ETV Bharat / state

ಅನಂತಯಾನ ಪುಸ್ತಕ ಲೋಕಾರ್ಪಣೆ ಮಾಡಿದ ಸ್ಪೀಕರ್ ಕಾಗೇರಿ - ಮೊದಲ ದಿನದ ಸಭಾ ಕಾರ್ಯಕ್ರಮ

ಇಂದು ಅನಂತಕುಮಾರ್‌ ಅವರ 63 ನೇ ಜನ್ಮದಿನಾಚರಣೆ ನಿಮಿತ್ತ ಆಯೋಜಿಸಲಾಗಿದ್ದ ಅನಂತ ಪ್ರೇರಣ ಕಾರ್ಯಕ್ರಮಗಳ ಮೊದಲ ದಿನದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನಂತಯಾನ ಪುಸ್ತಕದ ಮೊದಲ ಭಾಗವನ್ನು ಸ್ಪೀಕರ್ ಕಾಗೇರಿ ಲೋಕಾರ್ಪಣೆಗೊಳಿಸಿದರು.

Ananthayana book release by Vishweshwar Hegde Kageri
ಅನಂತಯಾನ ಪುಸ್ತಕ ಲೋಕಾರ್ಪಣೆ ಮಾಡಿದ ಸ್ಪೀಕರ್ ಕಾಗೇರಿ
author img

By

Published : Sep 21, 2022, 9:47 PM IST

ಬೆಂಗಳೂರು: ಅನಂತಕುಮಾರ್‌ ಅವರದ್ದು ಚುಂಬಕ ವ್ಯಕ್ತಿತ್ವ. ಅವರು ನಮಗೆಲ್ಲಾ ಪ್ರೇರಣ ಶಕ್ತಿಯಾಗಿದ್ದಂತಹ ಅವರ ಭವಿಷ್ಯದ ಅಪೇಕ್ಷೆಯನ್ನು ಈಡೇರಿಸುವತ್ತ ಕಂಕಣಬದ್ದರಾಗಿರಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.

ಇಂದು ಅನಂತಕುಮಾರ್‌ ಅವರ 63 ನೇ ಜನ್ಮದಿನಾಚರಣೆ ನಿಮಿತ್ತ ಆಯೋಜಿಸಲಾಗಿದ್ದ ಅನಂತ ಪ್ರೇರಣ ಕಾರ್ಯಕ್ರಮಗಳ ಮೊದಲ ದಿನದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನಂತಯಾನ ಪುಸ್ತಕದ ಮೊದಲ ಭಾಗವನ್ನು ಸ್ಪೀಕರ್ ಕಾಗೇರಿ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, 1963 ಸುಮಾರು 40 ವರ್ಷಗಳ ಒಡನಾಟ ನಮ್ಮದು. ಪಿಯುಸಿ ಫಸ್ಟ್‌ ಇಯರ್‌ನಲ್ಲಿ ಇರುವಾಗ ನನ್ನ ವಿದ್ಯಾರ್ಥಿ ಪರಿಷತ್‌ಗೆ ಸೇರಿದ ಕ್ಷಣದಿಂದ ನನ್ನ ಒಡನಾಟ ಅನಂತಕುಮಾರ್‌ ಜೊತೆ ಆಗಿದೆ ಎಂದು ನೆನೆದರು.

ಅನಂತಕುಮಾರ್‌ ಅವರದ್ದು ಆಕರ್ಷಕ ವ್ಯಕ್ತಿತ್ವ. ಅವರ ಒಡನಾಟ ನೆನೆಪು ಮಾಡಿಕೊಳ್ಳುವುದು ನಮ್ಮ ಕೆಲಸಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುತ್ತದೆ. ನಮಗೆಲ್ಲಾ ಪ್ರೇರಣಾ ಶಕ್ತಿಯಾಗಿದ್ದರು. ನಮ್ಮೆಲ್ಲರ ಜೀವನದಲ್ಲಿ ಅವರ ಅನುಭವದ ಪಾಠ ಇದೆ. ಅನಂತಯಾನ ಪುಸ್ತಕ ಲೋಕಾರ್ಪಣೆ ಮಾಡಿದ್ದೇನೆ, ಬಹಳಷ್ಟು ಪರಿಶ್ರಮ ಈ ಪುಸ್ತಕದ ಹಿಂದೆ ಇದೆ. ನಮ್ಮೆಲ್ಲರ ಭಾವನೆಗಳ ಜೊಡಣೆ ಪುಸ್ತಕದಲ್ಲಿ ಆಗಿದೆ ಎಂದರು.

ಅನಂತಕುಮಾರ್‌ ನೆನಪು ಸದಾ ಹಸಿರಾಗಿರಬೇಕು, ಅದಕ್ಕೆ ಇಂತಹ ಪ್ರೇರಣಾದಾಯಕ ಕಾರ್ಯಕ್ರಮಗಳ ಹೆಚ್ಚಾಗಬೇಕು. ಅವರ ನೆನೆಪು ಎಂದರೆ ನಮ್ಮ ಕೆಲಸಕ್ಕೆ ಇನ್ನಷ್ಟು ಪ್ರೇರಣೆ ಪಡೆದು ಮುಂದಕ್ಕೆ ಹೋಗುವಂತಹದ್ದು. ಅವರ ಭವಿಷ್ಯದ ಅಪೇಕ್ಷೆಯನ್ನು ಈಡೇರಿಸಲು ಕಂಕಣಬದ್ದರಾಗಿಬೇಕು. ಅವರು ನಮ್ಮೊಂದಿಗೆ ಇಂದು ಇಲ್ಲ, ಅವರು ಮಾಡಿರುವ ಕೆಲಸದ ಮೂಲಕ ಅವರು ಇನ್ನು ನಮ್ಮ ಮಧ್ಯೆ ಇದ್ದಾರೆ. ತೇಜಸ್ವಿನಿ ಅನಂತಕುಮಾರ್‌ ಅವರ ಕ್ರೀಯಾಶೀಲ ಕಾರ್ಯಗಳ ಮೂಲಕ ಇನ್ನು ಜೀವಂತವಾಗಿದ್ದಾರೆ ಎಂದು ಸ್ಮರಿಸಿದರು.

ಇದನ್ನೂ ಓದಿ : 2022-23ನೇ ಸಾಲಿನ ಪೂರಕ ಅಂದಾಜುಗಳ ಮೊದಲ ಕಂತಿನ ಬೇಡಿಕೆಗಳ ಪ್ರಸ್ತಾವನೆ ಮಂಡಿಸಿದ ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.