ETV Bharat / state

ಸಿಎಂ ಬೊಮ್ಮಾಯಿ ಭೋಜನ ಕೂಟದಲ್ಲಿ ಹೋಳಿಗೆ ಊಟ ಸವಿದ ಅಮಿತ್ ಶಾ! - ರೇಸ್ ವ್ಯೂ ಕಾಟೇಜ್​​ನಲ್ಲಿ ಮುಖ್ಯಮಂತ್ರಿ ಏರ್ಪಡಿಸಿರುವ ಭೋಜ‌ನ ಕೂಟ

ಸಿಎಂ ಬೊಮ್ಮಾಯಿ ಭೋಜನ ಕೂಟಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಜಿ ಎಂ ಸಿದ್ದೇಶ್, ಶ್ರೀರಾಮುಲು, ಶೋಭಾ ಕರಂದ್ಲಾಜೆ, ಗೋವಿಂದ್ ಕಾರಜೋಳ, ಸಂಸದ ಜಿ ಎಸ್ ಬಸವರಾಜ್, ಮಾಜಿ ಕೇಂದ್ರ ಸಚಿವ ಸದಾನಂದ ಗೌಡ, ಅಶ್ವಥ್ ನಾರಾಯಣ, ರಾಜ್ ಕುಮಾರ್ ಪಾಟೀಲ್ ತೇಲ್ಕೂರ್ ಸೇರಿದಂತೆ ಹಲವರು ಭಾಗಿಯಾಗಿದ್ದರು..

ಸಿಎಂ ಬೊಮ್ಮಾಯಿ ಭೋಜನ ಕೂಟದಲ್ಲಿ ಅಮಿತ್ ಶಾ ಭಾಗಿ

author img

By

Published : May 3, 2022, 3:22 PM IST

Updated : May 3, 2022, 3:31 PM IST

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಯೋಜಿಸಿದ್ದ ಭೋಜನಕೂಟದಲ್ಲಿ ಶಾ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಪಾಲ್ಗೊಂಡಿದ್ದು, ಬೆಳ್ಳಿ ತಟ್ಟೆಯಲ್ಲಿ ಭೋಜನ ಸೇವಿಸಿದರು. ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್​​ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏರ್ಪಡಿಸಿರುವ ಭೋಜ‌ನ ಕೂಟದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಒಂದೇ ಟೇಬಲ್‌ನಲ್ಲಿ ಕುಳಿತು ದುಂಡುಮೇಜಿನ ಭೋಜನ ಸೇವಿಸಿದರು. ಈ ವೇಳೆ ಅನೌಪಚಾರಿಕವಾಗಿ ಐವರು ನಾಯಕರು ಮಾತುಕತೆ ನಡೆಸಿದರು.

ಸಿಎಂ ಬೊಮ್ಮಾಯಿ ಭೋಜನ ಕೂಟದಲ್ಲಿ ಹೋಳಿಗೆ ಊಟ ಸವಿದ ಅಮಿತ್ ಶಾ!

ಹೋಳಿಗೆ ಊಟ : ಬಸವ ಜಯಂತಿ ಪ್ರಯುಕ್ತ ವಿಶೇಷ ಹೋಳಿಗೆ ಊಟ ಏರ್ಪಾಡು ಮಾಡಲಾಗಿತ್ತು. ಸೌತ್ ಇಂಡಿಯನ್ ಜೊತೆ ನಾರ್ತ್ ಇಂಡಿಯನ್ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು.

ನಾಯಕರು ಭಾಗಿ : ಸಿಎಂ ಬೊಮ್ಮಾಯಿ ಭೋಜನ ಕೂಟಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಜಿ ಎಂ ಸಿದ್ದೇಶ್, ಶ್ರೀರಾಮುಲು, ಶೋಭಾ ಕರಂದ್ಲಾಜೆ, ಗೋವಿಂದ್ ಕಾರಜೋಳ, ಸಂಸದ ಜಿ ಎಸ್ ಬಸವರಾಜ್, ಮಾಜಿ ಕೇಂದ್ರ ಸಚಿವ ಸದಾನಂದ ಗೌಡ, ಅಶ್ವತ್ಥ್ ನಾರಾಯಣ, ರಾಜ್ ಕುಮಾರ್ ಪಾಟೀಲ್ ತೇಲ್ಕೂರ್, ರವಿ ಸುಬ್ರಹ್ಮಣ್ಯ, ರೇಣುಕಾಚಾರ್ಯ, ಕುಮಾರ್ ಬಂಗಾರಪ್ಪ, ರವಿಕುಮಾರ್ ಎಂ ಎಲ್ ಸಿ, ಸಚಿವ ಬಿ ಸಿ ನಾಗೇಶ್ , ಬಿಡಿಎ ವಿಶ್ವನಾಥ್, ಸಿ ಪಿ ಯೋಗೇಶ್ವರ್ ಆಗಮನ, ವಿಜಯೇಂದ್ರ, ರೂಪಾಲಿ ನಾಯಕ್ ಸೇರಿದಂತೆ ಐವತ್ತಕ್ಕೂ ಹೆಚ್ಚು ನಾಯಕರು ಭಾಗಿಯಾದರು‌.

ಇದನ್ನೂ ಓದಿ: ಬಸವ ಜಯಂತಿಗೆ ಶುಭ ಕೋರಿ ಬಸವಣ್ಣನ ಬಗೆಗಿನ ಭಾಷಣದ ವಿಡಿಯೋ ಶೇರ್ ಮಾಡಿದ ಪ್ರಧಾನಿ

Last Updated : May 3, 2022, 3:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.