ಬೆಂಗಳೂರು: ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿಯಾದ ಬೆನ್ನಲ್ಲೇ 16 ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ನೇಮಕಾತಿ ಪ್ರಕ್ರಿಯೆ ಮುಂದುವರೆದಿದ್ದು, ಸಿಎಂ ರಾಜಕೀಯ ಕಾರ್ಯದರ್ಶಿ, ನಿಗಮ ಮಂಡಳಿಗಳ ಅಧ್ಯಕ್ಷರ ನಂತರ ಇದೀಗ ಅಕಾಡೆಮಿಗಳ ಸರದಿಯಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ 16 ಅಕಾಡೆಮಿಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಇಲ್ಲವೇ ಮೂರು ವರ್ಷದ ಅವಧಿಗೆ ಅನ್ವಯವಾಗುವಂತೆ ಅಧ್ಯಕ್ಷರ ಮತ್ತು ಸದಸ್ಯರ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
ಯಾರಿಗೆ ಯಾವ ಪ್ರಾಧಿಕಾರದ ಅಧ್ಯಕ್ಷ ಪಟ್ಟ?
* ಕನ್ನಡ ಅಭಿವೃದ್ಧಿ ಪ್ರಾಧಿಕಾರ - ಟಿ.ಎಸ್ ನಾಗಾಭರಣ
* ಕುವೆಂಪು ಭಾಷಾ ಭಾರತಿ - ಅಜರ್ಕಳ ಗಿರೀಶ್ ಭಟ್
* ಕನ್ನಡ ಪುಸ್ತಕ ಪ್ರಾಧಿಕಾರ - ಎಮ್. ಎನ್. ನಂದೀಶ್
* ಕನ್ನಡ ಸಾಹಿತ್ಯ ಅಕಾಡೆಮಿ - ಡಾ.ಬಿ.ವಿ ವಸಂತ್ ಕುಮಾರ್
* ನಾಟಕ ಅಕಾಡೆಮಿ- ಭೀಮಸೇನ
* ಸಂಗೀತ ಹಾಗೂ ನೃತ್ಯ ಅಕಾಡೆಮಿ - ಹನೂರು ಅನಂತಕೃಷ್ಣ ಶರ್ಮಾ
* ಕರ್ನಾಟಕ ಶಿಲ್ಪ ಕಲಾ ಅಕಾಡಮಿ - ವೀರಣ್ಣ ಅರ್ಕಸಾಲಿ
* ಲಲಿತ ಕಲಾ ಅಕಾಡಮಿ - ಡಿ. ಮಹೇಂದ್ರ
* ಯಕ್ಷಗಾನ ಅಕಾಡೆಮಿ - ಪ್ರೊ.ಎಂ.ಎ ಹೆಗಡೆ
* ಜಾನಪದ ಅಕಾಡೆಮಿ - ಮಂಜಮ್ಮ ಜೋಗತಿ
* ತುಳು ಸಾಹಿತ್ಯ ಅಕಾಡೆಮಿ - ದಯಾನಂದ ಕತ್ತಲಸರ
* ಕೊಡವ ಸಾಹಿತ್ಯ ಅಕಾಡೆಮಿ - ಪಾರ್ವತಿ ಅಪ್ಪಯ್ಯ
* ಕೊಂಕಣಿ ಸಾಹಿತ್ಯ ಅಕಾಡೆಮಿ - ಡಾ. ಜಗದೀಶ್ ಪೈ
* ಬ್ಯಾರಿ ಸಾಹಿತ್ಯ ಅಕಾಡೆಮಿ - ರಹೀಂ ಉಚ್ಚಿಲ
* ಅರೆಭಾಷೆ ಸಾಹಿತ್ಯ ಅಕಾಡೆಮಿ - ಲಕ್ಷ್ಮಿ ನಾರಾಯಣ ಕಜಗದ್ದೆ
* ಬಯಲಾಟ ಅಕಾಡಮಿ - ಸೊರಬಕ್ಕನವರ, ಹಾವೇರಿ