ETV Bharat / state

ಅಸಮಾಧಾನಗಳು ಪಕ್ಷದ ಸಂಘಟನೆಗೆ ಅಡ್ಡಿಯಾಗಬಾರದು :ರಾಜ್ಯ ನಾಯಕರಿಗೆ ಅಮಿತ್​ ಶಾ ಸೂಚನೆ - bangalore news

ಸರ್ಕಾರ ಹಾಗು ಪಕ್ಷದ ನಡುವೆ ಸಮನ್ವತೆ ಇರಬೇಕು, ಅಸಮಧಾನಗಳು ಸಂಘಟನೆಗೆ ಅಡ್ಡಿಯಾಗಬಾರದು, ಭಿನ್ನಾಭಿಪ್ರಾಯ ಇದ್ದಲ್ಲಿ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು, ಶಾಸಕರ ಅಹವಾಲು ಆಲಿಸಬೇಕು,ಕಾರ್ಯಕರ್ತರನ್ನೂ ಕಡೆಗಣಿಸಬಾರದು ಎಂದು ಹಲವು ಸಲಹೆಗಳನ್ನು ಅಮಿತ್​ ಶಾ ರಾಜ್ಯ ನಾಯಕರಿಗೆ ನೀಡಿದ್ದಾರೆ.

Amith sha instructs to CM BSY for better governance
ರಾಜ್ಯ ನಾಯಕರಿಗೆ ಅಮಿತ್​ ಶಾ ಸೂಚನೆ
author img

By

Published : Jan 16, 2021, 11:43 PM IST

Updated : Jan 17, 2021, 1:54 AM IST

ಬೆಂಗಳೂರು: ಮುಂಬರಲಿರುವ ಉಪ ಚುನಾವಣೆಗಳಿಗೆ ಸಜ್ಜಾಗುವ ಹಾಗು ಅಸಮಾಧಾನವನ್ನು ಶಮನಗೊಳಿಸಿ ಪಕ್ಷವನ್ನು ಸಜ್ಜುಗೊಳಿಸುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಬಿಜೆಪಿ ಘಟಕದ ಕೋರ್ ಕಮಿಟಿ ವಿಶೇಷ ಸಭೆ ನಡೆಸಿದರು. ಸಧ್ಯದಲ್ಲೇ ಎದುರಾಗಲಿರುವ ಬೆಳಗಾವಿ ಲೋಕಸಭೆ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು.

ರಾಜ್ಯ ಬಿಜೆಪಿ ಘಟಕದ ಕೋರ್ ಕಮಿಟಿ ವಿಶೇಷ ಸಭೆ
ರಾಜ್ಯ ಬಿಜೆಪಿ ಘಟಕದ ಕೋರ್ ಕಮಿಟಿ ವಿಶೇಷ ಸಭೆ

ಉಪ ಚುನಾವಣೆಗಳಲ್ಲಿ ಹಾಗು ಇತರ ಚುನಾವಣೆಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗದಂತೆ ನೋಡಿಕೊಳ್ಳಬೇಕು, ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಪಕ್ಷದ ಸಾಧನೆ ತೃಪ್ತಿದಾಯಕವಾಗಿದೆ. ಆದರೆ, ಅದು ಅತಿಯಾದ ಆತ್ಮವಿಶ್ವಾಸ ಆಗಬಾರದು. ಪಕ್ಷದಲ್ಲಿ ಆಂತರಿಕ ಅಸಮಧಾನಕ್ಕೆ ಅವಕಾಶ ನೀಡದೆ ಎಲ್ಲ ರೀತಿಯ ಅಸಮಧಾನಗಳನ್ನು ಶಮನಗೊಳಿಸಿ ಪಕ್ಷವನ್ನು ಸಜ್ಜುಗೊಳಿಸಬೇಕು ಎಂದು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.

ಸರ್ಕಾರ ಹಾಗು ಪಕ್ಷದ ನಡುವೆ ಸಮನ್ವತೆ ಇರಬೇಕು, ಅಸಮಧಾನಗಳು ಸಂಘಟನೆಗೆ ಅಡ್ಡಿಯಾಗಬಾರದು, ಭಿನ್ನಾಭಿಪ್ರಾಯ ಇದ್ದಲ್ಲಿ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು, ಶಾಸಕರ ಅಹವಾಲು ಆಲಿಸಬೇಕು,ಕಾರ್ಯಕರ್ತರನ್ನೂ ಕಡೆಗಣಿಸಬಾರದು ಎಂದು ಹಲವು ಸಲಹೆಗಳನ್ನು ನೀಡಿದ್ದಾರೆ.

ರಾಜ್ಯ ಬಿಜೆಪಿ ಘಟಕದ ಕೋರ್ ಕಮಿಟಿ ವಿಶೇಷ ಸಭೆ
ರಾಜ್ಯ ಬಿಜೆಪಿ ಘಟಕದ ಕೋರ್ ಕಮಿಟಿ ವಿಶೇಷ ಸಭೆ

ಸಚಿವ ಸಂಪುಟ ವಿಸ್ತರಣೆ ನಂತರ ಪಕ್ಷದಲ್ಲಿ ಎದುರಾಗಿರುವ ಅಸಮಧಾನ ಶಮನ ಕುರಿತು ಅಮಿತ್ ಶಾ ರಾಜ್ಯ ನಾಯಕರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸಿಎಂ ವಿರುದ್ಧ ಪದೇ ಪದೇ ಬಹಿರಂಗವಾಗಿ ಹೇಳಿಕೆ ನೀಡಿ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ತರುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ವಿಷಯವೂ ಸಭೆಯಲ್ಲಿ ಚರ್ಚೆಗೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಭೆ ನಂತರ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉತ್ತಮ ರೀತಿಯ ಸಭೆ ನಡೆಸಲಾಯಿತು. ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಘಟಕದ ಕೋರ್ ಕಮಿಟಿ ವಿಶೇಷ ಸಭೆ
ರಾಜ್ಯ ಬಿಜೆಪಿ ಘಟಕದ ಕೋರ್ ಕಮಿಟಿ ವಿಶೇಷ ಸಭೆ

ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಿಎಂ ಯಡಿಯೂರಪ್ಪ,ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯರಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಡಿ.ವಿ.ಸದಾನಂದಗೌಡ, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್, ಕೆ.ಎಸ್ ಈಶ್ವರಪ್ಪ, ಅರವಿಂದ ಲಿಂಬಾವಳಿ,ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯ ಅರುಣ್ ಕುಮಾರ್ ಉಪಸ್ಥಿತರಿದ್ದರು .

Last Updated : Jan 17, 2021, 1:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.