ETV Bharat / state

ಬೆಂಗಳೂರಲ್ಲಿ ಮತ್ತೊಂದು ವಂಚನೆ ಆರೋಪ... ಇಂತಹ ಕಂಪನಿಗಳಿಗೆ ಕಡಿವಾಣ ಯಾವಾಗ?

AIMMS ಎಂಬ ಸಂಸ್ಥೆ ಬರೋಬ್ಬರಿ ಸಾವಿರ ಕೋಟಿಗೂ ಹೆಚ್ಚಿನ ಹಣವನ್ನ ರಾತ್ರೋರಾತ್ರಿ ಲೂಟಿ ಮಾಡಿ ಹೂಡಿಕೆದಾರ ಜನರಿಗೆ ನಾಮ ಹಾಕಿದೆ ಎಂಬ ಆರೋಪ ಕೇಳಿಬಂದಿದೆ.

AIMMS ಸಂಸ್ಥೆಯಿಂದ ಜನರಿಗೆ ವಂಚನೆ..!
author img

By

Published : Jun 11, 2019, 10:28 PM IST

ಬೆಂಗಳೂರು: ಕೆಲ ಸಂಸ್ಥೆಗಳು ಜನರಿಗೆ ವಂಚನೆ ಮಾಡುವಲ್ಲಿ ರೇಸಿಗೆ ಬಿದ್ದಂತೆ ಕಾಣುತ್ತಿದೆ. ಇದೀಗ ಅದೇ ಲಿಸ್ಟಿಗೆ ಹೊಸ ನಾಮದ ಕಂಪನಿಯೊಂದು ಸೇರಿದೆ.

2017ರಲ್ಲಿ ಆಯುಬ್, ಇಲಿಯಾಸ್, ಮುಜಾಹಿದ್, ಶಾಹಿದ್, ಮುದಸ್ಸಿರ್ ಎಂಬ ಐದು ಜನರ ಪಾಲುದಾರಿಕೆಯಲ್ಲಿ ಪ್ರಾರಂಭವಾದ AIMMS ಎಂಬ ಸಂಸ್ಥೆ ತನ್ನಲ್ಲಿ ಹೂಡಿಕೆ ಮಾಡಿದ್ದ ಬರೋಬ್ಬರಿ ಸಾವಿರ ಕೋಟಿಗೂ ಹೆಚ್ಚಿನ ಹಣವನ್ನ ರಾತ್ರೋರಾತ್ರಿ ಲೂಟಿ ಮಾಡಿ ಜನರಿಗೆ ನಾಮ ಹಾಕಿದೆ ಎಂಬ ಆರೋಪ ಕೇಳಿಬಂದಿದೆ. ಬಡ ಮುಸ್ಲಿಂ ಮಹಿಳೆಯರನ್ನೇ ಟಾರ್ಗೆಟ್ ಮಾಡಿದ್ದ AIMMS ದೇವರ ಹೆಸರಲ್ಲಿ ಮುಲ್ಲಾಗಳಿಂದ ಹೇಳಿಸಿ, ನಿಮ್ಮ ಹಣಕ್ಕೆ ಮೋಸವಾಗುವುದಿಲ್ಲ. ತಿಂಗಳಿಗೆ 10 ಸಾವಿರ ಬಡ್ಡಿ ಕೊಡುತ್ತೇವೆ ಎಂದು ಒಂದೆರಡು ತಿಂಗಳು ಬಡ್ಡಿ ರುಚಿ ತೋರಿಸಿ ನಂಬಿಕೆ ಬರುವಂತೆ ಮಾಡಿ ಇದೀಗ AIMMS ಮಾಲೀಕರು ದಿಢೀರ್​ ಕೈ ಎತ್ತಿದ್ದಾರೆ ಎನ್ನಲಾಗಿದೆ.

AIMMS ಸಂಸ್ಥೆಯಿಂದ ಜನರಿಗೆ ವಂಚನೆ ಆರೋಪ

ಮರುಳು ಮಾತುಗಳನ್ನು ನಂಬಿ ಲಕ್ಷ, ಲಕ್ಷ ಹಣ ತಂದು AIMMSನಲ್ಲಿ ಸುರಿದಿದ್ದ ಜನರು, ಈಗ ಸಂಸ್ಥೆಯ ಮುಂದೆ ಕಣ್ಣೀರು ಹಾಕುತ್ತಿದ್ದಾರೆ. ತಾವು ಹೂಡಿಕೆ ಮಾಡಿದ್ದಲ್ಲದೆ ತಮ್ಮ ಪರಿಚಯಸ್ಥರಿಗೂ ಹೇಳಿ ಬಂಡವಾಳ ಹೂಡಿಸಿರುವ ಮಂದಿ ತಾವು ಹಾಳಾದೆವು, ತಮ್ಮವರನ್ನೂ ಹಾಳು ಮಾಡಿದೆವು ಎಂದು ರೋದಿಸುತ್ತಿದ್ದಾರೆ. ಅದಾಗಲೇ ದೂರು ದಾಖಲಾಗಿ, ಸಂಸ್ಥೆಯ ಮಾಲೀಕರನ್ನು ಬಂಧಿಸಲಾಗಿತ್ತು. ಆದರೆ ಈಗ ಬೇಲ್ ತೆಗೆದುಕೊಂಡು ರಾಜಾರೋಷವಾಗಿ ತಿರುಗುತ್ತಿದ್ದಾರೆ. ನಮ್ಮ ಸಂಕಟ ಕೇಳುವವರು ಯಾರು ಎಂದು ಹಣ ಕಳೆದುಕೊಂಡವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Intro:Aimms ventures fraudBody:ಆಂಬಿಡೆಂಟ್ ಆಯ್ತು, ಐಎಂಎ ಆಯ್ತು ಈಗ ಆ ಸಾಲಿಗೆ ಮತ್ತೊಂದು ಸಂಸ್ಥೆ ಸೇರಿದೆ, ಜನರಿಗೆ ಮೋಸ ಮಾಡುವುದರಲ್ಲಿ ರೇಸಿಗೆ ಬಿದ್ದಿರುವ ಈ ಸಂಸ್ಥೆಗಳು ಕೋಟಿ ಕೋಟಿ ಲೂಟಿ ಮಾಡುತ್ತಿದೆ, ಯಾವುದ ಲಿಸ್ಟಿಗೆ ಸೇರಿರುವ ಹೊಸ ನಾಮದ ಕಂಪನಿ

