ETV Bharat / state

ಅಂಗನವಾಡಿ ತರಬೇತಿ ಕೇಂದ್ರದ ನೌಕರರ ಅನುದಾನ ಬಿಡುಗಡೆಗೆ ಸಿಎಂಗೆ ಮನವಿ

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಕೇಂದ್ರಗಳ ನೌಕರರ ಸಂಘದ ನಿಗಮವು ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅಂಗನವಾಡಿ ತರಬೇತಿ ಕೇಂದ್ರಗಳ ನೌಕರರ 20 ತಿಂಗಳ ಗೌರವ ಧನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದೆ.

ಅಂಗನವಾಡಿ ನೌಕರ
author img

By

Published : Aug 22, 2019, 4:22 AM IST

ಬೆಂಗಳೂರು: ರಾಜ್ಯದ ಅಂಗನವಾಡಿ ತರಬೇತಿ ಕೇಂದ್ರಗಳ ನೌಕರರ 20 ತಿಂಗಳ ಗೌರವ ಧನ ಬಿಡುಗಡೆ ಮಾಡುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ.

ಸಮಸ್ಯೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಂಗನವಾಡಿ ನೌಕರ ಚಿತ್ತೀಸ್

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಕೇಂದ್ರಗಳ ನೌಕರರ ಸಂಘದ ನಿಗಮವು ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿತು. ನಂತರ ಸಂಘದ ಪ್ರತಿನಿಧಿಗಳ ಪರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ದಾವಣಗೆರೆ ಅಂಗನವಾಡಿ ತರಬೇತಿ ಕೇಂದ್ರದ ಚಿತ್ತೀಸ್ ಎಂಬುವರು, ಅಂಗನವಾಡಿ ತರಬೇತಿ ಕೇಂದ್ರಗಳಲ್ಲಿ ಕಳೆದ 35-40 ವರ್ಷಗಳಿಂದ ಇಲಾಖೆಯ ಮಾರ್ಗಸೂಚಿಯಂತೆ ಐಸಿಡಿಎಸ್ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಇಲಾಖೆಯ ಮಾರ್ಗಸೂಚಿಯಂತೆ ತರಬೇತಿ ನೀಡಿಕೊಂಡು ಬರುವ ಕೆಲಸ ಮಾಡಲಾಗುತ್ತಿದೆ. ಆದರೆ ಇಲ್ಲಿ ಕಾರ್ಯನಿರ್ವಹಿಸುವವರಿಗೆ ಕಳೆದ ಇಪ್ಪತ್ತು ತಿಂಗಳಿಂದ ಗೌರವಧನ ಹಾಗೂ ತರಬೇತಿ ಕೇಂದ್ರಗಳು ಖರ್ಚುವೆಚ್ಚಗಳ ಅನುದಾನದ ಮೊತ್ತ ಪಾವತಿಯಾಗಿಲ್ಲ. ಇದರಿಂದ ಕಾರ್ಯನಿರ್ವಹಣೆ ಕಷ್ಟಸಾಧ್ಯವಾಗಿದ್ದು ಮುಖ್ಯಮಂತ್ರಿಗಳ ಬಳಿ ಈ ಸಮಸ್ಯೆ ನಿವಾರಿಸುವಂತೆ ಕೋರಿ ಕೊಂಡಿದ್ದೇವೆ ಎಂದರು.

