ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿಯಿಟ್ಟ ಪ್ರಕರಣ ಸಂಬಂಧ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿಸಿಬಿಗೆ ಶಾಕ್ ಕಾದಿತ್ತು. ಹೌದು, ಸಂಪತ್ ರಾಜ್ ರಕ್ಷಣೆ ಮಾಡಲು ಬ್ಯಾಪ್ಟಿಸ್ಟ್ ಆಸ್ಪತ್ರೆ ನಾಟಕವಾಡಿರುವ ವಿಚಾರ ಬಯಲಾಗಿದೆ.
ಸಂಪತ್ ರಾಜ್ ತಾನು ಬಂಧನಕ್ಕೊಳಗಾಗುತ್ತೇನೆ ಎಂದು ಹೆದರಿ ಮೊದಲು ಸೆಪ್ಟಂಬರ್ 14 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸಿಸಿಬಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದಾಗ ಆಸ್ಪತ್ರೆ ಅಧಿಕಾರಿಗಳ ಭೇಟಿಗೆ ಅವಕಾಶ ನೀಡಿರಲಿಲ್ಲ. ಮೊದಲ ಬಾರಿ ಚಿಕಿತ್ಸೆ ಅವಧಿ ಮುಗಿದ ಮೇಲೆ ಮತ್ತೊಮ್ಮೆ ಕೋವಿಡ್ ತಗುಲಿರುವ ನೆಪ ಹೇಳಿ ಆಸ್ಪತ್ರೆಗೆ ದಾಖಲಾದರು. ತನಿಖೆಯ ವೇಳೆ ಸಿಸಿಬಿ ನಡೆಗೆ ಹೆದರಿದ್ದ ಬ್ಯಾಪ್ಟಿಸ್ಟ್ ಪ್ರಕರಣದಿಂದ ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲ್ಯಾನ್ ಮಾಡಿತ್ತು. ಆದರೆ, ಸಿಸಿಬಿ ಆಸ್ಪತ್ರೆ ನಡೆಯ ಬಗ್ಗೆ ಕೆಎಂಸಿಗೆ ದೂರು ನೀಡಲು ಮುಂದಾಗಿತ್ತು.
ಹೀಗಾಗಿ ಸಂಪತ್ ರಾಜ್ ನಕಲಿ ರಿಪೋರ್ಟ್ ಸೃಷ್ಟಿ ಮಾಡಿದ ಆಡಳಿತ ಮಂಡಳಿ 2 ತಿಂಗಳಲ್ಲಿ 4 ಬಾರಿ ಅಡ್ಮಿಟ್, 4 ಬಾರಿ ಡಿಸ್ಚಾರ್ಜ್ ಮಾಡಿದ್ದಾರೆ. ಸಂಪತ್ ರಾಜ್ 2 ತಿಂಗಳ ಅವಧಿಯನ್ನು ನಾಲ್ಕು ಬಾರಿ ಡಿವೈಡ್ ಮಾಡಿ 15ನೇ ದಿನ ಡಿಸ್ಚಾರ್ಜ್ ಹಾಗೂ 17 ನೇ ದಿನ ಅಡ್ಮಿಟ್ ಮಾಡಿಕೊಂಡಿದ್ದರು. ಈ ರೀತಿ ದಾಖಲೆಗಳನ್ನ ರೆಡಿ ಮಾಡಿಕೊಂಡಿರುವ ವಿಚಾರ ನಿನ್ನೆ ಸಿಸಿಬಿ ಭೇಟಿ ಕೊಟ್ಟ ವೇಳೆ ಬೆಳಕಿಗೆ ಬಂದಿದೆ.
ಈಗಾಗಲೇ ಆಸ್ಪತ್ರೆಯವರನ್ನು ವಿಚಾರಣೆಗೆ ಒಳಪಡಿಸಿದ್ದು, ಮುಂದಿನ ದಿನ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಸದ್ಯ ಮೆಡಿಕಲ್ ರಿಪೋರ್ಟ್ ಸೀಜ್ ಮಾಡಿ ಸಂಪತ್ ಪತ್ತೆಗೆ ಶೋಧ ಕಾರ್ಯವನ್ನು ಸಿಸಿಬಿ ಪೊಲೀಸರು ಮುಂದುವರೆಸಿದ್ದಾರೆ.