ETV Bharat / state

ಧರಣಿ ಕೈಬಿಟ್ಟ ಕಾಂಗ್ರೆಸ್ ಸದಸ್ಯರು: ಪರಿಷತ್​​ನಲ್ಲಿ ಎಪಿಎಂಸಿ ತಿದ್ದುಪಡಿ ವಿಧೇಯಕ ಚರ್ಚೆ ಆರಂಭ

ಬೆಳಗ್ಗಿನಿಂದ ಬಾವಿಗಿಳಿದು ಧರಣಿ ನಡೆಸಿದ್ದ ಕಾಂಗ್ರೆಸ್ ಸದಸ್ಯರು ಧರಣಿ ವಾಪಸ್ ಪಡೆದ ಹಿನ್ನೆಲೆ ಸಭಾಪತಿಗಳು ವಿಧೇಯಕ ಮಂಡನೆಗೆ ಅವಕಾಶ ಮಾಡಿಕೊಟ್ಟರು.

Bangalore
ಪರಿಷತ್​​ನಲ್ಲಿ ಎಪಿಎಂಸಿ ತಿದ್ದುಪಡಿ ವಿಧೇಯಕ ಚರ್ಚೆ ಆರಂಭ...
author img

By

Published : Dec 9, 2020, 6:09 PM IST

ಬೆಂಗಳೂರು: ವಿಧಾನ ಪರಿಷತ್​ನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಎಪಿಎಂಸಿ ತಿದ್ದುಪಡಿ ವಿಧೇಯಕ ಮಂಡಿಸಿದರು. ಬೆಳಗ್ಗಿನಿಂದ ಸದನದ ಬಾವಿಗಿಳಿದು ಧರಣಿ ನಡೆಸಿದ್ದ ಕಾಂಗ್ರೆಸ್ ಸದಸ್ಯರು ಧರಣಿ ವಾಪಸ್ ಪಡೆದ ಹಿನ್ನೆಲೆ ಸಭಾಪತಿಗಳು ವಿಧೇಯಕ ಮಂಡನೆಗೆ ಅವಕಾಶ ಮಾಡಿಕೊಟ್ಟರು.

ಎಪಿಎಂಸಿ ಕಾಯ್ದೆಯಲ್ಲಿ ರೈತರಿಗೆ ಅನುಕೂಲ ಆಗುವ ಮಹತ್ವದ ಎರಡು ಬದಲಾವಣೆ ಮಾಡಿ ತಿದ್ದುಪಡಿ ತರಲಾಗಿದೆ. ಚರ್ಚೆ ನಡೆಸಿದ ನಂತರವೇ ಈ ತಿದ್ದುಪಡಿ ತರಲಾಗಿದೆ. ರಾಜ್ಯದ 28 ಜಿಲ್ಲೆಯಲ್ಲಿ ಓಡಾಡಿ ಎಲ್ಲಾ ಎಪಿಎಂಸಿಗಳಿಗೆ ಭೇಟಿ ನೀಡಿ ರೈತರ ಜತೆ ಚರ್ಚಿಸಿದ್ದೇನೆ. ರೈತರು ಕಳೆದ ಮೂರು ವರ್ಷದಲ್ಲಿ 25 ಕೋಟಿ‌ ಮೊತ್ತದಷ್ಟು ಪೆನಾಲ್ಟಿ ತುಂಬಿದ್ದಾರೆ. ಇದನ್ನು ತಪ್ಪಿಸುವುದು ಸಹ ನಮ್ಮ ಉದ್ದೇಶ ಎಂದರು.

