ETV Bharat / state

ಬೈಲಾ ತಿದ್ದುಪಡಿಗಳಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸರ್ವ ಸದಸ್ಯರ ಸಭೆ ಒಪ್ಪಿಗೆ..

ಕರ್ನಾಟಕ ಬ್ರಾಹ್ಮಣ ಮಹಾಸಭಾ ಸರ್ವ ಸದಸ್ಯರ ಸಭೆ, ಅಧ್ಯಕ್ಷರ ಅವಧಿಯನ್ನು ಈಗಿನ ಮೂರು ವರ್ಷಗಳಿಂದ ಐದು ವರ್ಷಗಳಿಗೆ ಹೆಚ್ಚಿಸುವುದೂ ಸೇರಿದಂತೆ ಹಲವು ಮಹತ್ವದ ಬೈಲಾ ತಿದ್ದುಪಡಿಗಳಿಗೆ ಒಪ್ಪಿಗೆ ನೀಡಿದೆ.

all-karnataka-brahmin-mahasabha-function-in-bengaluru
ಬೈಲಾ ತಿದ್ದುಪಡಿಗಳಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸರ್ವ ಸದಸ್ಯರ ಸಭೆ ಒಪ್ಪಿಗೆ..
author img

By

Published : Mar 26, 2023, 9:39 PM IST

ಬೆಂಗಳೂರು: ಅಧ್ಯಕ್ಷರ ಅವಧಿಯನ್ನು ಈಗಿನ ಮೂರು ವರ್ಷಗಳಿಂದ ಐದು ವರ್ಷಗಳಿಗೆ ಹೆಚ್ಚಿಸುವುದೂ ಸೇರಿದಂತೆ ಹಲವು ಮಹತ್ವದ ಬೈಲಾ ತಿದ್ದುಪಡಿಗಳಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸರ್ವ ಸದಸ್ಯರ ಸಭೆ ಸರ್ವಾನುಮತದ ಒಪ್ಪಿಗೆ ನೀಡಿದೆ. ಬಸವನಗುಡಿಯ ಆಚಾರ್ಯ ಪಾಠ ಶಾಲಾ ಕಾಲೇಜು ಆವರಣದಲ್ಲಿ ಭಾನುವಾರ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿಯವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸರ್ವ ಸದಸ್ಯರ ಸಭೆ ಹಾಗೂ 41 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಬೈಲಾಕ್ಕೆ ಸಂಬಂಧಿಸಿದ ಕೆಲವು ಮಹತ್ವದ ತಿದ್ದುಪಡಿಗಳನ್ನು ಸಭೆ ಅನುಮೋದಿಸಿತು.

ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿ, ಮಹಾಸಭಾದ ಬೈಲಾ ದಶಕಗಳ ಹಿಂದೆ ರಚನೆಗೊಂಡಿದ್ದು ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ತಿದ್ದುಪಡಿಯ ಅವಶ್ಯಕತೆಯಿದೆ. ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ತಜ್ಞರು, ಅನುಭವಿ ವಕೀಲರು, ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರನ್ನೊಳಗೊಂಡ ಸಮಿತಿ ಸಮಗ್ರ ಅಧ್ಯಯನ ನಡೆಸಿ ತಿದ್ದುಪಡಿಗೆ ಸಂಬಂಧಿಸಿದಂತೆ ಸೂಚಿಸಿದ ಶಿಫಾರಸುಗಳನ್ನು ಅಳವಡಿಸಿಕೊಂಡು ಬೈಲಾಕ್ಕೆ ತಿದ್ದುಪಡಿ ತರಲಾಗಿದೆ. ತಿದ್ದುಪಡಿಯನ್ನು ಕಾರ್ಯಕಾರಿ ಸಮಿತಿ ಮುಂದಿಟ್ಟು ಚರ್ಚೆ ನಡೆಸಿ ಒಪ್ಪಿಗೆ ಪಡೆಯಲಾಗಿದೆ ಎಂದು ವಿವರಿಸಿದರು.

ಸದಸ್ಯತ್ವ ಶುಲ್ಕ ಹೆಚ್ಚಳ: ಸದಸ್ಯತ್ವ ಶುಲ್ಕವನ್ನು ಈಗಿನ 10 ಸಾವಿರ ರೂ. ಗಳಿಂದ 50 ಸಾವಿರ ರೂ.ಗಳಿಗೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಯಿತು. ನಿಗದಿತ ಕೇಂದ್ರಗಳಿಂದ ಮಹಾ ಸಭಾ ಆಧ್ಯಕ್ಷರ ಚುನಾವಣೆಗೆ ಮತ ಚಲಾಯಿಸುವ ಸಂಬಂಧದ ತಿದ್ದುಪಡಿಗೂ ಅನುಮೋದನೆ ನೀಡಲಾಯಿತು.

