ಬೆಂಗಳೂರು: ವಾಹನ ತಪಾಸಣೆ ನಡೆಸುತ್ತಿದ್ದ ಸಂಚಾರಿ ಪೊಲೀಸರ ಜೊತೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಗಲಾಟೆ ಮಾಡಿದ್ದಾರೆ. ಗುರುವಾರ ಸಂಜೆ ರಾಜಭವನದ ಬಳಿಯ ಖಾಸಗಿ ಹೋಟೆಲ್ ಮುಂದೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುವಾಗ ಶಾಸಕರ ಪುತ್ರಿಯಿರುವ ಕಾರನ್ನು ಅಡ್ಡಗಟ್ಟಿದ್ದರು.
ಇದಕ್ಕೆ ಅಸಮಾಧಾನಗೊಂಡ ಪುತ್ರಿ, ಇದು ಎಂಎಲ್ಎ ಕಾರು. ಯಾಕೆ ತಡೆಯುತ್ತೀರಾ ಎಂದು ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಯುವತಿ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಪೊಲೀಸರ ನಡೆಯನ್ನು ಪ್ರಶ್ನಿಸಿ ಸ್ಥಳದಿಂದ ಶಾಸಕರ ಪುತ್ರಿ ನಿರ್ಗಮಿಸಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ನಾಳೆ ಜಿದ್ದಾಜಿದ್ದಿನ ರಾಜ್ಯಸಭೆ ಚುನಾವಣೆ: ಮೂರು ಪಕ್ಷಕ್ಕೆ ಸಿಂಧು, ಅಸಿಂಧು ಮತಗಳ ತಲೆನೋವು