ETV Bharat / state

ಕೊರೊನಾಗೆ ಕಲಬುರಗಿಯಲ್ಲಿ ಮತ್ತೊಂದು‌ ಬಲಿ: ಸಾವಿನ‌ ಸಂಖ್ಯೆ 17ಕ್ಕೆ ಏರಿಕೆ - ಕಲಬುರಗಿ ಸುದ್ದಿ

ಮೊನ್ನೆ ಮಧ್ಯರಾತ್ರಿ ಜ್ವರ, ನಿಶ್ಯಕ್ತಿ ಕಂಡು ಬಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಚಿಕಿತ್ಸೆ ಫಲಿಸದೆ ನಿನ್ನೆ ಬೆಳಗ್ಗೆ 9 ಗಂಟೆಗೆ ಸಾವಿಗೀಡಾಗಿದ್ದಾರೆ. ನಿನ್ನೆ ರಾತ್ರಿ ಮೃತರ ವರದಿ ಬಂದಿದ್ದು, ಕೊರೊನಾ ಪಾಸಿಟಿವ್​ ಇದ್ದದ್ದು ಗೊತ್ತಾಗಿದೆ.

Another victim to Corona in the state
ಕೊರೊನಾಗೆ ಕಲಬುರಗಿಯಲ್ಲಿ ಮತ್ತೊಂದು‌ ಬಲಿ
author img

By

Published : Apr 21, 2020, 8:24 AM IST

Updated : Apr 21, 2020, 11:08 AM IST

ಬೆಂಗಳೂರು/ಕಲಬುರಗಿ: ಕಳೆದೊಂದು ವಾರದಿಂದ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರಿಕೆ ಆಗುತ್ತಿದೆ. ಕಲಬುರಗಿಯಲ್ಲ್ಲಿ 80 ವರ್ಷದ ವೃದ್ಧ ನಿನ್ನೆ ಸಾವನ್ನಪಿದ್ದಾರೆ.

ಮೊನ್ನೆ ಮಧ್ಯರಾತ್ರಿ ಜ್ವರ, ನಿಶ್ಯಕ್ತಿ ಕಂಡು ಬಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಚಿಕಿತ್ಸೆ ಫಲಿಸದೆ ನಿನ್ನೆ ಬೆಳಗ್ಗೆ 9 ಗಂಟೆಗೆ ಸಾವಿಗೀಡಾಗಿದ್ದಾರೆ. ನಿನ್ನೆ ರಾತ್ರಿ ಮೃತರ ವರದಿ ಬಂದಿದ್ದು, ಇವರಿಗೆ ಕೊರೊನಾ ಪಾಸಿಟಿವ್ ಇದ್ದದ್ದು ತಿಳಿದುಬಂದಿದೆ ಅಂತ ವೈದ್ಯಕೀಯ ‌ಶಿಕ್ಷಣ ಸಚಿವ ಸುಧಾಕರ್ ಟ್ವೀಟ್​​ ಮಾಡಿದ್ದಾರೆ. ಈ ಮೂಲಕ ಕೋವಿಡ್-19 ಬಲಿಯಾದವರ ಸಂಖ್ಯೆ 17ಕ್ಕೆ ಏರಿಕೆ ಆಗಿದೆ.

  • ಕಲ್ಪುರ್ಗಿಯಲ್ಲಿ ಕಳೆದ 3 ವರ್ಷಗಳಿಂದ ಪಾರ್ಕಿನ್ಸನ್ ನಿಂದ ಬಳಲುತ್ತಿದ್ದ 80 ವರ್ಷದ ಹಿರಿಯರು ನಿನ್ನೆ ಸಾವನ್ನಪಿದ್ದಾರೆ. ಮೊನ್ನೆ ಜ್ವರ ಇದ್ದುದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿನ್ನೆ ಬೆಳಗ್ಗೆ 9 ಗಂಟೆಗೆ ಅವರು ವಿಧಿವಶರಾಗಿದ್ದಾರೆ. ನಿನ್ನೆ ರಾತ್ರಿ 9ಕ್ಕೆ ಮೃತರ ವರದಿ ಬಂದಿದ್ದು, #COVID19 ಪಾಸಿಟಿವ್ ಇದ್ದದ್ದು ತಿಳಿದುಬಂದಿದೆ.

    — Dr Sudhakar K (@mla_sudhakar) April 21, 2020 " class="align-text-top noRightClick twitterSection" data=" ">

ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪಿರುವ 17 ಮಂದಿ ಪೈಕಿ ಶೇ.80% ರಷ್ಟು 60 ವಯಸ್ಸಿನ ಮೇಲ್ಪಟ್ಟವರಾಗಿದ್ದಾರೆ. ಅನೇಕರು ತಡವಾಗಿ ಆಸ್ಪತ್ರೆಗೆ ಬಂದಿರುವುದು ಸಾವಿಗೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಹೀಗಾಗಿಯೇ, ಆರೋಗ್ಯ ಇಲಾಖೆಯು 60 ವರ್ಷ ಮೇಲ್ಪಟ್ಟವರಿಗೆ ಅನಾರೋಗ್ಯ ಸಮಸ್ಯೆ ಉಂಟಾದರೆ ತಡಮಾಡದೆ ಆದಷ್ಟು ಬೇಗ ಆಸ್ಪತ್ರೆಗೆ ಕರೆ ತರುವಂತೆ ಮನವಿ ಮಾಡಿದ್ದಾರೆ.

Last Updated : Apr 21, 2020, 11:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.