ETV Bharat / state

ಪಾಲಿಕೆಯಿಂದ ತೃತೀಯ ಲಿಂಗಿಗಳಿಗೆ ₹6 ಕೋಟಿ ಅನುದಾನ; 1 ರೂಪಾಯಿಯೂ ಬಳಕೆಯಾಗದೆ ರದ್ದು! - ತೃತೀಯ ಲಿಂಗಿಗಳ ಅನುದಾನ ದುರ್ಬಳಕೆ ಆರೋಪ

ತೃತೀಯ ಲಿಂಗಿಗಳಲ್ಲೇ ಒಗ್ಗಟ್ಟಿನ ಕೊರತೆಯಿಂದ ಅನುದಾನ ಬಳಸಿಕೊಳ್ಳುತ್ತಿಲ್ಲ. ಎಷ್ಟು ಸಭೆಗಳನ್ನು ನಡೆಸಿದರೂ ಒಮ್ಮತಕ್ಕೆ ಬಾರದ ಹಿನ್ನೆಲೆಯಲ್ಲಿ ಅನುದಾನ ಬಳಕೆಯಾಗಿಲ್ಲ. ಕುಂದುಕೊರತೆ ನಿವಾರಣಾ ಸಮಿತಿಯಲ್ಲೂ ಪ್ರತಿ ಬಾರಿ ಜಗಳವಾಡುತ್ತಾರೆ. ಎಲ್ಲರಿಗೂ ಅನುದಾನ ಕೊಡಿ ಎಂದು ಬೇಡಿಕೆಯಿಡುತ್ತಾರೆ. ಇದು ಒಂದೇ ಬಾರಿಗೆ ಸಾಧ್ಯವಿಲ್ಲ ಎಂದು ಬಿಬಿಎಂಪಿ ಕಲ್ಯಾಣ ವಿಭಾಗದ ವಿಶೇಷ ಅಧಿಕಾರಿ ಶರತ್ ತಿಳಿಸಿದ್ದಾರೆ.

allegations-about-grants-didnt-use-for-transgenders-in-bengaluru
ಬಿಬಿಎಂಪಿ ಕಲ್ಯಾಣ ವಿಭಾಗದ ವಿಶೇಷ ಅಧಿಕಾರಿ ಶರತ್
author img

By

Published : Apr 7, 2022, 10:14 PM IST

ಬೆಂಗಳೂರು: ತೃತೀಯ ಲಿಂಗಿಗಳ ಕಲ್ಯಾಣಕ್ಕೆ 2021-22 ಸಾಲಿನ ಬಜೆಟ್​ನಲ್ಲಿ 6 ಕೋಟಿ ರೂ ಮೀಸಲಿಟ್ಟರೂ 1 ರೂಪಾಯಿಯೂ ಬಳಕೆಯಾಗದೆ ರದ್ದಾಗಿದೆ. ಕಳೆದ ಎರಡು ಮೂರು ವರ್ಷದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅನುದಾನದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕೂ ಅನುದಾನ ಮೀಸಲಿಡಲಾಗುತ್ತಿದೆ ಎಂದು ಬಿಬಿಎಂಪಿ ಕಲ್ಯಾಣ ವಿಭಾಗದ ವಿಶೇಷ ಅಧಿಕಾರಿ ಶರತ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕಳೆದ ವರ್ಷ ಮೊದಲ ಬಾರಿಗೆ 6 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ತೃತೀಯ ಲಿಂಗಿಗಳು ಕೆಲಸವಿಲ್ಲದೆ ಸಿಗ್ನಲ್​ಗಳಲ್ಲಿ ಭಿಕ್ಷೆ ಬೇಡುವುದು, ವೇಶ್ಯೆ ವೃತ್ತಿಯಿಂದ ಹೊರಗೆ ಬಂದು ಗೌರವಯುತವಾಗಿ ಸ್ವಯಂ ಉದ್ಯೋಗದಲ್ಲಿ ತೊಡಗಬೇಕು. ಇದಕ್ಕೆ ಸಹಾಯಧನ ಕೊಡಬೇಕು ಎಂಬ ಉದ್ದೇಶದಿಂದ ಅನುದಾನ ಮೀಸಲಿಡಲಾಗಿದೆ. ಕಳೆದ ಬಾರಿ ಅನುದಾನಕ್ಕಾಗಿ 450 ಅರ್ಜಿಗಳು ಸಹ ಸಲ್ಲಿಕೆಯಾಗಿದ್ದವು. ಬ್ಯಾಂಕ್ ಮೂಲಕ ಸ್ವಯಂ ಉದ್ಯೋಗಕ್ಕಾಗಿ 3 ಲಕ್ಷ ರೂಪಾಯಿ ಸಾಲ ಸೌಲಭ್ಯ, ಈ ಪೈಕಿ 1.50 ಲಕ್ಷ ಪಾಲಿಕೆಯಿಂದ ಸಬ್ಸಿಡಿಯಾಗಿದೆ ಎಂದಿದ್ದಾರೆ.

