ETV Bharat / state

ಅಮೂಲ್ಯ ವಿಚಾರಣೆ: ಸಾರ್ವಜನಿಕರಿಗೆ ಠಾಣೆಯೊಳಗೆ ನೋ ಎಂಟ್ರಿ! - ಬಸವೇಶ್ವರ ನಗರ ಪೊಲೀಸ್​ ಠಾಣೆ

ಪಾಕಿಸ್ತಾನ ಪರ ಘೋಷಣೆ ಕೂಗಿ ಬಂಧನಕ್ಕೊಳಗಾಗಿರುವ ಅಮೂಲ್ಯಳ ವಿಚಾರಣೆಯನ್ನು ಬಸವೇಶ್ವರ ನಗರ ಪೊಲೀಸ್​ ಠಾಣೆಯಲ್ಲಿ ಅಮೂಲ್ಯಳ ಮಾಡಲಾಗುತ್ತಿದೆ. ಹಾಗಾಗಿ ಇಂದು ದೂರು ನೀಡಲು ಬಂದ ಸಾರ್ವಜನಿಕರಿಗೆ ಠಾಣೆಯೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ.

Amulya Inquiry Background
ಅಮೂಲ್ಯ ವಿಚಾರಣೆ ಹಿನ್ನೆಲೆ
author img

By

Published : Feb 27, 2020, 6:24 PM IST

ಬೆಂಗಳೂರು: ಬಸವೇಶ್ವರ ನಗರ ಪೊಲೀಸ್​ ಠಾಣೆಯಲ್ಲಿ ಅಮೂಲ್ಯಳ ವಿಚಾರಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ದೂರು ನೀಡಲು ಬರುವ ಸಾರ್ವಜನಿಕರಿಗೆ ಠಾಣೆಯ ಒಳಗೆ ಪ್ರವೇಶ ನಿರ್ಬಂಧಿಸಲಾಗಿದೆ.

ವಿಚಾರಣೆ ವೇಳೆ ಪ್ರತಿಯೊಬ್ಬ ವ್ಯಕ್ತಿಗಳ ಮಾಹಿತಿಯನ್ನು ಪೊಲೀಸರು ಕಲೆ ‌ಹಾಕ್ತಿದ್ದಾರೆ. ಠಾಣೆಗೆ ದೂರು ನೀಡಲು ಬಂದವರಿಗೆ ನಾಳೆ ಬನ್ನಿ ಎಂದು ಹೇಳಿ ಪೊಲೀಸರು ಕಳಿಸುತ್ತಿದ್ದಾರೆ ಎನ್ನಲಾಗ್ತಿದೆ. ಅಮೂಲ್ಯ ಸ್ನೇಹಿತರು ಯಾರಾದ್ರು ಬಂದು ಕಿರಿಕ್ ಮಾಡುವ ಸಾಧ್ಯತೆ ಇದೆ. ಸದ್ಯ ಅಮೂಲ್ಯಳನ್ನ ವಿಚಾರಣೆಗೆ ಒಳಪಡಿಸಿದ್ದು, ಆಕೆಯಿಂದ ಆಯೋಜಕರ ಮಾಹಿತಿ, ಕಾರ್ಪೊರೇಟರ್ ಇಮ್ರಾನ್ ಪಾಷಾ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಸದ ಓವೈಸಿ ಮೊದಲೇ ಪರಿಚಯನಾ, ಅವರೊಂದಿಗೆ ಒಡನಾಟ ಹೇಗಿತ್ತು ಎಂಬುದರ ಕುರಿತು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗ್ತಿದೆ.

ಸ್ಯಾಂಡಲ್​ವುಡ್ ನಟರ ಕುರಿತು ಅಮೂಲ್ಯ ಆಕ್ರೋಶ ಹೊರಹಾಕಿದ್ರು. ಹೀಗಾಗಿ ಸ್ಯಾಂಡಲ್​ವುಡ್ ನಟರ ಬಗ್ಗೆ ಯಾಕೆ ಆಕ್ರೋಶ ಹೊರಹಾಕಿದ್ದು, ಎಂಬುದರ ಬಗ್ಗೆ ಕೂಡ ಮಾಹಿತಿ ಕಲೆಹಾಕಿದ್ದಾರೆ‌. ಇನ್ನು ಅಮೂಲ್ಯಳಿಗೆ ಮಧ್ಯಾಹ್ನ ಊಟಕ್ಕೆ ಚಪಾತಿ, ಅನ್ನ, ಸಾಂಬಾರ್ ನೀಡಲಾಗಿದ್ದು, ಸದ್ಯ ತನಿಖೆಯನ್ನ ಪೊಲೀಸರು ಚುರುಕುಗೊಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.