ETV Bharat / state

ಬೆಂಗಳೂರಿನ ಟಾಟಾ ಸಂಸ್ಥೆಯಲ್ಲಿ ಲೈಬ್ರರಿ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ; 55 ಸಾವಿರ ರೂವರೆಗೆ ವೇತನ

ಲೈಬ್ರರಿ ಸೈನ್ಸ್​ನಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

Application Invitation for the post of Library Assistant in Tata Institute, Bangalore

author img

By

Published : Jun 28, 2023, 12:25 PM IST

ಬೆಂಗಳೂರಿನಲ್ಲಿರುವ ಟಾಟಾ ಇನ್ಸುಟಿಟ್ಯೂಟ್​ ಆಫ್​ ಫಂಡಮೆಂಟಲ್​ ರಿಸರ್ಚ್​ (ಟಿಐಎಫ್​ಆರ್​)ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಲೈಬ್ರರಿ ಟ್ರೈನಿ, ಕ್ಲರ್ಕ್​ ಟ್ರೈನಿ ಸೇರಿದಂತೆ ಒಟ್ಟು ನಾಲ್ಕು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಲೈಬ್ರರಿ ಸೈನ್ಸ್​ನಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕವಾಗಿದೆ.

ಹುದ್ದೆ ವಿವರ: ಲೈಬ್ರರಿ ಟ್ರೈನಿ, ಕ್ಲರ್ಕ್​ ಟ್ರೈನಿ, ಇಂಜಿನಿಯರ್​​ ಟ್ರೈನಿ, ಟೆಪರೊರಿ ಸೈಂಟಿಫಿಕ್​ ಅಸಿಸ್ಟೆಂಟ್​ ಬಿ ಈ ಎಲ್ಲ ಹುದ್ದೆಗಳಿಗೆ ತಲಾ ಒಬ್ಬ ಅಭ್ಯರ್ಥಿಗಳ ನೇಮಕಾತಿ ನಡೆಸಲಾಗುವುದು.

ವಿದ್ಯಾರ್ಹತೆ:

  • ಲೈಬ್ರರಿ ಟ್ರೈನಿ: ಬಿಎಸ್ಸಿ ಮತ್ತು ಬಿಲಿಬ್​ ಪದವಿ ಅಥವಾ ಎಂಲಿಬ್​ ಪದವಿ - 22 ಸಾವಿರ ರೂ ಮಾಸಿಕ ವೇತನ
  • ಕ್ಲರ್ಕ್​ ಟ್ರೈನಿ: ಪದವಿ ಜೊತೆಗೆ ಕಂಪ್ಯೂಟರ್​ ಜ್ಞಾನ - 22 ಸಾವಿರ ರೂ ಮಾಸಿಕ ವೇತನ
  • ಇಂಜಿನಿಯರ್​ ಟ್ರೈನಿ: ಐಟಿ ಅಥವಾ ಐಎಸ್​ ಅಥವಾ ಟೆಲಿ ಕಮ್ಯೂನಿಕೇಷನ್​ನಲ್ಲಿ ಬಿಟೆಕ್​, ಬಿಇ ಪದವಿ - 35 ಸಾವಿರ ಮಾಸಿಕ ವೇತನ
  • ಟೆಂಪರರಿ ಸೈಂಟಿಫಿಕ್​ ಅಸಿಸ್ಟೆಂಟ್​​: ಲೈಬ್ರಿರಿ ಸೈನ್ಸ್​ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ- 55,600 ರೂ ಮಾಸಿಕ ವೇತನ

ವಿಶೇಷ ಸೂಚನೆ: ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕವಾಗಿದ್ದು, ಒಂದು ವರ್ಷದ ಗುತ್ತಿಗೆ ಅವಧಿಗೆ ನೇಮಕ ಮಾಡಲಾಗುತ್ತಿದೆ.

ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕಂಪ್ಯೂಟರ್​ ಜ್ಞಾನ ಜೊತೆಗೆ ಲಟೆಕ್ಸ್​​ ಟೈಪಿಂಗ್​ ಕೌಶಲ್ಯವನ್ನು ಹೊಂದಿರಬೇಕು.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 28 ವರ್ಷ ಆಗಿದೆ. ಟಿಐಆರ್​ಎಫ್​ ನಿಯಮ ಅನುಸಾರ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಆಯ್ಕೆ ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಟ್ರೇಡ್​ ಪರೀಕ್ಷೆ ಅಥವಾ ಕೌಶಲ್ಯ ಪರೀಕ್ಷೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಇದಾದ ಬಳಿಕ ಅಪ್ಲಿಕೇಷನ್​ ಪ್ರಿಂಟ್​ ಪಡೆದು ಶೈಕ್ಷಣಿಕ ವಿದ್ಯಾರ್ಹತೆ, ಅನುಭವ ಸೇರಿದಂತೆ ಇನ್ನಿತರ ಅಗತ್ಯ ದಾಖಲಾತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಿದೆ. ಆನ್​ಲೈನ್​ ಅರ್ಜಿ ಸಲ್ಲಿಕೆಗೆ 10 ಜುಲೈ ಕಡೆಯ ದಿನವಾದರೆ, ದಾಖಲಾತಿಗಳನ್ನು ಆಫ್​ಲೈನ್​ ಮೂಲಕ ಕಳುಹಿಸಲು ಜುಲೈ 15 ಕಡೆಯ ದಿನವಾಗಿದೆ.

ಅರ್ಜಿಗಳನ್ನು ಸಲ್ಲಿಸುವ ವಿಳಾಸ

ಟಾಟಾ ಇನ್ಸ್​ಟಿಟ್ಯೂಟ್​ ಆಫ್​ ಫಂಡಮೆಂಟಲ್​ ರಿಸರ್ಚ್​​, ಸೆಂಟರ್​ ಫಾರ್​ ಅಪ್ಲಿಕೇಬಲ್​ ಮ್ಯಾಥಮೆಟಿಕ್ಸ್​​, ಪೋಸ್ಟ್​ ಬಾಕ್ಸ್​ ನಂ 6503, ಜಿಕೆವಿಕೆ ಪೋಸ್ಟ್​​ ಆಫೀಸ್​, ಶಾರಾದಾ ನಗರ್​​, ಚಿಕ್ಕಬೊಮ್ಮಸಂದ್ರ, ಬೆಂಗಳೂರು 560065.

ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಈ tifr.res.in ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ITPB Jobs: ಐಟಿಬಿಪಿಯಲ್ಲಿ 458 ಕಾನ್ಸ್​ಟೇಬಲ್​ ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಪೂರ್ಣ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.