ಸದ್ಯ ರಾಜ್ಯದಲ್ಲಿ 21 ತರಬೇತಿ ಕೇಂದ್ರಗಳಿಂದ 189 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ 20 ತಿಂಗಳಿಂದ ತಮಗೆ ಸಲ್ಲಬೇಕಾದ ಗೌರವ ಧನಕ್ಕಾಗಿ ಕಾಯುತ್ತಿದ್ದು, ಇದರ ಜೊತೆಗೆ ಸ್ವಯಂಸೇವಾ ಸಂಸ್ಥೆಗಳಿಗೆ ಸುಮಾರು 35-45 ಲಕ್ಷದವರೆಗೆ ತರಬೇತಿ ಕೇಂದ್ರಗಳ ಹಣ ಬಿಡುಗಡೆಯಾಗಬೇಕಿದ್ದು, ಅವರು ಕೂಡ ತಮಗೆ ಬರಬೇಕಾದ ಖರ್ಚುವೆಚ್ಚವನ್ನು ಬಿಡುಗಡೆ ಮಾಡಿಸಿಕೊಡಲು ಒತ್ತಡ ಹಾಕುತ್ತಿದ್ದಾರೆ. ಇದರಿಂದಾಗಿ ನಾವು ಸಿಎಂ ಬಳಿ ಮನವಿ ಮಾಡಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಗೌರವಧನ ಇಲ್ಲದೆ ತಮ್ಮ ಕೆಲಸ ಮುಂದುವರಿಕೆಯ ಬಗ್ಗೆ ಯಾವುದೇ ಸ್ಪಷ್ಟ ಹಾಗೂ ನಿಖರವಾದ ಮಾಹಿತಿ ಇಲ್ಲದೆ ಸಿಬ್ಬಂದಿ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಕಂಗಾಲಾಗಿದ್ದಾರೆ. ಇಲ್ಲಿ ಶೇ. 60ರಷ್ಟು ಸಿಬ್ಬಂದಿ 40ರಿಂದ 45 ವರ್ಷ ದಾಟಿದವರೇ ಆಗಿದ್ದು, ಈ ವಯಸ್ಸಿನಲ್ಲಿ ಬೇರೆ ಯಾವುದೇ ಕೆಲಸ ಹುಡುಕಿಕೊಳ್ಳುವುದು ಇವರಿಗೆ ಕಷ್ಟಸಾಧ್ಯವಾಗಿದೆ. ಇದರಿಂದಾಗಿ ಸರ್ಕಾರದಿಂದ ನಾವು ಪರಿಹಾರ ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.

