ETV Bharat / state

ಚೈತ್ರಾ ಕೇಸ್​​ ಮಾದರಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪ - ಕೊಪ್ಪಳದ‌ ಕಾರಾಟಗಿಯ ತಿಮ್ಮಪ್ಪ ರೆಡ್ಡಿ

ಬಿಜೆಪಿಯಿಂದ ಟಿಕೆಟ್​ ಕೊಡಿಸುವುದಾಗಿ 25 ಲಕ್ಷ ಹಣ ಪಡೆದು ಮೋಸ ಮಾಡಿರುವ ಆರೋಪದಡಿ ಪ್ರಕರಣವೊಂದು ಅಶೋಕನಗರ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ.

ವಂಚನೆ ಆರೋಪ
ವಂಚನೆ ಆರೋಪ
author img

By ETV Bharat Karnataka Team

Published : Sep 16, 2023, 11:45 AM IST

Updated : Sep 16, 2023, 1:02 PM IST

ಬೆಂಗಳೂರು: ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿಗೆ ವಂಚಿಸಿರುವ ಮಾದರಿಯಲ್ಲಿ‌ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.‌ ಕೊಪ್ಪಳದ‌ ಕಾರಾಟಗಿಯ ತಿಮ್ಮಪ್ಪ ರೆಡ್ಡಿ ಎಂಬುವವರು ವಂಚನೆಗೊಳಗಾಗಿದ್ದು, ಇವರು ನೀಡಿದ ದೂರಿನ ಮೇರೆಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ವಿಶಾಲ್ ನಾಗ್, ಗೌರವ್ ಹಾಗೂ ಜೀತು ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಇರುವುದೇನು?: ಕನಕಗಿರಿ ವಿಧಾನಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಸ್ಫರ್ಧಿಸಲು ತಿಮ್ಮಪ್ಪ ರೆಡ್ಡಿ ಪತ್ನಿ ಗಾಯತ್ರಿ ತಿಮ್ಮರೆಡ್ಡಿ ಆಕ್ಷಾಂಕಿಯಾಗಿದ್ದರು. ಟಿಕೆಟ್ ಪಡೆಯಲು ಭಾರಿ ಪೈಪೋಟಿ ಎದುರಾಗಿತ್ತು. ಈ ವೇಳೆ‌, ದೆಹಲಿ ಮೂಲದ ವಿಶಾಲ್ ‌ನಾಗ್ ಪರಿಚಯವಾಗಿದೆ. ಬಿಜೆಪಿಯಿಂದ ಸೆಂಟ್ರಲ್ ಸರ್ವೆ ಚೀಫ್ ಎಂದು ಪರಿಚಯಿಸಿಕೊಂಡಿದ್ದ. ಸಹ ಆರೋಪಿ‌ ಜೀತುಗೂ ಬಿಜೆಪಿ ನಾಯಕರೊಂದಿಗೆ ಒಳ್ಳೆಯ ಸಂಪರ್ಕವಿದೆ ಎಂದು ಸುಳ್ಳು ಹೇಳಿದ್ದ.‌ ಕೆಲ ದಿನಗಳ ಬಳಿಕ ಕರ್ನಾಟಕದಲ್ಲಿ ಬಿಜೆಪಿಯಿಂದ ಸರ್ವೆ ನಡೆಸುತ್ತಿದ್ದು, ಸರ್ವೆಯಲ್ಲಿ ನಿಮ್ಮ ಪತ್ನಿಯ ಹೆಸರು ಎರಡನೇ ಸ್ಥಾನದಲ್ಲಿದೆ. ಮೊದಲ ಹೆಸರು ಮಾಡಿ ಅಮಿತ್ ಶಾ ಹಾಗೂ ಅರುಣ್ ಸಿಂಗ್ ಅವರಿಗೆ ಫೈನಲ್ ವರದಿ ನೀಡುತ್ತೇನೆ.‌

