ದೇವನಹಳ್ಳಿ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ (ಬಯಾಪ) ದ ನೂತನ ಅಧ್ಯಕ್ಷರಾಗಿ ಎ. ರವಿ ದೇವನಹಳ್ಳಿಯ ಬಯಾಪ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಇದೇ ವೇಳೆ ಮಾತನಾಡಿದ ನೂತನ ಬಯಾಪ ಅಧ್ಯಕ್ಷ ಎ. ರವಿ. ಇಂದು ಗಾಂಧೀಜಿ ಹುತಾತ್ಮರಾದ ದಿನ. ಇಂತಹ ದಿನದಂದು ಅಧಿಕಾರ ಸ್ವೀಕರಿಸಿರುವುದು ಖುಷಿ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಚಿಕ್ಕ ವಯಸ್ಸಿನಿಂದ ನನ್ನನ್ನು ನೋಡಿದವರು. ಸ್ವತಃಹ ಅವರೇ ಕರೆದು ಜವಾಬ್ದಾರಿ ನೀಡಿದ್ದಾರೆ. ಅವರ ನಂಬಿಕೆಯನ್ನು ಉಳಿಸುವಂತಹ ಕೆಲಸ ಮಾಡುವೆ ಎಂದಿದ್ದಾರೆ.
ಬಯಾಪ ವ್ಯಾಪ್ತಿಯಲ್ಲಿ ಅಕ್ರಮ ಲೇಔಟ್ಗಳು ತಲೆ ಎತ್ತಿದ್ದು. ಅವುಗಳ ಬಗ್ಗೆ ಅಧಿಕಾರಿಗೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವೆ. ಹಾಗೆಯೇ ರಾಜಕಾಲುವೆ ಒತ್ತುವರಿಯನ್ನು ತನಿಖೆ ಮಾಡಿಸಿ ಸರ್ಕಾರದ ವಶಕ್ಕೆ ನೀಡುವೆ. ಪ್ರಮುಖವಾಗಿ ಬಯಾಪ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವುದಾಗಿ ಹೇಳಿದರು.