2017 ರಲ್ಲಿ ಆಯುಬ್, ಇಲಿಯಾಸ್, ಮುಜಾಹಿದ್, ಶಾಹಿದ್, ಮುದಸ್ಸಿರ್ ಎಂಬ ಐದು ಜನರ ಪಾಲುದಾರಿಕೆಯಲ್ಲಿ ಪ್ರಾರಂಭವಾದ AIMMS ಎಂಬ ಸಂಸ್ಥೆ ತನ್ನಲ್ಲಿ ಹೂಡಿಕೆ ಮಾಡಿದ್ದ ಬರೋಬ್ಬರಿ ಸಾವಿರ ಕೋಟಿಗು ಹೆಚ್ಚು ಹಣವನ್ನ ರಾತ್ರೋರಾತ್ರಿ, ಲೂಟಿ ಮಾಡಿ ಜನರಿಗೆ ನಾಮಹಾಕಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ, ಬಡ ಮುಸ್ಲಿಂ ಮಹಿಳೆಯರನ್ನೆ ಟಾರ್ಗೆಟ್ ಮಾಡಿದ್ದ AIMMS ದೇವರ ಹೆಸರಲ್ಲಿ ಮುಲ್ಲಗಳಿಂದ ಹೇಳಿಸಿ, ನಿಮ್ಮ ಹಣಕ್ಕೆ ಮೋಸವಾಗುವುದಿಲ್ಲ, ತಿಂಗಳಿಗೆ 10 ಸಾವಿರ ಬಡ್ಡಿ ಕೊಡುತ್ತೇವೆ ಎಂದು, ಒಂದೆರಡು ತಿಂಗಳು ಬಡ್ಡಿ ರುಚಿ ತೋರಿಸಿ ನಂಬಿಕೆ ಬರಿಸಿ ಇದೀಗ ಧಿಡೀರ್ ಕೈ ಎತ್ತಿದ್ದಾರೆ AIMMS ಮಾಲಿಕರು.

ಮರುಳು ಮಾತು ನಂಬಿ ಲಕ್ಷ, ಲಕ್ಷ ಹಣ ತಂದು AIMMS ನಲ್ಲಿ ಸುರಿದಿದ್ದ ಜನರು ಈಗ ಸಂಸ್ಥೆಯ ಮುಂದೆ ಕಣ್ಣೀರು ಹಾಕುತ್ತಿದ್ದಾರೆ, ತಾವು ಹೂಡಿಕೆ ಮಾಡಿದ್ದಲ್ಲದೆ, ತಮ್ಮ ಪರಿಚಯಸ್ಥರಿಗು ಹೇಳಿ ಬಂಡವಾಳ ಹೂಡಿಸಿರು ಮಂದಿ ತಾವು ಹಾಳಾದೆವು, ತಮ್ಮವರನ್ನು ಹಾಳುಮಾಡಿದೆವು ಎಂದು ರೋಧಿಸುತ್ತಿದ್ದಾರೆ, ಅದಾಗಲೇ ದೂರು ದಾಖಲಾಗಿ, ಸಂಸ್ಥೆಯ ಮಾಲಿಕರನ್ನು ಬಂಧಿಸಿದ್ದರು, ಆದರೆ ಈಗ ಬೇಲ್ ತೆಗೆದುಕೊಂಡು ರಾಜರೋಷವಾಗಿ ತಿರುಗುತ್ತಿದ್ದಾರೆ, ನಮ್ಮ ಸಂಕಟ ಕೇಳುವವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಹಣ ಕಳೆದುಕೊಂಡವರು.

ಪದೆ ಪದೆ ಇಂತ ದೋಕ ಸಂಸ್ಥೆಗಳು ಜನರನ್ನ‌ ಮೋಸ ಮಾಡುತ್ತಲೆ ಇರುತ್ತವೆ, ನಮ್ಮ ಜನರು ಮೋಸ ಹೋಗುತ್ತಲೆ ಇರುತ್ತಾರೆ, ಸರ್ಕಾರ ಇಂತಹ ನಾಮದ ಕಂಪನಿಗಳಿಗೆ ಕಡಿವಾಣವಾಕುವವರೆಗು ಬೀದಿಯಲ್ಲಿ ಜನರ ಗೋಳು ತಪ್ಪದು.Conclusion:Video also attached

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.