ETV Bharat / state

ವೈಜ್ಞಾನಿಕ ಅಧ್ಯಯನ ಮಾಡದೇ ಗೋ ಹತ್ಯೆ ನಿಷೇಧ ವಿಧೇಯಕ ಜಾರಿ: ಸಿದ್ದರಾಮಯ್ಯ ಆಕ್ರೋಶ - bangalore Siddaramaiah news

ಗೋ ಹತ್ಯೆ ನಿಷೇಧ ಕಾಯ್ದೆ ಈಗಾಗಲೇ ಇದ್ದು, ಈಗ ಇದಕ್ಕೆ ತಿದ್ದುಪಡಿ ತಂದಿದ್ದಾರೆ. ಆದರೆ ಕಾಯಿದೆ ತಿದ್ದುಪಡಿಗೂ ಮುನ್ನ ಯಾವುದೇ ಅಧ್ಯಯನ ನಡೆಸಿಲ್ಲ. ಅಧ್ಯಯನ ಮಾಡಿರುವ ವರದಿಯನ್ನೂ ನೋಡಿಲ್ಲ. ಕಾನೂನು ತರಬೇಕಾದರೆ ಸಾಧಕ, ಬಾಧಕಗಳನ್ನು ನೋಡಬೇಕು. ಕೇವಲ ಭಾವನಾತ್ಮಕವಾಗಿ ಈ ಕಾಯ್ದೆಯನ್ನು ತಂದಿದ್ದಾರೆ. ಜನರ ಭಾವನೆಗಳನ್ನು ಕೆರಳಿಸಲು ಇದನ್ನು ತಂದಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಆಕ್ರೋಶ
ಸಿದ್ದರಾಮಯ್ಯ ಆಕ್ರೋಶ
author img

By

Published : Dec 11, 2020, 4:34 PM IST

Updated : Dec 11, 2020, 5:02 PM IST

ಬೆಂಗಳೂರು: ಗೋ ಹತ್ಯೆ ನಿಷೇಧ ವಿಧೇಯಕವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡದೇ ಜಾರಿಗೆ ತಂದಿದ್ದು, ಈಗ ಇದನ್ನು ಕಾನೂನು ಮಾಡಲು ಸರ್ಕಾರ ಹೊರಟಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಕಾಯ್ದೆ ಈಗಾಗಲೇ ಇದ್ದು, ಈಗ ಇದಕ್ಕೆ ತಿದ್ದುಪಡಿ ತಂದಿದ್ದಾರೆ. ಆದರೆ, ಕಾಯಿದೆ ತಿದ್ದುಪಡಿಗೂ ಮುನ್ನ ಯಾವುದೇ ಅಧ್ಯಯನ ನಡೆಸಿಲ್ಲ. ಅಧ್ಯಯನ ಮಾಡಿರುವ ವರದಿಯನ್ನೂ ನೋಡಿಲ್ಲ. ಕಾನೂನು ತರಬೇಕಾದರೆ ಸಾಧಕ, ಬಾಧಕಗಳನ್ನು ನೋಡಬೇಕು. ಕೇವಲ ಭಾವನಾತ್ಮಕವಾಗಿ ಈ ಕಾಯ್ದೆಯನ್ನು ತಂದಿದ್ದಾರೆ. ಜನರ ಭಾವನೆಗಳನ್ನು ಕೆರಳಿಸಲು ಇದನ್ನು ತಂದಿದ್ದಾರೆ ಎಂದರು.

1964 ರ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ 1964 ರಿಂದ ಅಸ್ತಿತ್ವದಲ್ಲಿದೆ. ಇದರಲ್ಲಿ ಯಾವ ಪ್ರಾಣಿಗಳನ್ನು ವಧೆ ಮಾಡಬಹುದೆಂದು ತಿಳಿಸಿದೆ. ಹನ್ನೆರಡು ವರ್ಷ ತುಂಬಿದ್ದರೆ ಅಂತಹ ಪ್ರಾಣಿಗಳನ್ನು ವಧೆ ಮಾಡಬಹುದು. ಹಸು ಅಥವಾ ಎಮ್ಮೆ ಗೊಡ್ಡಾದರೆ, ಹಾಲು ಕರೆಯದಿದ್ದರೆ ವಧೆ ಮಾಡಬಹುದು. ಪ್ರಾಣಿ ರೋಗಗ್ರಸ್ಥವಾಗಿದ್ದರೆ ತಿನ್ನಲು ಯೋಗ್ಯವಲ್ಲ. ಈ ಎಲ್ಲ ಅಂಶಗಳು ಈ ಕಾಯ್ದೆಯಲ್ಲಿವೆ ಎಂದು ಮಾಹಿತಿ ನೀಡಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ

