ETV Bharat / state

ಆನೇಕಲ್ ಐತಿಹಾಸಿಕ ಕರಗ ಉತ್ಸವ ಆಚರಣೆ: ಇನ್ನೂ ಅಂತಿಮವಾಗದ ಕರಗ ಕುಣಿತ - high court of karnataka

ಐತಿಹಾಸಿಕ ಆನೇಕಲ್ ಧರ್ಮರಾಯಸ್ವಾಮಿ ದ್ರೌಪತಾಂಭ ಕರಗ ಹೊರುವ ವಿಚಾರದಲ್ಲಿ ತಾಲೂಕಿನ ಕುಲಸ್ಥರು ಹಾಗೂ ಅರ್ಚಕರ ಕುಟುಂಬದ ನಡುವಿನ ವಾದ ಕೋರ್ಟ್ ಮೆಟ್ಟಿಲೇರಿತ್ತು.

anekal-karaga-celebration-contoversy
ಆನೇಕಲ್ ಐತಿಹಾಸಿಕ ಕರಗ ಆಚರಣೆ: ಇನ್ನೂ ಅಂತಿಮವಾಗದ ಕರಗ ಕುಣಿತ
author img

By

Published : Apr 3, 2023, 6:29 PM IST

Updated : Apr 3, 2023, 7:58 PM IST

ಆನೇಕಲ್ ಐತಿಹಾಸಿಕ ಕರಗ ಉತ್ಸವ ಆಚರಣೆ: ಇನ್ನೂ ಅಂತಿಮವಾಗದ ಕರಗ ಕುಣಿತ

ಬೆಂಗಳೂರು: ಆನೇಕಲ್​ನ ಪ್ರತಿಷ್ಠಿತ ಕರಗ ಮಹೋತ್ಸವಕ್ಕೆ ಚುನಾವಣಾ ನೀತಿ ಸಂಹಿತೆ ತಡೆ ಒಂದೆಡೆಯಾದರೆ ಮತ್ತೊಂದೆಡೆ ಎರಡು ಬಣಗಳ ಕರಗ ಹೊರುವ ವಿಚಾರಕ್ಕೆ ಹೈಕೋರ್ಟ್ ಮೊರೆ ಹೋಗಿರುವುದು ಸಮಸ್ಯೆಯಾಗಿ ಕರಗ ಅಭಿಮಾನಿಗಳಲ್ಲಿ ನಿರಾಸೆಯುಂಟು ಮಾಡಿದೆ. ಐತಿಹಾಸಿಕ ಆನೇಕಲ್ ಧರ್ಮರಾಯಸ್ವಾಮಿ ದ್ರೌಪತಾಂಭ ಕರಗ ಹೊರುವ ವಿಚಾರಕ್ಕೆ ಕೊಲೆಯೂ ನಡೆದು ದಶಕಗಳ ಕಾಲ ಕರಗ ಮಹೋತ್ಸವ ನಿಂತಿತ್ತು. ಈ ಹಿನ್ನೆಲೆ ರಾಜಕಾರಣಿಗಳ ಪ್ರತಿಷ್ಟೆಯೂ ಸೇರಿ ಕರಗ ಮತ್ತೊಮ್ಮೆ ನಡೆಯುವಂತೆ ಚಾಲನೆ ದೊರೆತಿದ್ದು, ಆನೇಕಲ್ ಸುತ್ತಲ ಜನ ಸಂಭ್ರಮಿಸುವಂತಾಗಿತ್ತು. ಈ ಬೆಳವಣಿಗೆ ಹೆಚ್ಚು ಕಾಲ ಉಳಿಯದೇ ಎರಡು ಬಣಗಳ ವಾದ - ಪ್ರತಿವಾದ ಹೈಕೋರ್ಟ್​ ಮೆಟ್ಟಿಲೇರಿ ಪ್ರತಿಷ್ಟೆಯ ಕಣವಾಗಿ ಈಗಲೂ ಮುಂದುವರೆದಿದೆ.

