ETV Bharat / state

ಶಾಸಕ ಅರವಿಂದ್‌ ಬೆಲ್ಲದ್ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ನಡೆಯುತ್ತಿದೆ : ಗೃಹ ಸಚಿವ ಬೊಮ್ಮಾಯಿ

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಗುತ್ತಿಗೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ತನಿಖೆ ಅಗತ್ಯತೆ ಇಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿದೆ. ಹಿಂದಿನ ಸರ್ಕಾರಗಳು ಅನುಸರಿಸಿದ ಕೆಟಿಪಿಪಿ ಕಾಯ್ದೆಯಡಿ ಕ್ರಮವಹಿಸಲಾಗಿದೆ. ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ..

Bommai
ಗೃಹ ಸಚಿವ ಬಸವರಾಜ ಬೊಮ್ಮಾಯಿ
author img

By

Published : Jun 20, 2021, 3:01 PM IST

ಬೆಂಗಳೂರು : ದೂರವಾಣಿ ಕರೆ ಕದ್ದಾಲಿಕೆ ಮಾಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಶಾಸಕ ಅರವಿಂದ ಬೆಲ್ಲದ್ ದೂರು ನೀಡಿದ್ದಾರೆ. ಈ ಸಂಬಂಧ ತನಿಖಾಧಿಕಾರಿಗಳು ದೂರುದಾರ ಬೆಲ್ಲದ್ ಅವರ ಜೊತೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಆರ್​ಟಿನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಅರವಿಂದ ಬೆಲ್ಲದ್ ಅವರ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ನಡೆಯುತ್ತಿದೆ. ಬೆಲ್ಲದ್ ಜತೆಗೆ ತನಿಖಾಧಿಕಾರಿ ಮಾತನಾಡಿದ್ದಾರೆ. ಆರೋಪ ಕುರಿತು ಪಾರದರ್ಶಕವಾದ ತನಿಖೆ ನಡೆಯಲಿದೆ ಎಂದರು.

ಇದನ್ನು ಓದಿ: 'ಡಿಕೆಶಿ, ಸಿದ್ದು ಮೊದ್ಲು ಶಾಸಕರಾಗಿ ಗೆದ್ದು ಬರಲಿ - ಆಮೇಲೆ ಸಿಎಂ ಕನಸು ಕಾಣಲಿ'

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಗುತ್ತಿಗೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ತನಿಖೆ ಅಗತ್ಯತೆ ಇಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿದೆ. ಹಿಂದಿನ ಸರ್ಕಾರಗಳು ಅನುಸರಿಸಿದ ಕೆಟಿಪಿಪಿ ಕಾಯ್ದೆಯಡಿ ಕ್ರಮವಹಿಸಲಾಗಿದೆ. ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ.

ಅಲ್ಲದೆ ಟೆಂಡರ್ ಅಕ್ರಮ ಆಪಾದನೆ ಕೇಳಿ ಬಂದ ತಕ್ಷಣವೇ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ದಾಖಲೆಗಳ ಸಹಿತ ಸತ್ಯಾಂಶ ಬಹಿರಂಗಪಡಿಸಿದ್ದಾರೆ. ಪ್ರಕ್ರಿಯೆ ಪಾರದರ್ಶಕತೆ ಹೊಂದಿರುವುದು ಜಗಜ್ಜಾಹೀರಾಗಿರುವ ಕಾರಣ ತನಿಖೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪ್ರತಿಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.