ಗಂಡು ಕರುಗಳು 10 ವರ್ಷ ಬದುಕಲಿವೆ. ರಾಜ್ಯದಲ್ಲಿ ಶೇ. 3.4 ರಷ್ಟು ಗಂಡು ಕರು ಜನನವಾಗುತ್ತದೆ. ಮೂರೂವರೆ ಕೋಟಿ ಕರು ಹಾಕುವ ಜಾನುವಾರುಗಳಿವೆ. 34 ಕೋಟಿ ಹೋರಿಗಳು ಪ್ರತಿ ವರ್ಷ ಸಿಗುತ್ತವೆ. 6 ಕೋಟಿ ಹಸುಗಳು ಹಾಲು ಕೊಡುವುದನ್ನು ನಿಲ್ಲಿಸುತ್ತವೆ. ಒಟ್ಟು 27 ಕೋಟಿ ಜಾನುವಾರು ಅನುತ್ಪಾದಕವಾಗುತ್ತವೆ. 5 ವರ್ಷಕ್ಕೊಮ್ಮೆ ಜಾನುವಾರು ಜನಗಣತಿ ನಡೆಯಲಿದೆ. 3,98,163 ಮಿಶ್ರತಳಿ ರಾಸುಗಳು ಇವೆ. ನಾಟಿ‌ ಹಸುಗಳು 45,60,842 ಇವೆ. 21,48,560 ಎಮ್ಮೆಗಳಿವೆ. 2012ರ ಪಶು ಗಣತಿಯಂತೆ ರಾಜ್ಯದಲ್ಲಿ 25,75,805 ಕುಟುಂಬಗಳಿಂದ ಹಸುಗಳನ್ನು ಸಾಕಲಾಗುತ್ತದೆ. 13,17,403 ಕುಟುಂಬದವರು ಎಮ್ಮೆ ಸಾಕುತ್ತಾರೆ. ನಿತ್ಯ 79.35 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಇಷ್ಟು ರಾಸುಗಳಿಗೆ ಮೇವು ಎಷ್ಟು ಬೇಕಾಗುತ್ತದೆ? ತಿಂಗಳಿಗೆ 23 ಲಕ್ಷ ಮೆಟ್ರಿಕ್ ಟನ್ ಮೇವು ಬೇಕಿದೆ. 2.76 ಲಕ್ಷ ಮೆಟ್ರಿಕ್ ಟನ್ ವರ್ಷಕ್ಕೆ ಮೇವು ಬೇಕು ಎಂದು ಅಂಕಿ ಅಂಶಗಳ ಮೂಲಕ ತಿಳಿಸಿದ ಸಿದ್ದರಾಮಯ್ಯ, ಇದನ್ನೆಲ್ಲ ಎಲ್ಲಿ ತರುವುದಕ್ಕೆ ಸಾಧ್ಯ ಎಂದು ಪ್ರಶ್ನಿಸಿದರು.

ಬರಗಾಲ ಬಂದರೆ ರಾಸುಗಳನ್ನು ಸಾಕುವುದು ಹೇಗೆ? ಹೊರ ರಾಜ್ಯಗಳಿಂದ ಶೇ.40ರಷ್ಟು ಮೇವು ತರಿಸಿಕೊಳ್ಳುತ್ತೇವೆ. ಒಂದು ಪಶುಗೆ ನಿತ್ಯ 6 ಕೆ.ಜಿ. ಮೇವು ಬೇಕಿದೆ. ಕಳೆದ 20 ವರ್ಷಗಳಲ್ಲಿ 15 ವರ್ಷ ಬರಗಾಲವಿತ್ತು. ಬರಗಾಲದಲ್ಲಿ ರೈತರು ಜೀವನ ನಡೆಸೋದೇ ಕಷ್ಟ. ಇಂತಹ ಸಂದರ್ಭದಲ್ಲಿ ಗೋಹತ್ಯೆ ಕಾನೂನು ತಂದಿದ್ದಾರೆ. ನೀವು ಅಧ್ಯಯನ ಮಾಡಿಸಿ ತನ್ನಿ, ಅದಕ್ಕೆ ನಮ್ಮ ತಕರಾರಿಲ್ಲ. ಗೋ ಶಾಲೆಗಳಲ್ಲಿ‌ ಇರುವ ಹಸುವಿಗೆ ಮೇವಿಲ್ಲ. ಗೋ ಶಾಲೆಗೆ ಕೊಟ್ಟರೆ ಜನರೇ ಫೀಸ್​​ ಕಟ್ಟಬೇಕು. ರೈತರು ಕಷ್ಟದಲ್ಲಿದ್ದಾರೆ, ಅವರಿಗೆ ಜೀವನ ನಡೆಸೋದು ಕಷ್ಟವಾಗಿದೆ. ಮುದಿ ಹಸುಗಳನ್ನು ಸಾಕಲು ಹಣ ಕೊಡಿ ಅಂದರೆ ತರುವುದು ಎಲ್ಲಿಂದ ಎಂದು ಪ್ರಶ್ನಿಸಿದರು.

