ETV Bharat / state

ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕ‌ ಸೃಷ್ಟಿಸಿದ ಯುವಕ-ಯುವತಿಯ ವಾಟ್ಸಪ್​ ಚಾಟಿಂಗ್

ಯುವಕ ಮತ್ತು ಯುವತಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ಯುವಕ ಮುಂಬೈಗೆ ತೆರಳುತ್ತಿದ್ದು, ಯುವತಿ ಬೆಂಗಳೂರಿಗೆ ತೆರಳಲು ಬಂದಿದ್ದಳು. ಆ ಬಳಿಕ ಇವರಿಬ್ಬರು ವಾಟ್ಸಪ್ ನಲ್ಲಿ ಚಾಟ್ ಮಾಡಲು ತೊಡಗಿದ್ದಾರೆ. ಈ ಸಂದೇಶವೇ ಇಷ್ಟೆಲ್ಲಾ ಅನಾಹುತಕ್ಕೆ ಕಾಣವಾಗಿದೆ.

Mangalore Airport
Mangalore Airport
author img

By

Published : Aug 14, 2022, 6:44 PM IST

Updated : Aug 15, 2022, 4:21 PM IST

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಯುವಕ ಮತ್ತು ಯುವತಿ ಮಾಡಿದ ವಾಟ್ಸಪ್ ಚಾಟ್​ನಿಂದಾಗಿ ಆತಂಕ ಸೃಷ್ಟಿಯಾಗಿ ವಿಮಾನ ಪ್ರಯಾಣ ಮೊಟಕುಗೊಳಿಸಿ ತಪಾಸಣೆ ನಡೆಸಿದ ಘಟನೆ ಇಂದು ನಡೆದಿದೆ.

ಆಗಿದ್ದೇನು?.. ಯುವಕ ಮತ್ತು ಯುವತಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ಯುವಕ ಮುಂಬೈಗೆ ತೆರಳುತ್ತಿದ್ದು, ಯುವತಿ ಬೆಂಗಳೂರಿಗೆ ತೆರಳಲು ಬಂದಿದ್ದಳು. ಆ ಬಳಿಕ ಇವರಿಬ್ಬರು ವಾಟ್ಸಪ್ ನಲ್ಲಿ ಚಾಟ್ ಮಾಡಲು ತೊಡಗಿದ್ದಾರೆ. ಮುಂಬೈ ವಿಮಾನದಲ್ಲಿ ಕುಳಿತಿದ್ದ ಯುವಕ ಮಾಡುತ್ತಿದ್ದ ಚಾಟಿಂಗ್ಅನ್ನು ಆತನ ಹಿಂಬದಿ ಸೀಟ್​​​ನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಗಮನಿಸಿದ್ದಾರೆ. ಅದರಲ್ಲಿ ವಿಮಾನದ ಭದ್ರತೆಗೆ ಆತಂಕವೊಡ್ಡುವ ವಿಚಾರವಿದೆ ಎಂದು ತಕ್ಷಣ ವಿಮಾನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳಿಗೆ ಸಿಬ್ಬಂದಿ ಮಾಹಿತಿ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನ ಸಂಚಾರವನ್ನು ಮೊಟಕುಗೊಳಿಸಿ ಪ್ರಯಾಣಿಕರನ್ನು ಇಳಿಸಿ ವಿಮಾನವನ್ನು ತೀವ್ರ ತಪಾಸಣೆಗೆ ಒಳಪಡಿಸಲಾಯಿತು ಎಂದು ತಿಳಿದುಬಂದಿದೆ.

ಇವರಿಬ್ಬರು ಗೆಳೆಯರಾಗಿದ್ದು, ತಮಾಷೆಗಾಗಿ ಭದ್ರತೆ ಬಗ್ಗೆ ಚಾಟಿಂಗ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ತಪಾಸಣೆಗಾಗಿ ಮಧ್ಯಾಹ್ನ ತಡೆಯಲಾಗಿದ್ದ ವಿಮಾನ ಮುಂಬೈಗೆ 5 ಗಂಟೆಗೆ ಮತ್ತೆ ಪ್ರಯಾಣ ಬೆಳೆಸಿದೆ. ಯುವಕ ಮತ್ತು ಯುವತಿಯನ್ನು ಸಿಐಎಸ್ಎಫ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಜೈಶ್-ಎ-ಮೊಹಮ್ಮದ್ ಸಂಘಟನೆ ಜೊತೆ ನಂಟು: ಕಾನ್ಪುರದಲ್ಲಿ ಶಂಕಿತ ಉಗ್ರನ ಸೆರೆ, ಹೈಅಲರ್ಟ್

Last Updated : Aug 15, 2022, 4:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.