ನಾವು ಸಮಯ ಹಾಳು ಮಾಡಿಲ್ಲ: ಭೋಜನ ವಿರಾಮ ನಂತರ ಕಲಾಪ ಆರಂಭವಾದಾಗ ಬಾವಿಯಲ್ಲಿದ್ದು ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದರು. ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಸರ್ಕಾರ ನಮಗೆ ಚರ್ಚೆಗೆ ಅವಕಾಶ ನೀಡಬೇಕು. ಇಲ್ಲಿಯವರೆಗೆ ಸಮಯ ಹಾಳು ಮಾಡಿದ್ದು ಯಾರು? ಬಹು ಅಮೂಲ್ಯ ಸಮಯ ಹಾಳು ಮಾಡಿದ್ದು ಬಿಜೆಪಿಯವರು. ಬಿಲ್ ಪಾಸ್ ಆಗುವ ಮುನ್ನ ಚರ್ಚೆ ಆಗಬೇಕು. ರೈತರ ಬಗ್ಗೆ ಸರ್ಕಾರಕ್ಕೆ ಆಸಕ್ತಿ ಇಲ್ಲ. ಆದರೂ ನಾನು ನಮ್ಮ ಸದಸ್ಯರಿಗೆ ಸ್ಥಾನಕ್ಕೆ ವಾಪಸ್ ಬರುವಂತೆ ಕೋರುತ್ತೇನೆ ಎಂದರು. ಕಾಂಗ್ರೆಸ್ ಸದಸ್ಯರೆಲ್ಲಾ ವಾಪಸ್ ಸ್ಥಾನಕ್ಕೆ ತೆರಳಿ ಕುಳಿತರು.

ಸಭಾಪತಿಗಳು 2020ನೇ ಸಾಲಿನ ಎಪಿಎಂಸಿ ವಿಧೇಯಕದ ಮೇಲೆ ಚರ್ಚೆಗೆ ಅವಕಾಶ ನೀಡಿದರು. ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ರಾಜ್ಯದಿಂದ ತಮಿಳುನಾಡಿಗೆ ದೊಡ್ಡ ಮಟ್ಟದಲ್ಲಿ ಧಾನ್ಯಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದಾರೆ. ಹೊಲದಿಂದ ಬೆಳೆ ಸಂಗ್ರಹಿಸಿಡುವ, ಮನೆಯಲ್ಲಿ ಕೆಲ ದಿನ ಕಾಪಾಡಿಕೊಳ್ಳುವ ಅವಕಾಶ ಇಲ್ಲ. ಕನಿಷ್ಠ ಎರಡು ದಿನ ಸಂರಕ್ಷಿಸಿ ಇಡುವ ಕೋಲ್ಡ್ ಸ್ಟೋರೇಜ್ ಸೌಲಭ್ಯ ಒದಗಿಸುವ ಕಾರ್ಯ ಆಗುತ್ತಿಲ್ಲ. ಸುಧಾರಣೆ ಆಗಬೇಕು. ಇದರ ನೆಪದಲ್ಲಿ ಅದು ಎಲ್ಲೆಂದರಲ್ಲಿ ಮಾರುವಂತೆ ಆಗಬಹುದು. ಈ ತಿದ್ದುಪಡಿ ಇಲ್ಲದಿದ್ದರೂ ಆಗಲೂ ಎಲ್ಲೆಂದರಲ್ಲಿ ರೈತರು ಬೆಳೆದ ಬೆಳೆ ಮಾರಾಟ ಆಗುತ್ತಿದೆ. ಮೈಸೂರು ಭಾಗದ ರೈತರು ಹತ್ತಿ ಬೆಳೆಯುತ್ತಾರೆ. ಆದರೆ ಇವು ನಮ್ಮ ಮಾರುಕಟ್ಟೆಗೆ ಬರುತ್ತಿಲ್ಲ. ತಮಿಳುನಾಡಿಗೆ ತೆರಳುತ್ತಿದೆ. ದಯವಿಟ್ಟು ರೈತರಿಗೆ ಅನುಕೂಲ ಆಗುವ ಕೆಲಸ ಮಾಡಿ ಎಂದು ಸಲಹೆಯಿತ್ತರು.

ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕಪ್ಪು ಹಣ ಚಲಾವಣೆ ಜಾರಿಗೆ ಬರಲಿದೆ. ಇದರಿಂದ ರೈತರಿಗೆ ಅನುಕೂಲ ಆಗಲಿದೆ. ಇಲ್ಲಿ ಸಮಸ್ಯೆ ಆದಾಗ ಇದರ ವಿಚಾರಣೆ ಎಲ್ಲಿ ನಡೆಯಲಿದೆ ತಿಳಿಯುತ್ತಿಲ್ಲ. ಸಹಾಯಕ ಆಯುಕ್ತ, ಜಿಲ್ಲಾಧಿಕಾರಿಗಳು ಹೇಳಿದ ಕೆಲಸ ಮಾಡುವುದಿಲ್ಲ. ಇವರಲ್ಲಿ ಕೆಲವರು ಮಹಾಭ್ರಷ್ಟರು. ಇವರ ಮೂಲಕ ದೂರಿನ ತನಿಖೆ ಒಂದು ತಿಂಗಳಲ್ಲಿ ನಡೆಸುವ ಭರವಸೆ ಕೊಡುತ್ತಾರೆ‌. ಇದು ಸಾಧ್ಯವೇ? ಮಾಲ್ ಸಂಸ್ಕೃತಿ ಬಂದಿದೆ. ಡಿ-ಮಾರ್ಟ್ ಬಂದಿದೆ. ಇದು ತಾನಿರುವ ಐದು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ದಿನಸಿ ಅಂಗಡಿಗೆ ವ್ಯಾಪಾರ ಇಲ್ಲದಂತಾಗಿದೆ. ಈಗ ಜಿಯೋ ಮಾರ್ಟ್ ಬರ್ತಿದೆ. ಇದು ಇಡೀ ವ್ಯವಸ್ಥೆಯನ್ನು ನುಂಗಿ ಹಾಕಲಿದೆ. ಇಂಥವುಗಳಿಗೆ ನಮ್ಮ ಸರ್ಕಾರದ ಈ ಕಾಯ್ದೆ ತಿದ್ದುಪಡಿ ಸಹಾಯ ಮಾಡಲಿದೆ. ಬಹುರಾಷ್ಟ್ರೀಯ ಕಂಪನಿಗಳು ಬಂದು ಎಪಿಎಂಸಿಗಳ ಕುತ್ತಿಗೆ ಚಿವುಟಿ ಹಾಕುತ್ತವೆ. ಇದರಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಬೇಡ ಎಂದು ಮನವಿ ಮಾಡಿದರು.

ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಸಲಹೆ ಮೇರೆಗೆ ಮಧ್ಯವರ್ತಿ ವಿಚಾರ ಪ್ರಸ್ತಾಪಿಸಿದ ಮರಿತಿಬ್ಬೇಗೌಡರು, ಮಧ್ಯವರ್ತಿಗಳು ಇಲ್ಲದೇ ವ್ಯವಸ್ಥೆ ಇಲ್ಲದಂತಾಗಿದೆ. ಶೇ. 80ರಷ್ಟು ಮಂದಿ ತಾವು ಬೆಳೆದ ಬೆಳೆ ಮಾರುಕಟ್ಟೆಗೆ ತಲುಪಿಸಬೇಕೆಂದರೆ ಏಜೆಂಟರ ಬಳಕೆ ಅನಿವಾರ್ಯ. ಸರ್ಕಾರಕ್ಕೆ ಸಲ್ಲಬೇಕಿರುವ ತೆರಿಗೆ ಹಣ ಮಧ್ಯವರ್ತಿಗಳಿಂದ ನಷ್ಟವಾಗುತ್ತದೆ. ಬಹುರಾಷ್ಟ್ರೀಯ ಕಂಪನಿಗಳು ದಲ್ಲಾಳಿಗಳ ಕೆಲಸವನ್ನು ಕಾನೂನಾತ್ಮಕವಾಗಿ ಮಾಡಲಿವೆ. ಪ್ರಪಂಚದಲ್ಲಿ ಇಷ್ಟೊಂದು ಸಂಕಷ್ಟ ಇರುವಾಗ ಇಂತಹ ಕಾಯ್ದೆಯನ್ನು ಎರಡು ಸಾರಿ ಸುಗ್ರೀವಾಜ್ಞೆ ಮೂಲಕ ಜಾರಿ ತರುವ ಅಗತ್ಯ ಏನಿದೆ? ಇದರ ಹಿಂದೆ ಯಾರ ಕೈ ಇದೆ ಎಂದು ಅನುಮಾನದಿಂದ ಕೇಳಲು ಬಯಸುತ್ತೇನೆ ಎಂದರು.

ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ನಾನು ಕೂಡ ಕೃಷಿಕ. ಪ್ರತಿಯೊಂದು ಹಂತದಲ್ಲೂ ದಲ್ಲಾಳಿಗಳ ಮೂಲಕ ವ್ಯವಹಾರ ಮಾಡಬೇಕಿತ್ತು. ದಬ್ಬಾಳಿಕೆ ಮಾಡುತ್ತಿದ್ದರು. ರೈತರು ಗುಲಾಮರ ರೀತಿ ನಡೆಸಿಕೊಳ್ಳುತ್ತಿದ್ದರು. ಈ ದಲ್ಲಾಳಿಗಳು ರೈತರ ರಕ್ತ ಹೀರಿದ್ದಾರೆ. ನಾವು ಎಲ್ಲಾ ನೋವು ಅನುಭವಿಸಿದ್ದೇವೆ. ಇದು ರಾಜ್ಯದಲ್ಲಿ 2007ರಿಂದ ಇರುವ ವ್ಯವಸ್ಥೆಯನ್ನೇ ಮುಂದುವರೆದಿದೆ. ಸೆಸ್ ಭರಿಸುವಾಗ ಒಂದಿಷ್ಟು ಬದಲಾವಣೆ ಆಗಿದೆ. ನನ್ನ ಬೆಳೆ ನನ್ನ ಹಕ್ಕು. ನಾವು ಮಧ್ಯವರ್ತಿಗಳ ಉಪಟಳ ತಪ್ಪಿಸಿದ್ದೇವೆ. ಯಾವುದೇ ರೈತ ತಾನು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾಡಬೇಕೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಕನಸನ್ನು ನಾವು ಈ ತಿದ್ದುಪಡಿ ಮೂಲಕ ನನಸಾಗಿಸಿದ್ದೇವೆ ಎಂದರು.

ಬ್ರಿಟಿಷ್ ಸರ್ಕಾರ ಇದು: ಮಾತು ಮುಂದುವರೆಸಿದ ಮರಿತಿಬ್ಬೇಗೌಡರು, ಎಪಿಎಂಸಿಯಲ್ಲಿ ಮಧ್ಯವರ್ತಿಗಳನ್ನು ನಿಯಂತ್ರಿಸಲಾಗದೇ ಬಹುರಾಷ್ಟ್ರೀಯ ಕಂಪನಿಗಳ ಕೈಗೆ ರೈತರ ಭವಿಷ್ಯ ನೀದಿದೆ. ರೈತನ ಕೈಯಲ್ಲಿ ಹಣವಿಲ್ಲ. ಅದು ಸಿಗುವ ಕಾರ್ಯ, ಅನುಕೂಲ ಮಾಡಿಕೊಡುವ ಕೆಲಸ ಸರ್ಕಾರದಿಂದ ಆಗುತ್ತಿಲ್ಲ. ಉತ್ತಮ ಮಾರುಕಟ್ಟೆ ಸೌಲಭ್ಯ ಸರ್ಕಾರಕ್ಕೆ ನೀಡಿ. ಬಹುರಾಷ್ಟ್ರೀಯ ಕಂಪನಿ ಬೆಳೆಸುವ ಕಾರ್ಯ ಮಾಡಬೇಡಿ. ರೈತರನ್ನು ಪೂರ್ಣ ನಿರ್ಮಾಣ ಮಾಡುವ ಕಾರ್ಯ ಕಾಡಬೇಡಿ. ರೈತರ ಬದುಕು ಹಾಳು ಮಾಡುವ ಕಾರ್ಯ ಆಗುತ್ತಿದೆ. ಕೇಂದ್ರದಲ್ಲಿರುವ ಇದು ಬ್ರಿಟಿಷ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯರು ಮರಿತಿಬ್ಬೇಗೌಡರ ಬೆಂಬಲಕ್ಕೆ ನಿಂತರು. ಮರಿತಿಬ್ಬೇಗೌಡರು ಆಡಿದ ಮಾತು ಅಸಂವಿಧಾನಿಕ ಪದವಾಗಿದ್ದರೆ ಕಡತದಿಂದ ತೆಗೆದು ಹಾಕಲಾಗುವುದು ಎಂದು ಸಭಾಪತಿಗಳು ಭರವಸೆ ನೀಡಿದರು. ಒಟ್ಟಾರೆ ಮರಿತಿಬ್ಬೇಗೌಡರ ಮಾತು ಕಲಾಪದಲ್ಲಿ ಸಾಕಷ್ಟು ಸಮಯ ವಾಗ್ವಾದಕ್ಕೆ ಅವಕಾಶ ಮಾಡಿಕೊಟ್ಟಿತು. ನಂತರ ಮಾತನಾಡಿದ ಅಲ್ಲಂ ವೀರಭದ್ರಪ್ಪ, ರೈತರ ಜತೆ ಇನ್ನೊಮ್ಮೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.