ಧರ್ಮರಾಯಸ್ವಾಮಿ ದ್ರೌಪತಾಂಭ ದೇವಾಲಯ ಪ್ರಧಾನ ಅರ್ಚಕ ಅರ್ಜುನಪ್ಪ ಹಾಗೂ ವಹ್ನಿಕುಲ ಸೇವಾ ಸಂಘದ ಚಂದ್ರಪ್ಪ ಕರಗ ಹೊರುವ ಜವಾಬ್ದಾರಿಗಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಹೀಗಿರುವಾಗ ಆನೇಕಲ್ ತಹಶೀಲ್ದಾರ್ ಎರಡು ಬಾರಿ ಕರೆದಿದ್ದ ಉಭಯ ಮುಖಂಡರ ಸಭೆಯಲ್ಲಿ ‘ಚುನಾವಣಾ ನೀತಿ ಸಂಹಿತೆ’ಯ ವಿಚಾರ ಮುಂದಿಟ್ಟು ಪ್ರಧಾನ ಅರ್ಚಕ ಅರ್ಜುನಪ್ಪ ಧರ್ಮರಾಯಸ್ವಾಮಿ ದೇವಾಲಯದ ಆವರಣದೊಳಗೆ ಸಾಂಪ್ರಾದಾಯಿಕ ಪೂಜಾ ವಿಧಾನಗಳನ್ನಷ್ಟೇ ಮಾಡಿಕೊಳ್ಳುವಂತೆ ತೀರ್ಮಾನ ಹೊರಹಾಕಿದ್ದರು. ಅದರಂತೆ ಎರಡು ಕಡೆಯ ಮುಖಂಡರು ಒಪ್ಪಿ ಹೊರ ಬಂದಿದ್ದರೂ ಸಹ ತಮ್ಮ ತಮ್ಮ ಮನವಿಗಳನ್ನು ತಹಶೀಲ್ದಾರರಿಗೆ ನೀಡಿದ್ದರು.

ಹೀಗಿರುವಾಗ ಚುನಾವಣಾ ನೀತಿ ಸಂಹಿತೆ ಜಾರಿಯಾದರೂ ಕುಲಸ್ಥ ಚಂದ್ರಪ್ಪ ಕರಗ ಹೊರುವ ಜವಾಬ್ದಾರಿಯನ್ನು ತನಗೆ ನೀಡುವಂತೆ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಮುಜರಾಯಿ ಆಯುಕ್ತರಿಗೆ ನಿರ್ದೇಶನದ ಆದೇಶ ಹೊರ ಬಿದ್ದಿದೆ. ಆದರೆ, ಚಂದ್ರಪ್ಪನ ಪರ ವಕೀಲರು ಹಾಗೂ ಕುಲಸ್ಥರು ಮುಜರಾಯಿ ಆಯುಕ್ತರ ಬದಲು ತಹಶೀಲ್ದಾರ್​ಗೆ ಆದೇಶ ತಂದು ಕೊಟ್ಟು ನಿರ್ದೇಶನ ನೀಡುವಂತೆ ಒತ್ತಡ ಹೇರಿದ್ದರ ಪರಿಣಾಮ ತಹಶೀಲ್ದಾರ್ ಶಿವಪ್ಪ ಲಮ್ಹಾಣಿ ಮುಜರಾಯಿ ಇಲಾಖೆಯ ಆಯುಕ್ತರಿಗೆ ಈವರೆಗೆ ಸಲ್ಲಿಸಲಾಗಿರುವ ಮನವಿಗಳು ನೀತಿ ಸಂಹಿತೆಯ ಹಿನ್ನೆಲೆ ಹಾಗೂ ಇಡೀ ಸಭೆಯ ನಡಾವಳಿ ಕುರಿತು ಪರಿಶೀಲಿಸಿ ಕರಗೋತ್ಸವ ಕುರಿತು ಸೂಕ್ತ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

