ETV Bharat / state

ಚಿತ್ರದುರ್ಗದ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ; ಸಮರ್ಥನೆ ಮಾಡಿಕೊಂಡ ವಸ್ತ್ರದ್ ಪರ ವಕೀಲರು

author img

By

Published : Feb 3, 2023, 7:05 AM IST

ಆಡಳಿತಾಧಿಕಾರಿ ನೇಮಕ ಮಾಡಿರುವ ಸರ್ಕಾರದ ಕ್ರಮ ಸರಿಯಾಗಿದೆ ಎಂದು ವಕೀಲ ಗಂಗಾಧರ ಗುರುಮಠ ವಾದ ಮಂಡಿಸಿದರು.

High Court
ಹೈಕೋರ್ಟ್‌

ಬೆಂಗಳೂರು :ಪೊಕ್ಸೊ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ಸರ್ಕಾರದ ಕ್ರಮ ಸರಿಯಾಗಿದೆ ಎಂದು ಆಡಳಿತಾಧಿಕಾರಿ ಪಿ.ಎಸ್. ವಸ್ತ್ರದ್​ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು. ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್​ ಅವರನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ಬೃಹನ್ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿತು.

ಪಿ.ಎಸ್.ವಸ್ತ್ರದ್​ ಪರ ಹಾಜರಾಗಿದ್ದ ವಕೀಲ ಗಂಗಾಧರ ಗುರುಮಠ ವಾದಮಂಡಿಸಿದರು. ಶರಣರು ತಮ್ಮ ಉತ್ತರಾಧಿಕಾರಿ ಪತ್ರದಲ್ಲಿ ಬರೆದಿರುವಂತೆ ವಿದ್ಯಾಪೀಠ ಮಠದ ಅವಿಭಾಜ್ಯ ಅಂಗ. ಮಠದ ವಿಸ್ತೃತ ಭಾಗವೇ ವಿದ್ಯಾಪೀಠ ಮತ್ತು ಟ್ರಸ್ಟ್. ಇವರೆಡನ್ನೂ ಹೊರಗಿಟ್ಟು ನೋಡಲು ಬರುವುದಿಲ್ಲ. ವಿದ್ಯಾಪೀಠ ಮತ್ತು ಟ್ರಸ್ಟ್‌ನಲ್ಲಿ ಶರಣರು ಏಕೈಕ ಟ್ರಸ್ಟಿ. ವಿದ್ಯಾಪೀಠದಲ್ಲಿ ಅವರ ಅನುಮತಿ ಇಲ್ಲದೇ ಯಾರೂ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ.

ಹೀಗಾಗಿ ಮಠ, ವಿದ್ಯಾಪೀಠ ಮತ್ತು ಟ್ರಸ್ಟ್‌ಗಳಿಗೆ ತೀರ್ಮಾನ ಕೈಗೊಳ್ಳುವ ಏಕೈಕ ವ್ಯಕ್ತಿ ಶರಣರೇ ಆಗಿದ್ದಾರೆ. ಈ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಎರಡೂ ಜಿಪಿಎಗಳಲ್ಲಿ ಎಲ್ಲಿಯೂ ಅವರು ಯಾರಿಗೂ ಹಸ್ತಾಂತರಿಸಿಲ್ಲ. ಹೀಗಾಗಿ ಆಡಳಿತಾಧಿಕಾರಿ ನೇಮಕ ಮಾಡಿರುವ ಸರ್ಕಾರದ ಕ್ರಮ ಸರಿಯಾಗಿದೆ ಎಂದು ವಾದಿಸಿದರು. ಅಲ್ಲದೆ, ಜಿಪಿಎ ನೀಡಿರುವುದು ವಿದ್ಯಾಪೀಠ ಮತ್ತು ಟ್ರಸ್ಟ್ ನಡೆಸುವುದಕ್ಕಾಗಿ ಅಲ್ಲ. ಅದಕ್ಕೆ ಬದಲಾಗಿ ಚೆಕ್‌ಗಳಿಗೆ ಸಹಿ ಮಾಡಲು ಮಾತ್ರ. ಅಂತೆಯೇ ಅವರು ಜಿಪಿಎ ಕೊಟ್ಟಿರುವುದು ಅವರು ಜೈಲಿಗೆ ಹೋದ ನಂತರ. ಆದ್ದರಿಂದ ವಿಚಾರಣಾಧೀನ ಕೈದಿಯು ಇಂತಹ ಜಿಪಿಎ ನೀಡುವ ಮುನ್ನ ಜೈಲು ಸೂಪರಿಂಟೆಂಡೆಂಟ್ ಅವರ ಪೂರ್ವಾನುಮತಿ ಪಡೆದಿರಬೇಕು. ಹಾಗಾಗಿ, ಶರಣರ ಜಿಪಿಎ ಅನೂರ್ಜಿತವಾಗಲಿದೆ ಎಂದು ವಾದಿಸಿದ್ದರು.

