ETV Bharat / state

ರಾಜ್ಯ ಸರ್ಕಾರದಿಂದ ನಾಲ್ಕು ಕ್ಲಸ್ಟರ್ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕ - ಕುಲಪತಿಗಳ ನೇಮಕ

ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ನಾಲ್ಕು ಕ್ಲಸ್ಟರ್ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕ ಮಾಡಿ ಆದೇಶ ಹೊರಡಿಸಿದೆ.

Vidhanasouda
ವಿಧಾನಸೌಧ
author img

By

Published : Nov 7, 2020, 9:25 PM IST

Updated : Nov 7, 2020, 9:32 PM IST

ಬೆಂಗಳೂರು: ನಾಲ್ಕು ಕ್ಲಸ್ಟರ್ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ‌ ಹಿಂದೆ ಈ ಸ್ಥಾನಕ್ಕೆ ವಿಶೇಷಾಧಿಕಾರಿಯನ್ನ ನೇಮಕ ಮಾಡಲಾಗಿತ್ತು. ಇದೀಗ ಈ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕ ಮಾಡಿದ್ದು, ಆ ಪೈಕಿ ಮಹಾರಾಣಿ ಕ್ಲಸ್ಟರ್ ವಿವಿಗೆ ಬೆಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರಜ್ಞ ಪ್ರೊ. ಎಲ್.ಗೋಮತಿ ದೇವಿ ಅವರನ್ನು ನೇಮಕ ಮಾಡಲಾಗಿದೆ.

letter
ಆದೇಶ ಪ್ರತಿ

ರಾಯಚೂರು ವಿವಿಗೆ ಧಾರವಾಡ ಕರ್ನಾಟಕ ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರೊ. ಡಾ. ಹರೀಶ್ ರಾಮಸ್ವಾಮಿ ಹಾಗೂ ಬೆಂಗಳೂರು ನೃಪತುಂಗ ವಿವಿಗೆ ಬಾಗಲಕೋಟೆ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಎಸ್. ಬಾಲಿ ಅವರನ್ನು ನೇಮಕ ಮಾಡಲಾಗಿದೆ. ಹಾಗೇ ಮಂಡ್ಯ ವಿವಿಗೆ ಎಸ್​ಜೆಬಿ ಇನ್ಸ್​​ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಂಶುಪಾಲರಾದ ಡಾ. ಪುಟ್ಟರಾಜು ಅವರನ್ನು ಕುಲಪತಿ ಹುದ್ದೆಗೆ ನೇಮಕ ಮಾಡಿ ಆದೇಶಿಸಿದೆ.

ಇದೇ ಮೊದಲ ಬಾರಿಗೆ ಕುಲಪತಿ ನೇಮಕ ಮಾಡಿದ್ದು, ಇವರ ಅಧಿಕಾರವಧಿ 4 ವರ್ಷ / 67 ವರ್ಷಗಳವರೆಗೆ ಅಂದರೆ ಯಾವುದು ಮೊದಲೋ ಅಲ್ಲಿಯವರೆಗೆ ಮುಂದುವರೆಯಬಹುದಾಗಿದೆ.

Last Updated : Nov 7, 2020, 9:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.