ETV Bharat / state

ರೇಣುಕಾಚಾರ್ಯ ಅಣ್ಣನ ಮಗನ ಸಾವಿನ ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ: ಗೃಹ ಸಚಿವ ಆರಗ - Araga Jnanendra Reactions

ಚಂದ್ರಶೇಖರ್​ ಸಾವಿನ ಪ್ರಕರಣವದಲ್ಲಿ ಸದ್ಯ ಯಾವುದೇ ಅನುಮಾನ ಇಲ್ಲ ಎಂದು ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

Araga Jnanendra Raection about Chandrasekhar death case

author img

By

Published : Nov 3, 2022, 7:27 PM IST

Updated : Nov 3, 2022, 7:39 PM IST

ಬೆಂಗಳೂರು: ರೇಣುಕಾಚಾರ್ಯ ಅಣ್ಣನ ಮಗ ಚಂದ್ರಶೇಖರ್​ ಸಾವಿನ ಪ್ರಕರಣವನ್ನು ಎಲ್ಲ ಆಯಾಮದಲ್ಲಿ ತನಿಖೆ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾರು ನಾಲೆಯಲ್ಲಿ ಸಿಕ್ಕಿದೆ. ಆ ಕಾರಿನಲ್ಲಿ ಅವರ ಶವವೂ ಪತ್ತೆಯಾಗಿದೆ. ಅಲ್ಲಿಂದ ಇನ್ನೂ ವರದಿ ಬರಬೇಕಿದೆ. ಇಲಾಖೆಗೆ ಈ‌ ಬಗ್ಗೆ ಸದ್ಯ ಯಾವುದೇ ಅನುಮಾನ ಇಲ್ಲ. ತನಿಖೆಯಿಂದ ಸತ್ಯ ಹೊರ‌ ಬರಬೇಕಾಗಿದೆ. ಏನಾಗಿದೆ, ಹೇಗೆ ಆಗಿದೆ ಎಂಬುದು ಸ್ವಲ್ಪ ಹೊತ್ತಿನಲ್ಲಿ ಗೊತ್ತಾಗಲಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದರು.

ಅ.31ರಂದು ಚಂದ್ರಶೇಖರ್​ ರಾತ್ರಿ ನಾಪತ್ತೆಯಾಗಿದ್ದರು. ಎಲ್ಲ ಠಾಣೆಗಳಲ್ಲೂ ಅಲರ್ಟ್ ಮಾಡಲಾಗಿತ್ತು. ಸಿಸಿ ಟಿವಿಗಳನ್ನೂ ಪರಿಶೀಲಿಸಲಾಗುತ್ತಿದೆ. ಈ ಪ್ರಕರಣವನ್ನ ವಿಶೇಷವಾಗಿ ಪರಿಗಣಿಸುತ್ತೇವೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು.

ಸಚಿವ ಆರಗ ಜ್ಞಾನೇಂದ್ರ

ವಯೋಮಿತಿ ಸಡಿಲಿಕೆ: 2022-23ನೇ ಸಾಲಿನಲ್ಲಿ ಐದು ಸಾವಿರ ಪೊಲೀಸ್‌ ಪೇದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಹುದ್ದೆಗೆ ಅರ್ಜಿ ಹಾಕುವವರ ವಯೋಮಿತಿ ಎರಡು ವರ್ಷಗಳ‌ವರೆಗೆ ಸಡಿಲಿಕೆ ಮಾಡಬೇಕು ಎಂಬ ಒತ್ತಡ ಇತ್ತು. ಶಾಸಕರು, ಮಂತ್ರಿಗಳಿಂದ ನಿರಂತರ ಒತ್ತಡ ಇತ್ತು. ಇಂದು ಈ ಬಗ್ಗೆ ಆದೇಶ ಹೊರಡಿಸಲಾಗಿದೆ. ಎರಡು ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದರು.

ಮೊದಲು ಎಸ್‌ಸಿ, ಎಸ್‌ಟಿಗೆ 27 ವರ್ಷ ವಯೋಮಿತಿ ನಿಗದಿ ಮಾಡಲಾಗಿತ್ತು. ಈಗ ಅದನ್ನ 29 ವರ್ಷಕ್ಕೆ ವಿಸ್ತರಿಸಲಾಗಿದೆ. ಸಾಮಾನ್ಯ ವರ್ಗಕ್ಕೆ 25 ವಯೋಮಿತಿ ಬದಲಿಗೆ 27ಕ್ಕೆ ವಿಸ್ತರಿಸಲಾಗಿದೆ. ಬುಡಕಟ್ಟು ಜನಾಂಗದವರಿಗೆ ವಯೋಮಿತಿಯನ್ನು 30 ರಿಂದ 32ಕ್ಕೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಇನ್ನೂ ಒಂದು ತಿಂಗಳ ಕಾಲಾವಕಾಶ ವಿಸ್ತರಿಸಲಾಗಿದೆ. ನವೆಂಬರ್ 30ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದರು.

ಇದನ್ನೂ ಓದಿ: ತುಂಗಾ ಕಾಲುವೆಗೆ ಬಿದ್ದ ಕಾರಿನಲ್ಲಿ ಅಣ್ಣನ ಮಗನ ಶವ ಪತ್ತೆ.. ಮುಗಿಲು ಮುಟ್ಟಿದ ರೇಣುಕಾಚಾರ್ಯ ಆಕ್ರಂದನ

Last Updated : Nov 3, 2022, 7:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.