ಶರಣರಿಗೆ ವ್ಯಕ್ತಿಗತವಾಗಿ ಲಭಿಸಿರುವ ಧಾರ್ಮಿಕ ಸ್ವಾತಂತ್ರ್ಯ ಮುಂದುವರಿಸಲಾಗಿದ್ದು, ಇದಕ್ಕೆ ಯಾವ ನಿರ್ಬಂಧವೂ ಇಲ್ಲ. ಅಷ್ಟರಮಟ್ಟಿಗೆ ಮಾತ್ರ ಅವರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಆದರೆ, ಜೈಲಿನಲ್ಲಿ ಇರುವ ಮಠಾಧಿಪತಿಗೆ ಸಂವಿಧಾನ ಅಥವಾ ಇತರ ಕಾನೂನುಗಳ ರಕ್ಷಣೆ ಮತ್ತು ಸವಲತ್ತುಗಳು ಸಿಗುವುದಕ್ಕೆ ಸಾಧ್ಯವಿಲ್ಲ.

ಆದ್ದರಿಂದ, ಅರ್ಜಿದಾರರ ವಾದ ತಪ್ಪು ಗ್ರಹಿಕೆಯಿಂದ ಕೂಡಿದೆ. ಅಷ್ಟಕ್ಕೂ ಶರಣರು ಮಠದ ಪರಂಪರೆಯ ಅನುಸಾರ ತಮ್ಮ ಜೀವಿತಾವಧಿಯಲ್ಲಿ ಉತ್ತರಾಧಿಕಾರಿ ನೇಮಿಸಿದ ಪತ್ರಕ್ಕೆ ಸರ್ಕಾರದ ಅನುಸಮರ್ಥನೆ ಕೋರುವ ಸಂಪ್ರದಾಯವಿದೆ. ಹೀಗಾಗಿ, ಆಡಳಿತಾಧಿಕಾರಿ ನೇಮಕ ಪ್ರಶ್ನಿಸಲು ಬರುವುದಿಲ್ಲ. ಆದ್ದರಿಂದ, ಆಡಳಿತಾಧಿಕಾರಿ ನೇಮಕ ರದ್ದು ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಪ್ರಕರಣದ ಹಿನ್ನೆಲೆ :ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು, ಪೊಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದು, ರಾಜ್ಯ ಸರ್ಕಾರ ಪಿ.ಎಸ್.ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಅವರು 2022ರ ಡಿಸೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದರು. ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸಂವಿಧಾನಬಾಹಿರ ಎಂದು ಅರ್ಜಿದಾರರು ವಾದ ಮಂಡಿಸಿದ್ದರು.

ಇದನ್ನೂ ಓದಿ :ಮುರುಘಾ ಶರಣರು ಅಧಿಕಾರ ಚಲಾಯಿಸುವಂತಿಲ್ಲ ಎಂದು ಆದೇಶಿಸಿದ್ದ ಪ್ರಕರಣ ಮತ್ತೊಂದು ಪೀಠಕ್ಕೆ ವರ್ಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.