ಹೀಗಾಗಿ ಇನ್ನು ಮಾರ್ಚ್ 27 ರಿಂದ ಏಪ್ರಿಲ್ 11ರ ವರೆಗೆ ನಡೆಯುವ ಕರಗದ ತಯಾರಿಯನ್ನು ಅರ್ಚಕ ಹಾಗೂ ಕುಲಸ್ಥರು ತಾಲೀಮು ನಡೆಸುತ್ತಿದ್ದು, ಇನ್ನೆರೆಡು ದಿನದಲ್ಲಿ ಕರಗ ಕುಣಿತ ಅಂತಿಮವಾಗಿ ನಿರ್ಧಾರವಾಗಬೇಕಿದೆ. 2023ರ ಆನೇಕಲ್ ಕರಗ ಮಹೋತ್ಸವದ ಕುರಿತು ತೀರ್ಮಾನ ಮುಜರಾಯಿ ಆಯುಕ್ತರ ಅಂಗಳಕ್ಕೆ ಹೋಗಿರುವುದರಿಂದ ಕರಗದ ಬಂದೋಬಸ್ತ್, ಆಚರಣೆಯ ಕುರಿತು ಸಿದ್ಧತೆಗೆ ಮುಜರಾಯಿ ಇಲಾಖೆಯ ನಿರ್ದೇಶನಕ್ಕೆ ಎದುರು ನೋಡುವಂತಾಗಿದೆ.

‘ಹೈಕೊರ್ಟ್​​​ ಆದೇಶದಂತೆ ಎರಡನೇ ಪ್ರತಿವಾದಿ ಸೂಚಿಸಿರುವ ಮುಜರಾಯಿ ಆಯುಕ್ತ ಸೂಚನೆ ನೀಡಲು ಸೂಚಿಸಿದೆ. ಹೀಗಾಗಿ ಈಗಾಗಲೇ ಎರಡೂ ಕಡೆಯ ಮುಖಂಡರ ಸಮ್ಮುಖದಲ್ಲಿ ಚುನಾವಣಾ ನೀತಿ ಸಂಹಿತೆಗೆ ದಕ್ಕೆ ಬಾರದಂತೆ ಮುಜರಾಯಿ ಇಲಾಖಾ ನಿಯಮದಂತೆ ದೇವಾಲಯದ ಆವರಣದಲ್ಲಿ ಅರ್ಚಕರಿಗೆ ಪೂಜಾ ವಿದಾನಗಳನ್ನಷ್ಟೇ ನಡೆಸಿಕೊಳ್ಳಲು ತಿಳಿಸಿ ಮೌಖಿಕ ಒಪ್ಪಿಗೆ ಪಡೆಯಲಾಗಿದೆ.

ಇದೀಗ ಚಂದ್ರಪ್ಪ ಕುಲಸ್ಥರು ಹೈಕೋರ್ಟ್ ಆದೇಶವನ್ನು ಮುಜರಾಯಿ ಆಯುಕ್ತರ ಬದಲು ತಹಶೀಲ್ದಾರ್ ಕಚೇರಿಗೆ ತಂದಿದ್ದಾರೆ, ಆದರೂ ನಾವು ಮುಜರಾಯಿ ಇಲಾಖೆಗೆ ಸಂಪೂರ್ಣ ಪ್ರಕ್ರಿಯೆ ಮನವಿಗಳು ಸಭಾ ನಿರ್ಣಯಗಳ ಸಮೇತ ಮನವಿ ಮಾಡಿದ್ದೇವೆ ಹೀಗಾಗಿ ಅವರ ನಿರ್ದೇಶನಕ್ಕೆ ಕಾಯುತ್ತಿದ್ದೇವೆ’ ಎಂದು ತಹಶಿಲ್ದಾರ್​ ಶಿವಪ್ಪ ಲಮ್ಹಾಣಿ ‘ಈಟಿವಿ ಭಾರತ್​​’ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಆನೇಕಲ್ ವಿವಾದಿತ ಕರಗ ಹೊರುವ ಜವಾಬ್ದಾರಿ ಚಂದ್ರಪ್ಪ ಹೆಗಲಿಗೆ: ದಂಡಾದಿಕಾರಿ ಪಿ. ದಿನೇಶ್

Last Updated : Apr 3, 2023, 7:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.