ಭಾನುವಾರ ನಗರದ ಆಚಾರ್ಯ ಪಾಠಶಾಲೆ ಸಾಂಗಣದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಸಮಾಜದ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಶೋಕ ಹಾರನಹಳ್ಳಿ ಭಾರತೀಯ ಮಹಿಳೆಯರು ಸಂಸ್ಕೃತಿಯ ಬುನಾದಿಯಾಗಿದ್ದಾರೆ. ಬ್ರಾಹ್ಮಣ ಕುಟುಂಬಗಳು ಪರಂಪರೆಯಲ್ಲಿ ಸಂಸ್ಕಾರವಂತರಾಗಿ ಉಳಿದಿರುವುದು ಕೇವಲ ಮಹಿಳೆಯರಿಂದ, ನಮ್ಮ ಸಮಾಜದಲ್ಲಿ ಕುಟುಂಬವನ್ನು ಹಿಡಿದಿಡಲು ಇವರ ಪಾತ್ರ ಹಿರಿದಾಗಿದೆ ಎಂದರು.

ಮಹಿಳೆಯರು ಬೇಕಾದನ್ನು ಮಾಡಬಲ್ಲ ಸಾಮರ್ಥ್ಯವುಳ್ಳವರು, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅವರು ಸಾಧನೆಗೈದಿದ್ದಾರೆ ಮತ್ತು ಅದು ಮುಂದುವರೆಯುತ್ತಾ ಬಂದಿದೆ. ಕುಟುಂಬಕ್ಕೆ ಶಕ್ತಿಯಾಗಿ ಸಂಸಾರವನ್ನು ನಡೆಸುವ ಸಾಮರ್ಥ್ಯವಿದೆ. ನಮ್ಮ ಸನಾತನ ಧರ್ಮದಲ್ಲಿ ದೊಡ್ಡ ಸ್ಥಾನ ನೀಡಲಾಗಿದೆ. ಬ್ರಾಹ್ಮಣ ಕುಟುಂಬದ ಹೆಣ್ಣು ಮಕ್ಕಳು ಸಮಾಜದಲ್ಲಿ ವಿಭಿನ್ನ ರೀತಿಯ ಪರಿಸ್ಥಿತಿಯಿದೆ. ಆ ದೃಷ್ಟಿಯಲ್ಲಿ ಬ್ರಾಹ್ಮಣ ಸಭಾದಿಂದ ರಾಜ್ಯ ಮಟ್ಟದ ಸಮಾವೇಶದ ದಿನಾಂಕವನ್ನು ಶೀಘ್ರದಲ್ಲಿ ನಿಗದಿ ಮಾಡುತ್ತೇವೆ. ಈ ಸಮಯದಲ್ಲಿ ವಿವಿಧ ಕ್ಷೇತ್ರಗಳ ಮಹಿಳೆಯರೊಂದಿಗೆ ದೊಡ್ಡ ಸಮಾವೇಶ ಮಾಡಲು ನಿರ್ಧರಿಸಿದ್ದೇವೆ. ಸಾಮಾನ್ಯ ಸಮಾವೇಶದಲ್ಲಿ ಅವರಿಗೆ ಪ್ರಾತಿನಿದ್ಯ ಸಿಗುವುದಿಲ್ಲ ಆದ್ದರಿಂದ ವಿಶೇಷವಾಗಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ಮಹಿಳೆಯರು ಧೈರ್ಯ ಮತ್ತು ದೃಢತೆಯನ್ನು ಬೆಳೆಸಿಕೊಳ್ಳಬೇಕು: ಪ್ರಾಧ್ಯಾಪಕಿ ಮತ್ತು ವಿಶ್ವೇಶ್ವರ ಸಹಕಾರಿ ಬ್ಯಾಂಕ್‌ ಅಧ್ಯಕ್ಷೆ ರೇಖಾ ಲಕ್ಷ್ಮಣ್ ಮಾತನಾಡಿ, ಮಹಿಳೆಯ ಸಬಲೀಕರಣವು ಎಲ್ಲಾ ಕ್ಷೇತ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಹಿಳೆ ಸ್ವಾವಲಂಬಿಯಾಗಿ ತಮ್ಮ ಸ್ವಂತ ಹಣದಿಂದ ನಿಲ್ಲುವಂತಾಗಿ, ಸ್ವಾತಂತ್ರಳಾಗಬೇಕು. ಹಾಗಾಗಿ ಸರ್ಕಾರದ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ತಮ್ಮದೇ ಶೈಲಿಯ ಸ್ವಉದ್ಯೋಗವನ್ನು ರೂಪಿಸಿಕೊಳ್ಳಬಹುದಾಗಿದೆ. ಇದೆಲ್ಲಕ್ಕಿಂತ ಮೊದಲು ಆಕೆ ಧೈರ್ಯ ಮತ್ತು ದೃಢತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ವೇಳೆ ಅನೇಕ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಉಷಾ ಹಾರನಹಳ್ಳಿ, ಆಯುರ್ವೇದ ವೈದ್ಯೆ ಡಾ. ಗೌರಿ ಸುಬ್ರಮಣ್ಯ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಸಾಮಾಜಿಕವಾಗಿ ಹಾಗೂ ಬೌದ್ಧಿಕವಾಗಿ ಶಕ್ತಿ ತುಂಬುವವಳು ತಾಯಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.