ETV Bharat / state

ನೀರು ಪೂರೈಕೆ ಶುಲ್ಕ ಜಲಮಂಡಳಿಗೆ ಪಾವತಿಸದೇ ವಂಚನೆ ಆರೋಪ: 13 ಜನ ಅಧಿಕಾರಿಗಳು, ಸಿಬ್ಬಂದಿ ಅಮಾನತು - ಈಟಿವಿ ಭಾರತ ಕನ್ನಡ

ನೀರು ಪೂರೈಕೆ ಶುಲ್ಕ ವಸೂಲಿ ಜಲಮಂಡಳಿಗೆ ಪಾವತಿಸದೆ ವಂಚನೆ ಆರೋಪ- ಇಂಜಿನಿಯರ್​ ಸಿಬ್ಬಂದಿ ಸೇರಿ 13 ಮಂದಿ ಅಧಿಕಾರಿಗಳು ಅಮಾನತು

fraud-by-not-paying-water-supply-charges-to-water-board-13-officers-were-suspended
ನೀರು ಪೂರೈಕೆ ಶುಲ್ಕ ಜಲಮಂಡಳಿಗೆ ಪಾವತಿಸದೇ ವಂಚನೆ: 13 ಜನ ಅಧಿಕಾರಿಗಳು ಸಿಬ್ಬಂದಿ ಅಮಾನತು
author img

By

Published : Jan 5, 2023, 9:56 PM IST

ಬೆಂಗಳೂರು : ನೀರು ಪೂರೈಕೆ ಶುಲ್ಕ ವಸೂಲಿ ಮಾಡಿ ಜಲಮಂಡಳಿಗೆ ಪಾವತಿಸದೆ ವಂಚಿಸುತ್ತಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಲಮಂಡಳಿಯ 13 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಿ ಜಲಮಂಡಳಿ ಅಧ್ಯಕ್ಷ ಜಯರಾಂ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಜಲಮಂಡಳಿಯಿಂದ ನೀರು ಪೂರೈಕೆ ಶುಲ್ಕವನ್ನು ನಗದು ಅಥವಾ ಡಿಡಿ, ಚೆಕ್‌ ಮೂಲಕ ವಸೂಲಿ ಮಾಡಲಾಗುತ್ತಿತ್ತು. ಹೀಗೆ ವಸೂಲಿ ಮಾಡಿದ ಹಣವನ್ನು ಜಲಮಂಡಳಿಯ ನಗದು ಪುಸ್ತಕದಲ್ಲಿ ನೋಂದಾಯಿಸುವುದರ ಜೊತೆ ಜೊತೆಗೆ ತಂತ್ರಾಂಶದಲ್ಲಿ ಗ್ರಾಹಕರ ಖಾತೆಯಲ್ಲಿ ಅದನ್ನು ನಮೂದಿಸಬೇಕಿತ್ತು.ಬಳಿಕ ಹಣವನ್ನು ಜಲಮಂಡಳಿಯ ಬ್ಯಾಂಕ್ ಖಾತೆಗೆ ಪಾವತಿಸಬೇಕಿತ್ತು. ಆದರೆ, 2016ರಿಂದ 2018ರವರೆಗೆ 850 ಕ್ಕೂ ಹೆಚ್ಚಿನ ಗ್ರಾಹಕರಿಂದ ವಸೂಲಿಯಾದ ನೀರಿನ ಶುಲ್ಕವನ್ನು ಜಲಮಂಡಳಿ ಬ್ಯಾಂಕ್‌ ಖಾತೆಗೆ ಪಾವತಿಸದೆ, ತಂತ್ರಾಂಶದಲ್ಲಿ ಗ್ರಾಹಕರ ಖಾತೆಯಲ್ಲಿ ಹಣ ಪಾವತಿಸಲಾಗಿದೆ ಎಂದು ನಮೂದಿಸಿ ವಂಚಿಸಿದ ಪ್ರಕರಣ ಕಳೆದ ತಿಂಗಳು ಬೆಳಕಿಗೆ ಬಂದಿತ್ತು.

