ಬೆಂಗಳೂರು: ಕೇರಳದಲ್ಲಿ 'ನಿಫಾ' ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಈ ವೈರಸ್ ಹರಡದಂತೆ ಆರೋಗ್ಯ ಇಲಾಖೆ ಎಚ್ಚರ ವಹಿಸಿದೆ.
ಕೇರಳದಲ್ಲಿ ಕಳೆದ ವರ್ಷ 16 ಪ್ರಕರಣಗಳು ದಾಖಲಾಗಿದ್ದು, ನೀಫಾ ವೈರಸ್ನಿಂದ ಕೇರಳ ಜನತೆ ತತ್ತರಿಸಿ ಹೋಗಿದ್ದಾರೆ. ಈ ವರ್ಷವೂ ಕೂಡ ಕೇರಳದ 5 ಮಂದಿಯಲ್ಲಿ ನಿಫಾ ಕಾಣಿಸಿಕೊಂಡಿದ್ದು ಮತ್ತೆ ಆತಂಕ ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಕೇರಳಕ್ಕೆ ಹೋಗುವುದನ್ನು ಆದಷ್ಟು ತಡೆಗಟ್ಟುವುದು ಒಳಿತು ಎಂದು ಜನರಿಗೆ ಸೂಚಿಸಲಾಗುತ್ತಿದೆ.
ಬಾವಲಿ ಹಕ್ಕಿ ತಿಂದು ಬಿಟ್ಟ ಹಣ್ಣಿನ ಬಗ್ಗೆ ಎಚ್ಚರಿಕೆ ಇರಲಿ.ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವಂತಹ 8 ಗಡಿ ಜಿಲ್ಲೆಗಳಲ್ಲಿ ಎಚ್ಚರ ವಹಿಸುವಂತೆ ಆದೇಶ ಹೊರಡಿಸಿದ್ದು, ಸದ್ಯ ಆರೋಗ್ಯ ಇಲಾಖೆ ಕೇರಳ ಪ್ರವಾಸಕ್ಕೆ ಹೋಗಿ ಬಂದವರ ಮೇಲೆ ನಿಗ ಇಟ್ಟಿದೆ.
ಕೇರಳಕ್ಕೆ ಹೋಗಿ ಬಂದವರನ್ನು ತಪಾಸಣೆ ಮಾಡಿ, ರೋಗದ ಲಕ್ಷಣಗಳು ಕಂಡ ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಯೋಜನೆ ರೂಪಿಸಿದೆ.
ರೋಗದ ಲಕ್ಷಣ ತಿಳಿಯಿರಿ:
ರೋಗದ ಲಕ್ಷಣಗಳ ಬಗ್ಗೆ ನೋಡುವುದಾದರೆ, ತಲೆ ನೋವು, ಉಸಿರಾಟದಲ್ಲಿ ತೊಂದರೆ ಪ್ರಾಥಮಿಕವಾಗಿ ಕಾಣಿಸಿಕೊಳ್ಳಲಿದೆ ಎಂದು ಆರೋಗ್ಯ ಇಲಾಖೆ ಉಪ ನಿರ್ದೇಶಕ ಪ್ರಕಾಶ್ಕುಮಾರ್ ತಿಳಿಸಿದ್ದಾರೆ.