ಆದರೆ‌‌, ಇದಕ್ಕೆ ಹಣ ಖರ್ಚಾಗಲಿದ್ದು 25 ಲಕ್ಷ ಹಣ ನೀಡಿದರೆ ಟಿಕೆಟ್ ಫೈನಲ್ ಮಾಡಿಕೊಡುವೆ ಎಂದು ಆಶ್ವಾಸನೆ ನೀಡಿದ್ದಾನೆ. ಆಡಿದ ಮಾತಿನಂತೆ ತಿಮ್ಮಪ್ಪ ರೆಡ್ಡಿ 21 ಲಕ್ಷ ಹಣ ಪಾವತಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಘೋಷಣೆ ಪಟ್ಟಿಯಲ್ಲಿ ಗಾಯತ್ರಿ ತಿಮ್ಮಪ್ಪ ಹೆಸರು ಮಿಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ನೀಡಿದ ಹಣ ನೀಡುವಂತೆ ಕೇಳಿದಾಗ ಹಣ ವಾಪಸ್ ನೀಡುವುದಾಗಿ ಮೂರು ತಿಂಗಳಿಂದ ಸತಾಯಿಸಿದ್ದಾರೆ.‌ ಈ ಬಗ್ಗೆ ಅಶೋಕನಗರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

ಬ್ಲ್ಯಾಕ್ ಅಂಡ್​​ ವೈಟ್ ಮನಿ ಹೆಸರಿನಲ್ಲಿ ರೈತನಿಗೆ ವಂಚನೆ: ಬೆಳಗಾವಿ ಜಿಲ್ಲೆಯ ಸಂಗಣ್ಣಕೇರಿ ಗ್ರಾಮದ ಲಕ್ಷ್ಮಿ ರಾಮಪ್ಪ ಕಂಕನವಾಡಿ, ಹಳದೂರು ಗ್ರಾಮದ ಈರಣ್ಣ ರುದ್ರಪ್ಪ ಕೌಜಲಗಿ, ಹಲಗಾ ಗ್ರಾಮದ ಅಪ್ಪಾಸಾಹೇಬ ಚಿಂಚಲ್ ಹಾಗೂ ಚಿಕ್ಕೋಡಿಯ ಸುನೀಲ್​ ದೊಡ್ಡಮನಿ ಎನ್ನುವ ಬಂಧಿತ ಆರೋಪಿಗಳು ಬಬಲೇಶ್ವರದ ರೈತ ಚಂದ್ರಶೇಖರ ಕನ್ನೂರ ಎಂಬುವರಿಗೆ 20 ಲಕ್ಷ ರೂ. ವಂಚಿಸಿದ್ದರು. ರೈತ ಚಂದ್ರಶೇಖರನ ಸ್ನೇಹ ಸಂಪಾದಿಸಿ ತಮ್ಮ ಬಳಿ ಸಾಕಷ್ಟು ಬ್ಲ್ಯಾಕ್ ಮನಿ ಇದ್ದು, ಅದನ್ನು ವೈಟ್ ಮಾಡಿಕೊಟ್ಟರೆ ಮೂರು ಪಟ್ಟು ಹಣ ನೀಡುತ್ತೇವೆ ಎಂದಿದ್ದರು.

ಹಣದ ಆಸೆಗೆ ಒಪ್ಪಿದ್ದ ರೈತನಿಗೆ ಮೊದಲು 5000 ಹಣ ಚಲಾಯಿಸಿ ನಂಬಿಕೆ ಹುಟ್ಟಿಸಿದ್ದರು. ನಂತರ ಅತಾಲಟ್ಟಿ ಗ್ರಾಮದ ಬಳಿ ಭೇಟಿಯಾಗಿ 20 ಲಕ್ಷ ರೂ. ನಗದು ಪಡೆದಿದ್ದರು. ಆತನ ಕೈಗೆ ಒಂದು ಬಾಕ್ಸ್​ ನೀಡಿ 1ಕೋಟಿ ರೂ. ಇದೆ ಎಂದು ನಂಬಿಸಿ ಅಲ್ಲಿಂದ ಕಾಲ್ಕತ್ತಿದ್ದರು. ಬಾಕ್ಸ್​ ತೆಗೆದು ನೋಡಿದಾಗ ಅದರಲ್ಲಿ ರಟ್ಟು ತುಂಬಿದ್ದದು ನೋಡಿ ಮೋಸ ಹೋಗಿರುವುದು ರೈತನಿಗೆ ತಿಳಿಯಿತು. ಬಳಿಕ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ವಂಚಿಸಿದ ಕಳ್ಳರನ್ನು ಬಂಧಿಸಿದ್ದರು.

ಇದನ್ನೂ ಓದಿ: ಚೈತ್ರಾ ಕುಂದಾಪುರ ಪ್ರಕರಣ: ಹಣ‌‌ ಕೇಳಿದ್ದಕ್ಕೆ ಹೈಡ್ರಾಮ ಸೃಷ್ಟಿಸಿದ ಆರೋಪಿ ಗಗನ್

Last Updated : Sep 16, 2023, 1:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.