ಬೆಂಗಳೂರು: ದೇಶದ ಜನತೆ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಸಮರ ಸಾರಬೇಕು. ಈ ಮೂಲಕ ವಿಶ್ವಕ್ಕೆ ಮಾದರಿಯಾಗಬೇಕು. ಪ್ರಧಾನಿ ಮೋದಿಯವರ ಕರೆಯಂತೆ ನಾಳೆ ( ಏ. 5) ರಾತ್ರಿ 9 ಗಂಟೆ 9 ನಿಮಿಷಕ್ಕೆ ದೀಪ, ಟಾರ್ಚ್ ಬೆಳಗಿಸುವ ಮೂಲಕ ಸೋಂಕಿನ ವಿರುದ್ಧ ಹೋರಾಡೋಣ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.
ಲಾಕ್ಡೌನ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮುಖ್ಯ ಉದ್ದೇಶವೇ ಸೋಂಕನ್ನು ಇಲ್ಲವಾಗಿಸುವುದು. ಎಲ್ಲರೂ ತಮ್ಮ ಮನೆ ಒಳಗಡೆ ಮೋದಿಯವರ ಕರೆಯನ್ನು ಬೆಂಬಲಿಸಿ ಎಂದರು.
ಕಣ್ಣಿಗೆ ಕಾಣದ ಶತೃ ವಿರುದ್ಧ ನಾವು ನಡೆಸುತ್ತಿರುವ ಬೆಳಕಿನ ರಣಕಹಳೆ ಇದು. 130 ಕೋಟಿ ಪ್ರಜೆಗಳು ಈ ಹೋರಾಟದಲ್ಲಿ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರುವ ಸಮಯ ಇದು. ದೀಪ ಬೆಳಗಿಸೋಣ, ಕೊರೊನಾ ಹೋಗಲಾಡಿಸೋಣ ಎಂದರು.