ETV Bharat / state

ಸ್ಯಾಂಡಲ್​ವುಡ್ ಡ್ರಗ್ಸ್​​ ಮಾಫಿಯಾ ಹಿಂದೆ ನೈಜಿರಿಯಾ ಪ್ರಜೆಗಳು: ಅಲೋಕ್ ಕುಮಾರ್ ಟ್ವೀಟ್ - KSRP ADGP ALOK KUMAR

ಬೆಂಗಳೂರಿನಲ್ಲಿ ಅಕ್ರಮವಾಗಿ ಬಹುತೇಕ ನೈಜಿರಿಯನ್ ಪ್ರಜೆಗಳು ವಾಸವಾಗಿ ಡ್ರಗ್ಸ್​ ಮಾಫಿಯಾದಲ್ಲಿ ತೊಡಗಿದ್ದಾರೆ. ನಟ ನಟಿಯರಿಗೆ ಇವರು ಡ್ರಗ್ಸ್​ ಪೂರೈಸುತ್ತಿರುವ ಮಾಹಿತಿ ಮೇರೆಗೆ ಅಧಿಕಾರಿಗಳು ನೈಜಿರಿಯಾ ಪ್ರಜೆಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.

dss
ಅಲೋಕ್ ಕುಮಾರ್ ಟ್ವೀಟ್
author img

By

Published : Sep 1, 2020, 2:18 PM IST

ಬೆಂಗಳೂರು: ಸ್ಯಾಂಡಲ್​ವುಡ್ ಕಲಾವಿದರಿಗೆ ಮಾದಕ ವಸ್ತು ಪೂರೈಸುತ್ತಿರುವವರ ಪೈಕಿ ನೈಜಿರಿಯನ್ ಪ್ರಜೆಗಳು ಕೂಡ ಇದ್ದಾರೆ ಎಂಬ ಮಾಹಿತಿಯನ್ನ ನಿರ್ದೇಶಕ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆಂಬ ಮಾಹಿತಿ ಸಿಸಿಬಿ ಉನ್ನತ ಮೂಲಗಳಿಂದ ಬಯಲಾಗಿದೆ.

dsdd
ಅಲೋಕ್ ಕುಮಾರ್ ಟ್ವೀಟ್

ಸಿಸಿಬಿ ಬಳಿ ಈ ಮುಂಚೆಯೇ ನಶೆ ಏರಿಸಿಕೊಳ್ಳುವ ನಟ-ನಟಿಯರ ಮಾಹಿತಿ ಇತ್ತು. ಸದ್ಯ ಸಿಸಿಬಿ ಮಾಹಿತಿ ಹಾಗೂ ಇಂದ್ರಜಿತ್​ ಲಂಕೇಶ್ ಮಾಹಿತಿ ಸಾಮ್ಯತೆ ಇದೆ ಎನ್ನಲಾಗ್ತಿದೆ. ಆದರೆ ಇಂದ್ರಜಿತ್​ ಲಂಕೇಶ್ ತನಿಖಾಧಿಕಾರಿಗಳಿಗೆ ಕೇವಲ ಭಾತ್ಮಿದಾರರಾಗಿ ಮಾಹಿತಿ ನೀಡಿ ಸಾಕ್ಷಿಯಾಗಿ ಪರಿವರ್ತನೆ ಆಗುವುದಿಲ್ಲ ಎಂದು ಜಂಟಿ ಆಯುಕ್ತರ ಮುಂದೆಯೇ ಸ್ಪಷ್ಟಪಡಿಸಿದ್ದಾರೆ. ಲಂಕೇಶ್ ನೀಡಿರುವ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ನಟಿಯರಿಗೆ ನೋಟಿಸ್ ನೀಡಲು ತಯಾರಿ ‌ನಡೆಸಿದ್ದಾರೆ ಎನ್ನಲಾಗಿದೆ.

ಇತ್ತ ಈ ಕುರಿತು ಟ್ವೀಟ್​ ಮಾಡಿರುವ ಕೆಎಸ್ಆರ್​ಪಿ ಎಡಿಜಿಪಿ ಅಲೋಕ್ ಕುಮಾರ್, ಡ್ರಗ್ಸ್​ ಮಾಫಿಯಾ ದೊಡ್ಡ ಮಟ್ಟದ ದಂಧೆ. ಇದನ್ನ ಹೋಗಲಾಡಿಸಬೇಕೆಂದರೆ ಕ್ರೂರವಾಗಿ ಬೇಟೆಯಾಡಬೇಕು. 2011ರಲ್ಲಿ ಸಿಸಿಬಿಯಲ್ಲಿ ನಾವಿದ್ದಾಗ ಮಾರ್ಟಿನ್ ಎನ್ ಡ್ಯೂಕ್ ಎನ್ನುವ ಮಾಸ್ಟರ್ ಮೈಂಡ್ ನ ಹಿಡಿದಿದ್ವಿ. 2019 ರಲ್ಲಿ 60 ಜನ ಡ್ರಗ್ಸ್​ ಪೆಡ್ಲರ್​ಗಳಿಗೆ ಪರೇಡ್ ನಡೆಸಿದ್ದೆವು ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.