ಜಲಮಂಡಳಿಗೆ ಹಣ ಪಾವತಿಸದೆ ವಂಚನೆ : ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಮಂಡಳಿಯು ಸಹಾಯಕ ನಿಯಂತ್ರಕರು (ಲೆಕ್ಕ) ನೇತೃತ್ವದಲ್ಲಿ 3 ತಂಡಗಳನ್ನು ರಚಿಸಿ ಪರಿಶೋಧನೆಗೆ ಸೂಚಿಸಲಾಗಿತ್ತು. ಪರಿಶೋಧನೆಯ ಮಧ್ಯಂತರ ವರದಿ ಬಂದಿದ್ದು, ಅಂದಾಜು 1.75 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಬಿಲ್ ಮೊತ್ತ ವಸೂಲಿಯಾಗಿದೆ ಎಂದೂ ತಿಳಿದುಬಂದಿತ್ತು.

ಇಂಜಿನಿಯರ್​ ಹಾಗೂ ಸಿಬ್ಬಂದಿಗಳ ಅಮಾನತು : ಸಹಾಯಕ ನಿಯಂತ್ರಕರ ನೇತೃತ್ವದ ತಂಡಗಳು ನೀಡಿದ ಮಧ್ಯಂತರ ವರದಿಯನ್ನಾಧರಿಸಿ ಕಾರ್ಯನಿರ್ವಾಹಕ ಅಭಿಯಂತರ ಆರ್ .ಶ್ರೀನಿವಾಸ್, ನಾಗೇಂದ್ರ, ವಿ.ಸ್ನೇಹಾ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕೆ.ವಿಶ್ವನಾಥ್, ಸಚಿನ್‌ ಪಾಟೀಲ್, ಹಿರಿಯ ಸಹಾಯಕ ಸಿ. ಸೋಮಶೇಖರ್, ಎಂ.ಗೀತಾ, ಸಹಾಯಕ ರಾಮಪ್ಪ ಮಡಿವಾಳದ, ಭರತ್ ಕುಮಾರ್, ಕಂದಾಯ ವ್ಯವಸ್ಥಾಪಕ ನಾಗರಾಜ್, ಭೀಮಶಂಕರ, ಎನ್.ರುದ್ರೇಶ್, ಸಹಾಯಕ ಕಲ್ಯಾಣ ಅಧಿಕಾರಿ ಎಸ್‌. ಯೋಗೇಶ್ ಎನ್ನುವವರನ್ನು ಜಲಮಂಡಳಿ ಅಧ್ಯಕ್ಷ ಜಯರಾಂ ಅಮಾನತು ಮಾಡಿದ್ದಾರೆ.

ಮಂಡಳಿಯ ಎಂಜಿನಿಯರ್ ಗಳು ಸೇರಿ ಅಧಿಕಾರಿಗಳು ಮಾತ್ರ ಬಳಸುತ್ತಿದ್ದ ತಂತ್ರಾಂಶದ ಲಾಗಿನ್ ಐಡಿ ಮತ್ತು ಪಾಸ್‌ ವರ್ಡನ್ನು ಗುತ್ತಿಗೆ ನೌಕರರು ದುರ್ಬಳಕೆ ಮಾಡಿಕೊಂಡು ಮಂಡಳಿಗೆ ವಂಚಿಸಲಾಗಿದೆ ಎಂದೂ ಉಲ್ಲೇಖಿಸಲಾಗಿದೆ. ಮಂಡಳಿಯ ಒಟ್ಟು 45 ವಿಭಾಗದಲ್ಲಿ ಈ ರೀತಿ ವಂಚನೆ ಆಗಿದೆ. ಬೊಮ್ಮನಹಳ್ಳಿ ವಲಯದಲ್ಲಿ ಅತಿ ಹೆಚ್ಚು ಹಣ ದುರ್ಬಳಕೆ ಆಗಿದೆ ಜಲಮಂಡಳಿಯ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ : ನೀರಿನ ಶುಲ್ಕ ಏರಿಕೆಗೆ ಜಲಮಂಡಳಿ ಪ್ರಸ್ತಾವನೆ: ಸದ್ಯದಲ್ಲೇ ಮತ್ತೊಂದು ಶಾಕ್?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.