ಇದನ್ನು ಓದಿ:ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ನಿಷೇಧ: ಸಚಿವ ಆರ್.ಅಶೋಕ್

ಗೋ ಮಾತೆ ಅಂತ ಪೂಜೆ ಮಾಡಿದರೆ ಆಗೋಯ್ತಾ?: ನಾವು ಸಂಕ್ರಾಂತಿಯಲ್ಲಿ ಗೋ ಪೂಜೆ ಮಾಡುತ್ತೇವೆ. ದೀಪಾವಳಿ ಹಬ್ಬದಲ್ಲೂ ಎಡೆ ಹಾಕುತ್ತೇವೆ. ಸಾಕುವವರು ಅವುಗಳಿಗೆ ಪೂಜೆ ಮಾಡುತ್ತಾರೆ. ಯಾರು ಸಾಕುವುದಿಲ್ಲವೋ ಅವರು ಈ ಕಾನೂನು ತರುತ್ತಾರೆ. ಇದು ರೈತರ ಮೇಲೆ ಮತ್ತಷ್ಟು ಸಂಕಷ್ಟ ತಂದಿಡಲಿದೆ. ರೈತರು ಹಸು ಸಾಕುವುದಕ್ಕೂ ಮುಂದೆ ಕಷ್ಟವಾಗಲಿದೆ ಎಂದು ಹೇಳಿದರು.

ಅಯ್ಯೋ ಅನಿಸುತ್ತದೆ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತದೆ. ಅವರು ಆರ್​ಎಸ್​ಎಸ್ ಕಡೆಯವರು. ಅದಕ್ಕೆ ಮಾಡಿದರೆ ಮಾಡಿಕೊಳ್ಳಲಿ ಅಂತ ಸುಮ್ಮನಿದ್ದಾರೆ. ಗೋಮಾಂಸ ರಫ್ತು ಮಾಡುತ್ತಿರುವವರೆಲ್ಲ ಬಿಜೆಪಿ ಬೆಂಬಲಿಗರು. ಅದನ್ನು ನಿಲ್ಲಿಸಲು ಇವರಿಂದ ಸಾಧ್ಯವೇ? ಎಂದು ಪ್ರಶ್ನಿಸಿದರು.

ಚರ್ಮೋದ್ಯೋಗದಿಂದ 5.5 ಬಿಲಿಯನ್ ಡಾಲರ್ಸ್ ಜಿಡಿಪಿ ಆದಾಯ ಇದೆ. ವಾರಣಾಸಿಯ ಸ್ವರೂಪಾನಂದ ಸ್ವಾಮಿ ಸರಸ್ವತಿಯವರು ಒಂದು ಮಾತು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಬೀಫ್ ಎಕ್ಸ್ ಪೋರ್ಟ್ ಜಾಸ್ತಿಯಾಗಿದೆ. ಹಾಗಾದರೆ ನೀವು ನಿಯಂತ್ರಣ ಮಾಡಿದ್ದೀರೋ, ಒಂದು ಕಡೆ ಪರವಾನಗಿ ಕೊಟ್ಟು ಇನ್ನೊಂದು ಈ ರೀತಿ ಚರ್ಮೋದ್ಯೋಗದಲ್ಲಿ ನಮ್ಮ ದೇಶ ಎರಡನೇ ಸ್ಥಾನದಲ್ಲಿದೆ. ಚರ್ಮದ ಪ್ರಾಡಕ್ಸ್ಟ್ ಮೇಲೆ ಬೇಕಾದಷ್ಟು ಮಂದಿ ಅವಲಂಬಿತರಾಗಿದ್ದಾರೆ. ಈಗಲೇ ಉದ್ಯೋಗ ಕೊಡೋಕೆ ಆಗ್ತಿಲ್ಲ. ನಿಷೇಧದಿಂದ ನಿರೋದ್ಯೋಗವೂ ಜಾಸ್ತಿ ಆಗುತ್ತದೆ ಎಂದರು.

ಕಮಿಟಿ ರಚಿಸಲಿ: ಸೆಂಟ್ರಲ್‌ ಕಮಿಟಿ ರಚಿಸಿ ಒಂದು ತಜ್ಞರ ಕಮಿಟಿ ಮಾಡಲಿ, ವ್ಯಾಪಕವಾಗಿ ಚರ್ಚೆ ಆಗಲಿ. ಅವರ ವರದಿ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಅನುತ್ಪಾದಕ ಗೋವುಗಳನ್ನ ಸರ್ಕಾರವೇ ಕೊಂಡುಕೊಳ್ಳಲಿ. ಜನಸಾಮಾನ್ಯರ ಮೇಲೆ ಯಾಕೆ ಹೊರೆ ಹಾಕುತ್ತೀರಿ ಎಂದು ಸರ್ಕಾರಕ್ಕೆ ಪ್ರಶ್ನಿಸಿದರು. ಮುಂದಿನ ಹೋರಾಟದ ರೂಪು ರೇಷಗಳ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.

Last Updated : Dec 11, 2020, 5:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.