ಬೆಂಗಳೂರು: ವಿಧಾನ ಪರಿಷತ್ನಲ್ಲಿ ಕರ್ನಾಟಕ ಪೌರಾಡಳಿತ ಸಭೆಗಳ ತಿದ್ದುಪಡಿ ವಿಧೇಯಕ ಮಂಡನೆಯಾಗಿ ಅನುಮೋದನೆಗೊಂಡಿತು.
ವಿಧಾನ ಪರಿಷತ್ನಲ್ಲಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ವಿಧೇಯಕ ಮಂಡಿಸಿ, ಕೇವಲ ಒಂದು ಸಣ್ಣ ತಿದ್ದುಪಡಿ ಇದೆ. ಕುಷ್ಠರೋಗಕ್ಕೆ ಸಂಬಂಧಿಸಿದ ತಿದ್ದುಪಡಿ ಆಗಿದೆ. ಕೇವಲ ಕುಷ್ಠರೋಗವನ್ನು ಸಂಪೂರ್ಣ ಗುಣಪಡಿಸಬಹುದು, ಇವರನ್ನು ಹೊರಗಿಡುವ ಅವಶ್ಯಕತೆ ಇಲ್ಲ. ಆದ್ದರಿಂದ ಕುಷ್ಠರೋಗ ಅನ್ನುವ ಪದ ಬಳಕೆ ನಿಷೇಧಿಸುವ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಕುಷ್ಠರೋಗ ಪದ ಬಳಕೆಯನ್ನು ನಿಷೇಧಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದರು.
ಓದಿ:ಕರ್ನಾಟಕ ಲೇವಾದೇವಿದಾರರ ತಿದ್ದುಪಡಿ ವಿಧೇಯಕ 2020-21ಕ್ಕೆ ವಿಧಾನ ಪರಿಷತ್ನಲ್ಲಿ ಅಂಗೀಕಾರ
ರೋಗಪೀಡಿತ ವ್ಯಕ್ತಿಯ ರೋಗದ ಬಗ್ಗೆ ಕೀಳರಿಮೆ ತೆಗೆದುಹಾಕುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ. ರೋಗದ ಬಗ್ಗೆ ಹಾಗೂ ರೋಗಿಯ ಬಗ್ಗೆ ಸಮಾಜದಲ್ಲಿರುವ ಭಾವನೆ ಬದಲಿಸಲು ಈ ಪ್ರಯತ್ನ ಮಾಡಿದ್ದೇವೆ ಎಂದು ಸಭಾ ನಾಯಕರು ವಿವರಿಸಿದರು.