ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಕಲಬುರಗಿ ಮೂಲದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸೆಗಿದ ಆರೋಪದಡಿ ಸಿಐಡಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿಟೆಕ್ಟಿವ್ ಸಬ್ ಇನ್‌ಸ್ಪೆಕ್ಟರ್ ಒಬ್ಬರನ್ನು ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಲಕ್ಷ್ಮಣ್ ಬಂಧಿತ ಡಿಟೆಕ್ಟಿವ್ ಅಧಿಕಾರಿ. ಕಳೆದ ವರ್ಷ ನಡೆದಿದ್ದ 545 ಪಿಎಸ್ಐ ಹುದ್ದೆಗಳಿಗಾಗಿ ಲಿಖಿತ ಪರೀಕ್ಷೆಗಾಗಿ ಕಲಬುರಗಿಗೆ ಕರ್ತವ್ಯದ ಮೇಲೆ ತೆರಳಿದ್ದ ಈತನಿಗೆ ಅಲ್ಲಿ ಯುವತಿ ಪರಿಚಯವಾಗಿ ಆತ್ಮೀಯತೆ ಬೆಳೆದಿದೆ. ಕಾಲಕ್ರಮೇಣ ಆಕೆಯನ್ನು ಬೆಂಗಳೂರಿಗೆ ಕರೆಸಿಕೊಂಡು ನಗರ ದಕ್ಷಿಣ ವಿಭಾಗದ ಹೊಟೇಲ್ವೊಂದರಲ್ಲಿ ಏಕಾಂತವಾಗಿ ಉಳಿದುಕೊಂಡಿದ್ದರು. ಇದಾದ ಬಳಿಕ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ.
ಈ ನಡುವೆ ಮದುವೆಯಾಗುವಂತೆ ಯುವತಿ ಒತ್ತಡ ಹೇರಿದ್ದಾಳೆ. ಆತ ಮದುವೆಯಾಗಲು ನಿರಾಕರಿಸಿದ್ದಾನೆ. ಹಲವು ಬಾರಿ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ಮಾಡಿದ್ದಳು. ದೂರನ್ನು ಗಂಭೀರವಾಗಿ ಪರಿಗಣಿಸಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದರು. ಇದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಬ್ ಇನ್ಸ್ಪೆಕ್ಟರ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಇದನ್ನೂ ಓದಿ: ಸಾಲಕ್ಕೆ ಪ್ರತಿಯಾಗಿ ಸಾಲಗಾರನ ಹೆಂಡತಿ ಕರೆದೊಯ್ದ ಮಾಲೀಕ: ಅಮಾನವೀಯ ಘಟನೆಗೆ ಸಾಕ್ಷಿಯಾದ ಕಡಪ