Intro:newsBody:ಅಂಗನವಾಡಿ ತರಬೇತಿ ಕೇಂದ್ರದ ನೌಕರರ ಅನುದಾನ ಬಿಡುಗಡೆಗೆ ಸಿಎಂಗೆ ಮನವಿ

ಬೆಂಗಳೂರು: ರಾಜ್ಯದ ಅಂಗನವಾಡಿ ತರಬೇತಿ ಕೇಂದ್ರಗಳ ನೌಕರರ 20 ತಿಂಗಳ ಗೌರವ ಧನ ಬಿಡುಗಡೆ ಮಾಡುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ.
ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಕೇಂದ್ರಗಳ ನೌಕರರ ಸಂಘದ ನಿಗಮವು ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿತು.
ನಂತರ ಸಂಘದ ಪ್ರತಿನಿಧಿಗಳ ಪರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ದಾವಣಗೆರೆ ಅಂಗನವಾಡಿ ತರಬೇತಿ ಕೇಂದ್ರದ ಚಿತ್ತೀಸ್ ಎಂಬುವರು, ಅಂಗನವಾಡಿ ತರಬೇತಿ ಕೇಂದ್ರಗಳಲ್ಲಿ ಕಳೆದ 35-40 ವರ್ಷಗಳಿಂದ ಇಲಾಖೆಯ ಮಾರ್ಗಸೂಚಿಯಂತೆ ಐಸಿಡಿಎಸ್ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಇಲಾಖೆಯ ಮಾರ್ಗಸೂಚಿಯಂತೆ ತರಬೇತಿ ನೀಡಿ ಕೊಂಡು ಬರುವ ಕೆಲಸ ಮಾಡಲಾಗುತ್ತಿದೆ. ಆದರೆ ಇಲ್ಲಿ ಕಾರ್ಯನಿರ್ವಹಿಸುವವರಿಗೆ ಕಳೆದ ಇಪ್ಪತ್ತು ತಿಂಗಳಿಂದ ಗೌರವಧನ ಹಾಗೂ ತರಬೇತಿ ಕೇಂದ್ರಗಳು ಖರ್ಚುವೆಚ್ಚಗಳ ಅನುದಾನದ ಮೊತ್ತ ಪಾವತಿಯಾಗಿಲ್ಲ. ಇದರಿಂದ ಕಾರ್ಯನಿರ್ವಹಣೆ ಕಷ್ಟಸಾಧ್ಯವಾಗಿದ್ದು ಮುಖ್ಯಮಂತ್ರಿಗಳ ಬಳಿ ಈ ಸಮಸ್ಯೆ ನಿವಾರಿಸುವಂತೆ ಕೋರಿ ಕೊಂಡಿದ್ದೇವೆ ಎಂದರು.
ಸದ್ಯ ರಾಜ್ಯದಲ್ಲಿ 21 ತರಬೇತಿ ಕೇಂದ್ರಗಳಿಂದ 189 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ 20 ತಿಂಗಳಿಂದ ತಮಗೆ ಸಲ್ಲಬೇಕಾದ ಗೌರವ ಧನಕ್ಕಾಗಿ ಕಾಯುತ್ತಿದ್ದು, ಇದರ ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳಿಗೆ ಸುಮಾರು 35 45 ಲಕ್ಷದವರೆಗೆ ತರಬೇತಿ ಕೇಂದ್ರಗಳ ಹಣ ಬಿಡುಗಡೆಯಾಗಬೇಕಿದ್ದ ಅವರು ಕೂಡ ತಮಗೆ ಬರಬೇಕಾದ ಖರ್ಚುವೆಚ್ಚವನ್ನು ಬಿಡುಗಡೆ ಮಾಡಿಸಿಕೊಡಲು ಒತ್ತಡ ಹಾಕುತ್ತಿದ್ದಾರೆ. ಇದರಿಂದಾಗಿ ನಾವು ಸಿಎಂ ಬಳಿ ಮನವಿ ಮಾಡಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಕಳೆದ ಏಪ್ರಿಲ್ ನಿಂದ ಇಲ್ಲಿ ಯಾವುದೇ ತರಬೇತಿ ನಿಯೋಜಿಸಲಾಗುತ್ತಿದೆ ಈ ಬಗ್ಗೆ ಮಾಹಿತಿ ಕೋರಲಾಗಿದೆ ಎಂದು ಲಿಖಿತ ರೂಪದಲ್ಲಿ ಯಾವುದೇ ಸೂಚನೆ ಬಂದಿಲ್ಲ, ಗೌರವಧನ ಇಲ್ಲದೆ ನಮ್ಮ ಕೆಲಸ ಮುಂದುವರಿಕೆಯ ಬಗ್ಗೆ ಯಾವುದೇ ಸ್ಪಷ್ಟ ಹಾಗೂ ನಿಖರವಾದ ಮಾಹಿತಿ ಇಲ್ಲದೆ ಸಿಬ್ಬಂದಿ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಕಂಗಾಲಾಗಿದ್ದಾರೆ. ಇಲ್ಲಿ ಶೇ. 60ರಷ್ಟು ಸಿಬ್ಬಂದಿ 40ರಿಂದ 45 ವರ್ಷ ದಾಟಿದವರ ಆಗಿದ್ದು ಈ ವಯಸ್ಸಿನಲ್ಲಿ ಬೇರೆ ಯಾವುದೇ ಕೆಲಸ ಹುಡುಕಿಕೊಳ್ಳುವುದು ಇವರಿಗೆ ಕಷ್ಟಸಾಧ್ಯವಾಗಿದೆ. ಇದರಿಂದಾಗಿ ಸರ್ಕಾರದಿಂದ ನಾವು ಪರಿಹಾರ ನಿರೀಕ್ಷಿಸುತ್ತಿದ್ದೇವೆ ಎಂದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.