ಬೆಂಗಳೂರು: ರಾಜ್ಯ ಹಜ್ ಸಮಿತಿಯ ನೂತನ ಸದಸ್ಯರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಒಟ್ಟು 16 ಸದಸ್ಯರ ಸಮಿತಿಯು ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ. ಐಎಎಸ್ ಅಧಿಕಾರಿ ಎ ಬಿ ಇಬ್ರಾಹಿಂರನ್ನು ರಾಜ್ಯ ಹಜ್ ಸಮಿತಿಯ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಈ ಹಿಂದಿನ ಹಜ್ ಸಮತಿ ಸದಸ್ಯರ ಕಾಲಾವಧಿ ಜನವರಿ 18ಕ್ಕೆ ಮುಕ್ತಾಯವಾಗಿದೆ. ಇಂದಿನಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷದ ಅವಧಿಗೆ ಹೊಸ ಹಜ್ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿದೆ.
ಹಜ್ ಸಮಿತಿಗೆ ನೇಮಕವಾದ ಸದಸ್ಯರು
1. ಸಯ್ಯದ್ ನಾಸೀರ್ ಹುಸೇನ್, ಎಂಪಿ
2. ಕನೀಜ್ ಫಾತೀಮಾ, ಶಾಸಕಿ
3. ಬಿ ಎಂ ಫಾರೂಕ್, ಎಂಎಲ್‌ಸಿ
4. ಎಂ ಡಿ ನಯೀಮ್, ಗ್ರಾಪಂ ಸದಸ್ಯ
5. ಮೊಹಮ್ಮದ್ ಕಬೀರ್ ಅಹಮ್ಮದ್, ಗ್ರಾಪಂ ಸದಸ್ಯ
6.ರುಕಿಯಾ ಬೇಗಂ, ನಗರಸಭೆ ಸದಸ್ಯೆ
7.ಮೊಹಮ್ಮದ್ ಹನೀಫ್ ಹಸಾಯ್
8.ಮೌಲಾನಾ ಹಫೀಸ್ ರಫೀಕ್
9.ಸಯ್ಯದ್ ಮಂಜೂರು ರಾಜ
10.ಖಸ್ರೋ ಖುರೇಷಿ
11.ರೌಫುದ್ದೀನ್ ಕಚೇರಿವಲಾಯ್
12.ರೆಹಮತುಲ್ಲಾ
13.ಚಾಂದ್ ಪಾಷಾ
14.ಮೊಹಿದ್ದೀನ್ ಬಿನ್ ಸಯ್ಯದ್ ಸುಬ್ಜಾನ್
ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮತ್ತು ಕರ್ನಾಟಕ ರಾಜ್ಯ ಹಜ್ ಸಮಿತಿಯ ಕಾರ್ಯಕಾರಿ ಅಧಿಕಾರಿ ಸೇರಿ ಒಟ್ಟು 16 ಸದಸ್ಯರನ್ನು ನೇಮಿಸಲಾಗಿದೆ.