ಬೆಂಗಳೂರು: ಬಿಬಿಎಂಪಿ ಪಾಲಿಕೆ ಸದಸ್ಯ ಏಳುಮಲೈ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸಗಾಯಿಪುರಂ ವಾರ್ಡ್ಗೆ ನಡೆದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಮೈತ್ರಿ ಅಭ್ಯರ್ಥಿ ಪಳನಿಯಮ್ಮಾಳ್ ಜಯಗಳಿಸಿದ್ದಾರೆ.
ಏಳುಮಲೈ ಅವರ ಸಹೋದರಿಯಾದ ಮೈತ್ರಿ ಅಭ್ಯರ್ಥಿ ಪಳನಿಯಮ್ಮಾಳ್ 3 ಸಾವಿರ ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದಾರೆ.
ಗೆಲುವಿನ ಬಳಿಕ ಮಾತನಾಡಿರುವ ಪಳನಿಯಮ್ಮಾಳ್, ತಮ್ಮ ಸಹೋದರ ದಿ. ಏಳುಮಲೈ ಅವರ ಆಶೀರ್ವಾದ ಹಾಗೂ ವಾರ್ಡ್ ಜನಾಶೀರ್ವಾದದಿಂದ ಗೆದ್ದಿದ್ದೇನೆ. ತಮ್ಮನ ಕನಸಿನಂತೆ ವಾರ್ಡ್‌ನಲ್ಲಿ ಸರ್ಕಾರಿ ಆಸ್ಪತ್ರೆ ಕಟ್ಟಿಸುತ್ತೇನೆ, ಬಡವರಿಗೆ ಮನೆಗಳನ್ನು ಕಟ್ಟಿಸಿಕೊಡುತ್ತೇನೆ ಎಂದರು. ಈ ಹಿಂದೆಯೂ ಒಂದು ಬಾರಿ ಕಾರ್ಪೊರೇಟರ್ ಆಗಿದ್ದ ಪಳನಿಯಮ್ಮಾಳ್ ಎರಡನೇ ಬಾರಿಗೆ ಸಗಾಯಿಪುರಂನಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.