ತೃತೀಯ ಲಿಂಗಿಗಳಲ್ಲೇ ಒಗ್ಗಟ್ಟಿನ ಕೊರತೆಯಿಂದ ಅನುದಾನ ಬಳಸಿಕೊಳ್ಳುತ್ತಿಲ್ಲ. ಎಷ್ಟು ಸಭೆಗಳನ್ನು ನಡೆಸಿದರೂ ಒಮ್ಮತಕ್ಕೆ ಬಾರದ ಹಿನ್ನಲೆ ಅನುದಾನ ಬಳಕೆಯಾಗಿಲ್ಲ. ಕುಂದುಕೊರತೆ ನಿವಾರಣಾ ಸಮಿತಿಯಲ್ಲೂ ಪ್ರತೀ ಬಾರಿ ಜಗಳವಾಡುತ್ತಾರೆ. ಎಲ್ಲರಿಗೂ ಅನುದಾನ ಕೊಡಿ ಎಂದು ಬೇಡಿಕೆಯಿಡುತ್ತಾರೆ. ಇದು ಒಂದೇ ಬಾರಿಗೆ ಸಾಧ್ಯವಿಲ್ಲ ಎನ್ನುತ್ತಾರೆ.

ತೃತೀಯ ಲಿಂಗಿಗಳ ವಾದ: ತೃತೀಯ ಲಿಂಗಿಗಳ ವಾದವೇ ಬೇರೆ. ಲೈಂಗಿಕ ಅಲ್ಪಸಂಖ್ಯಾತ ವೇದಿಕೆಯ ಮಲ್ಲು ಮಾತನಾಡಿ, ಹಣ ಸದ್ಭಳಕೆ ಮಾಡುತ್ತಿಲ್ಲ ಎಂಬ ವಿಚಾರ ಸತ್ಯಕ್ಕೆ ದೂರವಾದುದು. ಸ್ವಯಂ ಉದ್ಯೋಗ ಮಾಡುವ ಆಸಕ್ತಿ ಇರುವವರಿಗೆ ಹೆಚ್ಚು ಅನುದಾನ ಕೊಡಿ ಎನ್ನುತ್ತೇವೆ. ಆದರೆ, ಕೊನೇ ಕ್ಷಣದಲ್ಲಿ ಸಮಿತಿ ಸಭೆ ಕರೆದು, ತರಾತುರಿಯಲ್ಲಿ ನಡೆಸುತ್ತಾರೆ. ವ್ಯವಸ್ಥಿತವಾದ ಸಭೆಯನ್ನು ಪಾಲಿಕೆಯೇ ನಡೆಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಚಾಮರಾಜಪೇಟೆ ಬಂದ್ ಸಂಪೂರ್ಣ ವಿಫಲ: ಶಾಸಕ ಜಮೀರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.