಇದೇ ಅರವಿಂದ್ ಅವರ ಜೊತೆಗೆ. ನಮ್ ಏರಿಯಾಲ್ ಒಂದಿನ ಮೂಲಕ ಅರ್ಜುನ್ ಜನ್ಯ ಪೂರ್ಣ ಪ್ರಮಾಣದ ಸಂಗೀತ ಸಂಯೋಜಕರಾಗಿ ಕಾರ್ಯಾರಂಭ ಮಾಡಿದ್ದರು. ಇದೀಗ ʻಅರ್ದಂಬರ್ಧ ಪ್ರೇಮ ಕಥೆʼಗೆ ಅರ್ಜುನ್​ ಜನ್ಯ ಹಾಡು ರೂಪಿಸಿರುವುದು ವಿಶೇಷ.

ಬಕ್ಸಸ್ ಮೀಡಿಯಾ ಅರ್ದಂಬರ್ಧ ಪ್ರೇಮ ಕಥೆ ಚಿತ್ರವನ್ನು ನಿರ್ಮಿಸಿದ್ದು, ಲೈಟ್ ಹೌಸ್ ಮೀಡಿಯಾ ಮತ್ತು ಆರ್​ಎಸಿ ವಿಷುವಲ್ಸ್ ಕೂಡಾ ಚಿತ್ರದ ನಿರ್ಮಾಣಕ್ಕೆ ಕೈಜೋಡಿಸಿವೆ. ಚಿತ್ರಕ್ಕೆ ಸೂರ್ಯ ಅವರ ಛಾಯಾಗ್ರಹಣ, ಸಂತೋಷ್ ರಾಧಾಕೃಷ್ಣನ್ ಶೀರ್ಷಿಕೆ ವಿನ್ಯಾಸದ ಜೊತೆಗೆ ಗ್ರಾಫಿಕ್ಸ್ ತಂತ್ರಜ್ಞಾನದ ಕೆಲಸವನ್ನೂ ನಿಭಾಯಿಸಿದ್ದಾರೆ.

ರ‍್ಯಾಪರ್ ಆಲ್ ಓಕೆ ಅಲೋಕ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರೂಪಕಿಯಾಗಿ ಹೆಸರು ಮಾಡಿರುವ ಶ್ರೇಯಾ ಬಾಬು, ವೆಂಕಟ್ ಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿತ್ ಶೆಟ್ಟಿ ಮೊದಲಾದವರ ತಾರಾಗಣ ಈ ಚಿತ್ರಕ್ಕಿದೆ. ಇದಲ್ಲದೇ ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದ ನಟರೊಬ್ಬರು ಈ ಚಿತ್ರದಲ್ಲಿದ್ದಾರೆ. ಇಷ್ಟರಲ್ಲೇ ಅವರು ಯಾರು ಎನ್ನುವ ಮಾಹಿತಿ ಕೂಡಾ ಹೊರ ಬೀಳಲಿದೆ.

ಇದನ್ನೂ ಓದಿ: ನಟ ರಾಜವರ್ಧನ್ ಅಭಿನಯದ 'ಗಜರಾಮ'ನಿಗೆ ಜೂ. ರೆಬೆಲ್ ಸ್ಟಾರ್ ಕ್ಲ್ಯಾಪ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.