ಬೆಂಗಳೂರು: ತುಮಕೂರು ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ಅಟ್ಟಿಕಾ ಆಲಿಯಾಸ್ ಬೊಮ್ಮನಹಳ್ಳಿ ಬಾಬು ಅವರನ್ನ ಆಂಧ್ರ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಅನಂತಪುರದ ಬಳಿಯ ಯಲ್ಲೂರು ಮೂಲದ ಮಹಿಳೆ ನೀಡಿದ್ದ ದೂರಿನ ಅನ್ವಯ ಬಾಬುರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನನ್ನು ಮದುವೆ ಆಗಿ ಮೋಸ ಮಾಡಿದ ಆಯೂಬ್ ಅಲಿಯಾಸ್ ಅಟ್ಟಿಕಾ ಬಾಬು ಡಿಸೆಂಬರ್ 12ರಂದು ಯಲ್ಲೂರಿಗೆ ಬಂದಿದ್ದಾರೆ. ಬಳಿಕ ನನ್ನ ಮೇಲೆ ಹಲ್ಲೆ ಮಾಡಿ ಮನೆಯಲ್ಲಿ ಇದ್ದ ವಸ್ತುಗಳನ್ನು ದ್ವಂಸ ಮಾಡಿದ್ದಾರೆ. ಅಷ್ಟೇ ಅಲ್ಲ ಈ ವೇಳೆ ನನ್ನ ಕೊಲೆಗೆ ಯತ್ನಿಸಿದ್ದಾರೆಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಐಪಿಎಸ್ ಸೆಕ್ಷನ್ 448, 342, 307, 386, 427, 498A, 506 ಮತ್ತು ವರದಕ್ಷಿಣೆ ಕಿರುಕುಳ ಆರೋಪದಡಿ ಕೇಸ್ ದಾಖಲಾಗಿತ್ತು.
ಕೇಸ್ ದಾಖಲು ಮಾಡಿ ಅರೋಪಿಯನ್ನು ಹುಡುಕಿಕೊಂಡು ಬಂದಿದ್ದ ಯಲ್ಲೂರು ಪೊಲೀಸರು ಸಿಸಿಬಿ ಹಾಗೂ ಹೈಗ್ರೌಂಡ್ಸ್ ಪೊಲೀಸರ ಸಹಾಯದಿಂದ ಅಟ್ಟಿಕಾ ಬಾಬುರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಮನೆಗಳ್ಳತನ ಪ್ರಕರಣ.. ಶಿವಮೊಗ್ಗದಲ್ಲಿ ಜಂಗ್ಲಿ ಮಂಜುನಾಥ ಗ್ಯಾಂಗ್ ಅರೆಸ್ಟ್, 11 ಲಕ್ಷ ರೂ ನಗದು ವಶ